Breaking News

10 ಜನರ ತಂಡದಿಂದ ಯುವಕನ ಮೇಲೆ ಹಲ್ಲೆ

ಧಾರವಾಡ: 10 ಜನರ ತಂಡವೊಂದು ಯುವಕನೊಬ್ಬನ ಮೇಲೆ ತಮ್ಮ ಮನೆಯ ಮಹಿಳೆಯ ಜೊತೆ ಫೋನಿನಲ್ಲಿ ಮಾತನಾಡಿದ್ದಾನೆಂದು ಆರೋಪಿಸಿ ಮೂಳೆ ಮುರಿಯುವಂತೆ ಹೊಡೆದ ಘಟನೆ ತಾಲೂಕಿನ ವೆಂಕಟಾಪುರ ಗ್ರಾಮದ ಮಾವಿನ ತೋಪೊಂದರಲ್ಲಿ ನಡೆದಿದೆ.

ಇಮಾಮ್‌ಸಾಬ್ ದೇವರಮನಿ (34) ಎಂಬ ವ್ಯಕ್ತಿಯೇ ಹಲ್ಲೆಗೆ ಒಳಗಾದವನು. ಈತ ವೃತ್ತಿಯಿಂದ ಟಂಟಂ ಚಾಲಕನಾಗಿದ್ದಾನೆ. ಇಮಾಮ್‌ಸಾಬ್ ತಮ್ಮ ಮನೆಯ ಹೆಣ್ಣು ಮಗಳೊಂದಿಗೆ ಫೋನಿನಲ್ಲಿ ಮಾತನಾಡಿದ್ದಾನೆಂದು ಆರೋಪಿಸಿ ಕೋಟೂರು ಗ್ರಾಮದ ಅಗಸಿಮನಿ ಎಂಬ ಕುಟುಂಬದ ಅಸ್ಲಾಂ, ಇಸಾಕ್, ಶಕೀಲ್, ಹಜರುದ್ದೀನ್, ಮುಜಮಿಲ್ ಸೇರಿದಂತೆ 10 ಜನರ ತಂಡ ಇಮಾಮ್‌ಸಾಬ್‌ನನ್ನು ವೆಂಕಟಾಪುರ ಗ್ರಾಮದ ಮಾವಿನ ತೋಪಿಗೆ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದೆ. ಇದರಿಂದ ಇಮಾಮ್‌ ಸಾಬ್‌ನ ಎರಡೂ ಕೈಗಳ ಮೂಳೆಗಳು ಮುರಿದಿವೆ. ಸದ್ಯ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಇಮಾಮ್‌ಸಾಬ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಗರಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *