Breaking News

BigTv News

ಸಮುದಾಯದ ಅಭಿವೃದ್ದಿಯು ಶಿಕ್ಷಣ ಮತ್ತು ದುಡಿಮೆಯಿಂದ ಸಾಧ್ಯ: ಬಸವರಾಜ ರಾಯರೆಡ್ಡಿ

ಯಲಬುರ್ಗಾ: ಸಮುದಾಯದ ಅಭಿವೃದ್ಧಿಯು ಶಿಕ್ಷಣ ಮತ್ತು ದುಡಿಮೆಯಿಂದ ಸಾಧ್ಯ. ಜತೆಗೆ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಬಹುಮುಖ್ಯ ಪಾತ್ರವಾಗುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು. ಪಟ್ಟಣದಲ್ಲಿ ಜಿಲ್ಲಾ ಗಾಣಿಗ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಾಣಿಗ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಪ್ರದೇಶದಲ್ಲಿ ನಿವೇಶನ ಒದಗಿಸಿದರೆ ₹8 ಕೋಟಿ ಅನುದಾನ ನೀಡಲಾಗುವುದು. ಈ ಬಗ್ಗೆ ಸಮುದಾಯದ ಮುಖಂಡರು …

Read More »

ತೆಲಂಗಾಣ ಗಡಿಭಾಗದ ಗಣಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ

ಚಿಂಚೋಳಿ: ತೆಲಂಗಾಣದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮದ ಮೊಹ್ಮದ್ ಗೌಸ್ ಮೊಹ್ಮದ್ ಒಸ್ಮಾನ್ ಗೆ ಸೇರಿದ ಸರ್ವೇ ನಂಬರ್ 109//1 ರ 1 ಎಕರೆ ಹಾಗೂ ಅಬ್ದುಲ್ ರವೂಫ್ ಅಬ್ದುಲ್ ನಬೀಸಾಬ್ ಗೆ ಸೇರಿದ ಸರ್ವೇ ನಂಬರ್ 106//1 ರ 4 ಎಕರೆ 37 ಗುಂಟೆ ಕೃಷಿ ಜಮೀನು ಮಾರ್ಪಡಿಸಿ ಶಾಹಬಾದ ಕಲ್ಲು ಗಾಣಿಗರಿಕೆ ನಡೆಸುವ ಅನುಮತಿ ಕೋರಿ ಸಲ್ಲಿಸಿದ ಅನುಮತಿಗಾಗಿ ರಾಜ್ಯ ಪರಿಸರ ಮಾಲಿನ್ಯ …

Read More »

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಡಾ.ಕಸ್ತೂರಿ ರಂಗನ್‌ ವರದಿ ಜಾರಿಯಿಲ್ಲ: ಕರ್ನಾಟಕ ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ಮೊದಲಿನಿಂದಲೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿ ರಂಗನ್‌ ವರದಿಯನ್ನು ವಿರೋಧಿಸುತ್ತಲೇ ಬಂದಿರುವ ಕರ್ನಾಟಕವು ಇದನ್ನು ಜಾರಿಗೊಳಿಸದಿರಲು ನಿರ್ಧಿರಿಸಿದೆ. ಕರ್ನಾಟಕದಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸುಮಾರು ಹನ್ನೊಂದು ಜಿಲ್ಲೆಗಳ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕಸ್ತೂರಿ ರಂಗನ್‌ ವರದಿಯನ್ನು ಅನುಷ್ಠಾನಗೊಳಿಸದೇ ಸಂಪೂರ್ಣವಾಗಿ ವಿರೋಧಿಸುವ ನಿರ್ಧಾರಕ್ಕೆ ಬರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಕಸ್ತೂರಿ ರಂಗನ್‌ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಲು ನಿರ್ಣಯಿಸಿತು. …

Read More »

ಜಪಾನ್ ನ ನೂತನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆ

ಜಪಾನ್: ಜಪಾನ್ ನ ನೂತನ ಪ್ರಧಾನಿಯಾಗಿ ಶಿಗೆರು ಇಶಿಬಾ ಆಯ್ಕೆಯಾಗಿದ್ದಾರೆ. ಜಪಾನಿನ ಮಾಜಿ ರಕ್ಷಣಾ ಸಚಿವ ಶಿಗೆರು ಇಶಿಬಾ ಅವರು ಫ್ಯೂಮಿಯೊ ಕಿಶಿಡಾ ಅವರ ನಂತರ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ಹೊಸ ಪ್ರಧಾನಿಯಾಗಲಿದ್ದಾರೆ. ಜಪಾನ್ ನ ಮೊದಲ ಮಹಿಳಾ ಪ್ರಧಾನಿಯಾಗಲು ಕಣ್ಣಿಟ್ಟಿದ್ದ ಆರ್ಥಿಕ ಭದ್ರತಾ ಸಚಿವ ಸನೇ ತಕೈಚಿ ಅವರನ್ನು 194 ವಿರುದ್ಧ 215 ಮತಗಳೊಂದಿಗೆ ಇಶಿಬಾ ಸೋಲಿಸಿದ್ದಾರೆ.ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯಿಜುಮಿ ಅವರ ಪುತ್ರ ಶಿಂಜಿರೊ …

Read More »

ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಸುಕನ್ಯಾ ಸಮೃದ್ಧ ಯೋಜನೆ

ನವದೆಹಲಿ: ಹೆಣ್ಣು ಮತ್ತು ಗಂಡು ಮಧ್ಯೆ ಬೌದ್ಧಿಕ ಅಂತರ ಉಳಿದಿಲ್ಲ. ಮೊದಲಿದ್ದಂತೆ ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತವಾಗಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಗಂಡಿಗೆ ಸರಿಸಮಾನವಾಗಿ ನಿಲ್ಲಲು ಹೆಣ್ಣು ನಿರಂತರ ಪ್ರಯತ್ನ ಮಾಡುತ್ತಿದ್ದಾಳೆ. ಹೆಣ್ಣು ಮಕ್ಕಳು ಈಗ ಅಬಲೆಯಾಗಿ ಉಳಿದಿಲ್ಲ. ಸರ್ಕಾರ ಕೂಡ ವಿವಿಧ ಯೋಜನೆಗಳ ಮೂಲಕ ಹೆಣ್ಮಕ್ಕಳನ್ನು ಬಲಾಢ್ಯಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಭಾರತದ ಆರ್ಥಿಕತೆ ಅಗಾಧವಾಗಿ ಬೆಳೆಯಲು ಶುರುವಾಗಿರುವ ಈ ಹೊತ್ತಲ್ಲಿ ಮತ್ತು ಮುಂಬರುವ ವರ್ಷಗಳಲ್ಲಿ ದೇಶದ ಉನ್ನತಿಗೆ …

Read More »

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ

ಮುಂಡರಗಿ: ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕು ಎನ್ನುವ ಕಾರಣದಿಂದ ಸರ್ಕಾರ ತಾಲ್ಲೂಕಿನ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸುತ್ತಲಿದೆ. ರೈತರು ಅದರ ಸದುಪಯೋಗ ಪಡೆದುಕೊಂಡು ಹೆಚ್ಚು ಆದಾಯ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದರು. ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ತಾಲ್ಲೂಕಿನ ರೈತರಿಗೆ ರಿಯಾಯಿತಿ ದರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ …

Read More »

ಕಾರ್ಮಿಕರ ಕನಿಷ್ಠ ವೇತನ ದರ ಏರಿಕೆ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ದಿನೇದಿನೇ ಏರಿಕೆಯಾಗುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ನೆರವಾಗುವ ಸಲುವಾಗಿ ನಿಟ್ಟಿನಲ್ಲಿ ಕನಿಷ್ಠ ವೇತನ ದರವನ್ನು 1,035 ರು.ವರೆಗೂ ಏರಿಕೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವೇರಿಯಬಲ್ ಡಿಯರ್‌ನೆಸ್‌ ಅಲೊಯನ್ಸ್ ಪರಿಷ್ಕರಿಸುವ ಮೂಲಕ ಈ ಹೆಚ್ಚಳ ಮಾಡಲಾಗಿದೆ. ಹೊಸ ದರ ಅ.1ರಿಂದ ಜಾರಿಗೆ ಬರಲಿದೆ. ಹೊಸ ವೇತನದ ಪ್ರಕಾರ ಕೌಶಲ್ಯರಹಿತ ಕೆಲಸಗಾರರಿಗೆ ದಿನಕ್ಕೆ 783 ರೂಪಾಯಿ, ಅರೆಕುಶಲ ಕೆಲಸಗಾರರಿಗೆ 868 ರೂಪಾಯಿ, ಕೌಶಲ್ಯ ಬೇಡುವ ಕೆಲಸಗಳಿಗೆ 954 …

Read More »

ಎಥೆನಾಲ್ ಬೆಲೆ ಮತ್ತು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಹೆಚ್ಚಿಸಲು ಸರ್ಕಾರ ಚಿಂತನೆ

ನವದೆಹಲಿ: 2024-25 ನೇ ಸಾಲಿನಲ್ಲಿ ಎಥೆನಾಲ್ ಬೆಲೆಯನ್ನು ಮತ್ತು ಸಕ್ಕರೆಯ ಕನಿಷ್ಠ ಮಾರಾಟದ ಬೆಲೆಯನ್ನು ಹೆಚ್ಚಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಆಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಎಥೆನಾಲ್ ಬೆಲೆ ಏರಿಕೆಯ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಪೆಟ್ರೋಲಿಯಂ ಸಚಿವಾಲಯವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಮಾಹಿತಿ ನೀಡಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸುತ್ತಿದೆ. ಫೆಬ್ರವರಿ 2019 ರಲ್ಲಿ ಕೆಜಿಗೆ 31 …

Read More »

ಸತತ ಮಳೆಯಿಂದಾಗಿ ತೊಗರಿ ಬೆಳೆಗೆ ನೆಟೆ ರೋಗ: ಆತಂಕದಲ್ಲಿ ರೈತರು

ಹುಲಸೂರ: ಸತತ ಸುರಿಯುತ್ತಿರುವ ಮಳೆಯಿಂದ ಮಾಂಜ್ರಾ ತೀರದ ಎರೆ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬಿತ್ತನೆ ಮಾಡಿದ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗುವ ಭೀತಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪಟ್ಟಣದ ಸೇರಿದಂತೆ ಮಾಂಜ್ರಾ ತೀರದ ಗ್ರಾಮಗಳಾದ ಹಲಸಿ ತುಗಾಂವ, ಕೊಂಗಳಿ, ವಾಂಜರಖೇಡ, ಮೆಹಕರ, ಬೋಳೆಗಾಂವ ನಾರದಾ ಸಂಗಮ, ಅಟ್ಟರಗಾ, ಸಾಯಗಾಂವ, ಹುಲಸೂರ ಜಮೀನುಗಳಲ್ಲಿ ತೊಗರಿ ಬೆಳೆಗಳ ಮಧ್ಯೆ ನಿಂತ ನೀರು ನೆಟೆ ರೋಗಕ್ಕೆ ಆಹ್ವಾನ ನೀಡುತ್ತಿದೆ. ತೊಗರಿ ಗಿಡಗಳಿಗೆ ಅಲ್ಲಲ್ಲಿ …

Read More »

ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ನವದೆಹಲಿ : ಸೂಪರ್ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ಬದ್ಧತೆಗೆ ಅನುಗುಣವಾಗಿ, ಪಿಎಂ ಮೋದಿ ಗುರುವಾರ ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸುಮಾರು 130 ಕೋಟಿ ರೂ.ಗಳ ಮೌಲ್ಯದ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ಬಿಡುಗಡೆ ಮಾಡಿದರು. ಈ ಸೂಪರ್ ಕಂಪ್ಯೂಟರ್ ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪುಣೆಯ ಜೈಂಟ್ ಮೀಟರ್ ರೇಡಿಯೋ …

Read More »