Breaking News

BigTv News

ನನ್ನ ನಿಲವು ನಾನು ಬಿಜೆಪಿಯಲ್ಲಿ ಇರ್ತೀನಿ-MLC ಪ್ರದೀಪ್ ಶೆಟ್ಟರ್

ಹುಬ್ಬಳ್ಳಿ: ನಾನು ಭಾರತೀಯ ಜನತಾ ಪಾರ್ಟಿಯಲ್ಲಿಯೇ ಇರುತ್ತೇನೆ. ಅವರ ಸ್ಟ್ಯಾಂಡ್ ಬೇರೆ, ವೈಯಕ್ತಿಕ ಸಂಭಂದ ಬೇರೆ ಎಂದು ಹುಬ್ಬಳ್ಳಿಯಲ್ಲಿ ಶೆಟ್ಟರ್ ಸಹೋದರ MLC ಪ್ರದೀಪ್ ಶೆಟ್ಟರ್ ಹೇಳಿಕೆ. ನಾನು ದಿನಾ ಈ ಮನೆಗೆ ಬರ್ತೀನಿ, ಊಟ ಮಾಡಿ ಹೋಗ್ತೀನಿ. ವೈಯಕ್ತಿಕ ಬೇರೆ, ಪಕ್ಷ ಬೇರೆ. ಅವರಿನ್ನು ಭಾರತೀಯ ಜನತಾ ಪಕ್ಷದಲ್ಲಿ ಇದ್ದಾರೆ. ಅವರಿನ್ನು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ‌ಕೊಟ್ಟಿಲ್ಲ.ಇನ್ನು 20 ರ ವರೆಗೂ ಸಮಯ ಇದೆ. ಅವರಿನ್ನು ಯಾವುದೇ …

Read More »

ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡದ ಶೆಟ್ಟರ್

ಹುಬ್ಬಳ್ಳಿ: ರಾಜೀನಾಮೆಗೆ ಶಿರಸಿಗೆ ಹೊರಟ ಶೆಟ್ಟರ್ ಗೆ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ತವನಪ್ಪ ಅಷ್ಟಗಿ ಶೆಟ್ಟರ್‌ಗೆ ಸಾಥ ನೀಡಿದ್ದು, ಇಂದು 11 ಗಂಟೆಗೆ ಸ್ಪೀಕರ್‌ಗೆ ಶೆಟ್ಟರ್‌ ರಾಜೀನಾಮೆ ಸಲ್ಲಿಸಲಿದ್ದಾರೆ . ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡದ್ದು, ರಾಹುಲ್ ಗಾಂಧಿಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿರುವ ಶೆಟ್ಟರ್.

Read More »

ಬಿಜೆಪಿ ಮುಖಂಡರಿಗೆ ಹಿರಿಯರ ಜೊತೆ ಮಾತಾಡುವ ಸೌಜನ್ಯವಿಲ್ಲ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಶಿರಸಿಗೆ ತೆರಳ್ತಾ ಇದ್ದೇನೆ. ಕಾಗೇರಿ ಅವರ ಬಳಿ ಸಮಯ ಕೇಳಿದ್ದು, 10:30 ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ರಾಜ್ಯಾದ್ಯಕ್ಷರಿಗೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ. ಎಂದು ಮಾಜಿ ಸಿಎಮ್ ಜಗದೀಶ್ …

Read More »

ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ-ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಬೆಳಿಗ್ಗೆ ಎಲ್ಲ ಕಾರ್ಯಕರ್ತರ ಸಭೆ ಕರೆದಿದ್ದೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ನಮ್ಮ ಜೊತೆ ಸಮಾಲೋಚನೆ ಮಾಡಲು ಸಿಎಂ, ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ ಅವರು ನಮ್ಮ ಮನೆಗೆ ಬರಲಿದ್ದಾರೆ. ಮೂವರೂ ಸೇರಿ ನಮ್ಮ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸಮಾಲೋಚನೆ ನಂತರ ನಿರ್ಧಾರ ಪ್ರಕಟ ಮಾಡಲಿದ್ದೇವೆ. ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ …

Read More »

ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ-ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ. ಒಬ್ಬ ಶಾಸಕನಾಗಿ ಕೆಲಸ ಮಾಡಲು ಇನ್ನೂ ಅವಕಾಶವಿದೆ. ಶೆಟ್ಟರ್‌ಗೆ ಟಿಕೆಟ್ ಇಲ್ಲಾ ಅನ್ನೋ ವಾತಾವರಣ ಯಾಕೆ ಬಂತು ಗೊತ್ತಿಲ್ಲ. ಯಾವುದೇ ಕಳಂಕ ನನ್ನ ಮೇಲೆ ಇಲ್ಲಾ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಿ, ಶಕ್ತಿ‌ ಕೊಡುವ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಕೊಟ್ಟಿರುವ ಅವಕಾಶಕ್ಕೆ ಧನ್ಯವಾದ ಹೇಳುತ್ತೇನೆ. ಅಪೂರ್ಣ ಕೆಲಸ ಪರಿಪೂರ್ಣ …

Read More »

ಜಗದೀಶ ಶೆಟ್ಟರ್ ಬೆಂಬಲಿಗರಿಂದ ಭುಗಿಲೆದ್ದ ಆಕ್ರೋಶ

ಹುಬ್ಬಳ್ಳಿ: ಒಂದೆಡೆ ಶೆಟ್ಟರ್ ನಿವಾಸದಲ್ಲಿ ಜೋಶಿಯಿಂದ ಸಂಧಾನ ಸಭೆ ನಡೆದಿದ್ದು, ಮತ್ತೊಂದೆಡೆ ನಿವಾದ ಹೊರಗೆ ಕಾರ್ಯಕರ್ತರ ಆಕ್ರೋಶ ಮುಗಿಲೆರುತ್ತಿದೆ. ಶೆಟ್ಟರ್ ಗೆ ಟಿಕೇಟ್ ನೀಡಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಟಿಕೆಟ್ ನೀಡದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಜಗದೀಶ ಶೆಟ್ಟರ್ ಗೆ ಟಿಕೆಟ್ ನೀಡೋ ವಿಚಾರವಾಗಿ ಮಹಿಳೆ ಕಣ್ಣೀರು ಸುರಿಸಿದ್ದು, ಟಿಕೆಟ್ ನೀಡದೇ ಹೋದಲ್ಲಿ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಹಿಳಾ ಕಾರ್ಯಕರ್ತೆ ಎಚ್ಚರಿಕೆ …

Read More »

ಶೆಟ್ಟರ್ ಮತ್ತು ಬಿಜೆಪಿ ಯಾವತ್ತೂ ಒಂದಾಗಿ ಇರುತ್ತದೆ- ಸಚಿವ ಮುನೇನಕೊಪ್ಪ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಒಬ್ಬರು ಸರಳ, ಸಜ್ಜನ ನಾಯಕರಾಗಿದ್ದಾರೆ. ಕಳೆದ 30 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ತಳಮಟ್ಟದಿಂದ ಪಕ್ಷ ಕಟ್ಟಿದ್ದಾರೆ. ಪಕ್ಷದಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಕಾರ್ಯ ನಿರ್ವಹಣೆ ಮಾಡಿದ್ದಾರೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. ಕೇಂದ್ರದ ವರಿಷ್ಠರು ಒಂದು ನಿರ್ಣಯ ತೆಗೆದುಕೊಳ್ಳತ್ತಾರೆಂಬ ವಿಶ್ವಾಸವಿದೆ. ಶೆಟ್ಟರ್ ಮತ್ತು ಬಿಜೆಪಿ ಯಾವತ್ತೂ ಒಂದಾಗಿ ಇರುತ್ತದೆ. ಅವರು ಬಂಡಾಯವಾಗಿ ನಿಲ್ಲೋದು ಅಸಾಧ್ಯವಾದ ಮಾತು. ಅವರು ಯಾವತ್ತೂ ಪಕ್ಷದ …

Read More »

ಶೆಟ್ಟರ್‌ಗೆ ಟಿಕೆಟ್‌ ನೀಡುವಂತೆ ಕಣ್ಣೀರು ಹಾಕಿದ ಮಹಿಳೆಯರು

ಹುಬ್ಬಳ್ಳಿ : ಪಕ್ಷ ಕಟ್ಟಿದವರನ್ನ ದೂರ ಮಾಡಬೇಡಿ ಎಂದು ಶೆಟ್ಟರ್‌ಗೆ ಟಿಕೆಟ್‌ ನೀಡುವಂತೆ ಕಣ್ಣೀರು ಹಾಕಿದ ಮಹಿಳೆಯರು. ಅವರನ್ನ ಕೆಟ್ಟದಾಗಿ ನಡೆಸಿಕೊಳ್ಳಬೇಡಿ. ಅವರಿಗೆ ಟಿಕೆಟ್ ಸಿಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಟಿಕೆಟ್ ನೀಡಿ ಎಂದು ಗಳಗಳನೆ ಕಣ್ಣೀರು ಹಾಕಿದ ಮಹಿಳೆಯರು. ಹಾಗಾಗಿ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೈ ತಪ್ಪುವ ಭೀತಿಯಿಲ್ಲ.

Read More »

ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರಕ್ಕೆ, ಅವರನ್ನು ಮನವೊಲಿಕೆ ಪ್ರಯತ್ನ ಮಾಡಿದ್ದೇವೆ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಅವರ ಟಿಕೆಟ್ ವಿಚಾರಕ್ಕೆ, ಅವರನ್ನು ಮನವೊಲಿಕೆ ಪ್ರಯತ್ನ ಮಾಡಿದ್ದೇವೆ. ಇವತ್ತಿಗೂ ಪ್ರಯತ್ನ ನಡೆಯುತ್ತಿದೆ. ನಿನ್ನೆ ಧರ್ಮೇಂದ್ರ ಪ್ರಧಾನ ಬಳಿ ಚರ್ಚೆ ಮಾಡಿದ್ದೇನೆ. ಬಿಜೆಪಿಗೆ ಶೆಟ್ಟರ್ ಅತ್ಯಂತ ನಿಷ್ಠರು. ಉತ್ತರ ಕರ್ನಾಟಕ ಭಾಗಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ಹೇಳಿದ್ದೇನೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಅವರ ನಿವಾಸದ ಬಳಿ ಮಾತನಾಡಿದ ಅವರು, ಶೆಟ್ಟರ್ ಅವರು ಅತ್ಯಂತ ಅವಶ್ಯ ಇರೋ ನಾಯಕ. ನಡ್ಡಾ ಅವರಿಗೆ ಮಾತನಾಡಿದ್ದೇನೆ. …

Read More »

ಪಕ್ಷ ತೊರೆಯದಂತೆ ಶೆಟ್ಟರ್ ಮನವೊಲಿಕೆಗೆ ಪ್ರಯತ್ನ: ಜಗದೀಶ್ ಶೆಟ್ಟರ್ ನಿವಾಸಕ್ಕೆ ಪ್ರಹ್ಲಾದ್ ಜೋಶಿ ಭೇಟಿ

ಹುಬ್ಬಳ್ಳಿ: ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿವಾಸಕ್ಕೆ ಶನಿವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿರುವ ಶೆಟ್ಟರ್ ನಿವಾಸಕ್ಕೆ ಆಗಮಿಸಿದ ಜೋಶಿ, ಪಕ್ಷ ತೊರೆಯದಂತೆ ಶೆಟ್ಟರ್ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ. ಟಿಕೆಟ್ ಘೋಷಿಸದಿದ್ದರೆ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಬಿಜೆಪಿ ವರಿಷ್ಠರಿಗೆ ಶೆಟ್ಟರ್ ಗಡುವು ವಿಧಿಸಿದ್ದರು. ಅದರಂತೆ ಇಂದು ಅಭಿಮಾನಿಗಳ ಸಭೆ ನಡೆಸಿ ಬಳಿಕ …

Read More »