ಬೆಂಗಳೂರು ಸೋಮವಾರ ಮತ್ತೊಂದು ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿಯಾಗಿದೆ. ಪಬ್, ಪಟಾಕಿ ಗೋದಾಮಿನಲ್ಲಿ ಬೆಂಕಿ ದುರಂತ ಬೆನ್ನಲ್ಲೆ ಇದೀಗ ಬಸ್ಗಳಿಗೆ ಬೆಂಕಿ ಬಿದ್ದಿದೆ. ಒಟ್ಟು ಹತ್ತಕ್ಕೂ ಹೆಚ್ಚು ಬಸ್ಗಳು ಬೆಂಕಿಗೆ ಆಹುತಿ ಆಗಿವೆ. ಬೆಂಗಳೂರಿನ ವೀರಭದ್ರ ನಗರದಲ್ಲಿ ಖಾಸಗಿ ಬಸ್ಗಳನ್ನು ನಿಲ್ಲಿಸಲಾಗಿದೆ. ಈ ಬಸ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪಕ್ಕದಲ್ಲಿಯೇ ಶೆಡ್ ಗಳಿದ್ದು, ಬೆಂಕಿ ಹೊತ್ತಿಕೊಂಡ ಬಗ್ಗೆ ನಿಖರ ಕಾರಣ ತಿಳಿದು ಬರಬೇಕಿದೆ. ಸ್ಥಳದಲ್ಲಿ ನಿಲ್ಲಿಸಿರುವ ಎರಡು ಬಸ್ಗಳಿಗೆ ಮೊದಲು ಬೆಂಕಿ …
Read More »ಶೃತಿ ಹಾಸನ್ ಅರೋಗ್ಯ ಕೆಟ್ಟಿದೆ….
ನಟಿ ಶ್ರುತಿ ಹಾಸನ್ ದ್ಯ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಜನಪ್ರಿಯ ನಟಿಯರಲ್ಲಿ ಈಕೆ ಕೂಡ ಒಬ್ಬರಾಗಿ, ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿ ಗೆದ್ದಿದ್ದಾರೆ. ನಟ ಕಮಲ್ ಹಾಸನ್ ಪುತ್ರಿ ಮಾನಸಿಕ ಆರೋಗ್ಯ ಕೆಟ್ಟಿದ್ದು, ಆಲ್ಕೋಹಾಲ್ಗೆ ದಾಸಿಯಾಗಿದ್ದಾರೆ ಅನ್ನೋ ಸುದ್ದಿಗಳೆಲ್ಲ ಹಬ್ಬಿದ್ದವು. ಈ ವಿಚಾರವಾಗಿ ಈ ನಟಿ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದಾಗ ‘ಕುಡಿತದ ಚಟಕ್ಕೆ ಬಿದ್ದಿದ್ದು ಅಪ್ಪ-ಅಮ್ಮನಿಂದಲೇ’ ಎಂದು ಮಾತನಾಡಿದ್ದು, ಸದ್ಯ ಹೇಳಿಕೆಗಳು ವೈರಲ್ ಆಗಿವೆ. 18 ವರ್ಷ …
Read More »ಆಪರೇಷನ್ ಕಮಲದಿಂದ ಬಿಜೆಪಿ ಅಧಿಕಾರ…
ಆಪರೇಷನ್ ಕಮಲವನ್ನು ಅಸ್ತ್ರವನ್ನಾಗಿಸಿಕೊಂಡು ಏಳೆಂಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ, ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು ಬೆಳಗಾವಿ: ಆಪರೇಷನ್ ಕಮಲವನ್ನು ಅಸ್ತ್ರವನ್ನಾಗಿಸಿಕೊಂಡು ಏಳೆಂಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ, ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕ ಘಟಕದಲ್ಲಿ ನಾಯಕತ್ವದ ರೇಸ್ ಇಲ್ಲ, ಬಿಜೆಪಿಯವರಿಗೆ ಬೇರೆಯವರ …
Read More »ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ ಪ್ರೀತಿ ಜಿಂಟಾ…
ಬಾಲಿವುಡ್ನ ಪ್ರೀತಿಯ ನಟಿ, ತನ್ನ ನಗುವಿನಿಂದಲೇ ಹೆಸರುವಾಸಿಯಾದ ನಟಿ ಪ್ರೀತಿ ಜಿಂಟಾ ಈಗ ಮತ್ತೆ ಮುಂಬೈನಲ್ಲಿ ವಾಸವಾಗಲಿದ್ದಾರಾ ಎಂಬ ಸುದ್ದಿ ಹರಡುತ್ತಿದೆ. ರಿಯಲ್ ಎಸ್ಟೇಟ್ ಹೂಡಿಕೆ ಮಾಡುತ್ತಾ ಬಂದಿರುವ ಪ್ರೀತಿ ಜಿಂಟಾ ಮುಂಬೈನಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎಂದು ಈಗ ಸುದ್ದಿಯಾಗಿದೆ. ಈ ಡಿಂಪಲ್ ಹುಡುಗಿ ಮುಂಬೈಗೆ ಮತ್ತೆ ಬರುತ್ತಾರೆ ಎಂಬ ಬಗ್ಗೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಸ್ಪಷ್ಟೀಕರಣ ಲಭ್ಯವಾಗಿಲ್ಲ. ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು ಪ್ರೀತಿ …
Read More »ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ…..
ನಂದಿ ಅವಾರ್ಡ್ಸ ಎಂದರೇ ತಕ್ಷಣ ನೆನಪಿಗೆ ಬರುವುದು ತೆಲುಗು ಚಿತ್ರರಂಗ. ಸೈಮಾ, ಫಿಲ್ಮಂಫೇರ್, ಐಫಾ, ಚಿತ್ತಾರ ಸೇರಿದಂತೆ ಹಲವು ಪ್ರಶಸ್ತಿಗಳಿದ್ದರೂ, ನಂದಿ ರಾಜ್ಯ ಪ್ರಶಸ್ತಿಗೆ ಅದರದ್ದೇ ಒಂದು ತೂಕವಿದೆ. ಆದರೆ, ಕನ್ನಡದಲ್ಲಿ ಇಂತಹ ಒಂದು ಪ್ರಶಸ್ತಿ ನೀಡುತ್ತಿಲ್ಲ ಎಂಬ ಕೊರಗು ಆಗಾಗ್ಗೆ ಕೇಳಿ ಬರುತ್ತಿತ್ತು. ಈಗ ಅದಕ್ಕೆ ಪರಿಹಾರ ಸಿಕ್ಕಿದೆ.ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ನಂದಿ ಪ್ರಶಸ್ತಿ ಲಾಂಛನವನ್ನು ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ದರು. ನೆರೆಯ …
Read More »ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿಟ್ಟು ಗಾಳಿ…
ವ್ಯಕ್ತಿ ಪ್ರಜ್ಞೆ ತಪ್ಪಿದಾಗ ಅವರ ಜೀವ ಉಳಿಸಲು ಪ್ರಥಮ ಚಿಕಿತ್ಸೆಯಾಗಿ CPR ನೀಡುವುದು ನೋಡಿದ್ದೇವೆ, ಆದರೆ ಹಾವಿನ ಪ್ರಾಣ ಉಳಿಸಲು ಮಧ್ಯಪ್ರದೇಶದ ಪೊಲೀಸ್ CPR ಚಿಕಿತ್ಸೆ ನೀಡಿರುವ ವೀಡಿಯೋ ವೈರಲ್ ಆಗಿದೆ. ಪ್ರಜ್ಞೆ ತಪ್ಪಿ ಬಿದ್ದ ಹಾವಿನ ಬಾಯಿಗೆ ಬಾಯಿಟ್ಟು ಗಾಳಿ ಊದಿದ್ದಾರೆ. ಈ ವೀಡಿಯೋದಲ್ಲಿ ಇರುವವರು ಅಥುಲ್ ಶರ್ಮ, ಈ ವೀಡಿಯೋದಲ್ಲಿ ಪೊಲೀಸ್ CPR ಚಿಕಿತ್ಸೆ ನೀಡಿದಾಗ ಅದಕ್ಕೆ ಹಾವು ಸ್ಪಂದಿಸುತ್ತಿರುವುದು ಕಂಡು ಬಂದಿದೆ. ನಂತರ ಹಾಲಿಗೆ ಪ್ರಜ್ಞೆ …
Read More »ಸಭೆಯಲ್ಲಿ ಪಕ್ಷದ ಬಲವರ್ಧನೆ ಬಗ್ಗೆ ಚರ್ಚಿಸಲಾಗಿದೆ….
ಬೆಂಗಳೂರು: ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅವರು ಈ ಬಾರಿಯ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಜೆ. ರಾಮಣ್ಣ ರಾಷ್ಟ್ರೀಯ ಅಧ್ಯಕ್ಷರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಂಗಳೂರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೆಂಗಳೂರು ಕಾರ್ಯಾಲಯದಲ್ಲಿ ದಿನಾಂಕ 26/10/23 ರಂದು ಪಕ್ಷದ ಪದಾಧಿಕಾರಿಗಳು ಸಭೆ ನಡೆಸಲಾಗಿದೆ. …
Read More »ಅಗ್ನಿ ಸುರಕ್ಷತಾ ನಿಯಮ ಉಲ್ಲಂಘಿಸಿದ 5 ಬಾರ್ಗಳಿಗೆ ಬೀಗ….
ಬೆಂಗಳೂರು: ಕೋರಮಂಗಲದಲ್ಲಿ ರೂಫ್ಟಾಪ್ವೊಂದರಲ್ಲಿ ನಡೆದ ಅಗ್ನಿ ಅವಘಡದಿಂದ ಕಾರ್ಯಾಚರಣೆಗಿಳಿದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಗ್ನಿ ಸುರಕ್ಷತಾ ನಿಯಮ ಉಲ್ಲಂಘಿಸಿದ 5 ಬಾರ್ಗಳಿಗೆ ಬೀಗ ಹಾಕಿಸಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬಾರ್ಗಳು ಮತ್ತು ರೆಸ್ಟೋರೆಂಟ್ಗಳು ಸೇರಿದಂತೆ 167 ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ನಡೆಸಿದರು. ಅಗ್ನಿ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ 5 ರೂಫ್ಟಾಪ್ ಬಾರ್ಗಳಿಗೆ ಮುಚ್ಚುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಕಳೆದ ವಾರ …
Read More »ಶಶಿ ತರೂರ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆ…
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದು, ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ‘ಮಹತ್ವದ ಪ್ರಗತಿ’ ಸಾಧಿಸಿದೆ ಮತ್ತು ಸಂಘಟನಾ ರಚನೆಯನ್ನು ಪುನಶ್ಚೇತನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಕ್ಷವು ಸಂತಸ ವ್ಯಕ್ತಪಡಿಸಿದೆ. ಕಳೆದ ಅಕ್ಟೋಬರ್ನಲ್ಲಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದರು. ಅಕ್ಟೋಬರ್ 26ರಂದು ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
Read More »ಮುಳ್ಳಯ್ಯನಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ…..
ಚಿಕ್ಕಮಗಳೂರು: ಸಂಬಳವಾದ ಮೊದಲ ವಾರವೆಂದು ಮುಂದಿನ ವಾರಂತ್ಯಕ್ಕೆ ಕಾಫಿನಾಡು ಚಿಕ್ಕಮಗಳೂರಿಗೆ ಟ್ರಿಪ್ ಪ್ಲಾನ್ ಮಾಡಿದ್ದೀರಾ..? ಟ್ರಕ್ಕಿಂಗ್, ದೇವಸ್ಥಾನ ಹೀಗೆ ಪ್ರವಾಸಿ ತಾಣಗಳ ಪಟ್ಟಿ ಮಾಡಿಕೊಂಡಿದ್ದೀರಾ..? ಹಾಗಾದರೆ ಇಲ್ಲಿ ಗಮನಿಸಿ. ನಿಮ್ಮ ಪ್ರವಾಸಿ ತಾಣಗಳ ಪಟ್ಟಿಯಿಂದ ಈ ಸ್ಥಳಗಳನ್ನು ಕೈಬಿಟ್ಟು, ಬೇರೆ ಪ್ಲಾನ್ ಮಾಡಿ. ರಾಜ್ಯದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಮತ್ತು ಚಾರಣ ಸ್ಥಳಗಳಲ್ಲೊಂದೆನಿಸಿಕೊಂಡಿರುವ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ನವೆಂಬರ್ 4 ಬೆಳಗ್ಗೆ 6ರಿಂದ ನವೆಂಬರ್ 6ರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





