Breaking News

ಹುಬ್ಬಳ್ಳಿ ಸುದ್ದಿ

ಹುಬ್ಬಳ್ಳಿ: ‘ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು’ ರಾಮ್ ಸೇನೆ ಅಧ್ಯಕ್ಷರ ಆಗ್ರಹ!

ಪಹಲ್ಗಾಮ್ ನಲ್ಲಿ ಹಿಂದುಗಳ ಗುರಾಯಿಸಿ ಭಯೋತ್ಪಾದಕರು ದಾಳಿ ಮಾಡಿರುವ ಇಸ್ಲಾಮಿಕ್ ಭಯೋತ್ಪಾದನೆಯಾಗಿದ್ದು, ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧಸಾರಬೇಕು ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಆಗ್ರಹಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ಧಾಳಿಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮೃತಪಟ್ಟಿಲ್ಲ, ಸ್ಥಳೀಯ ಮುಸ್ಲಿಮರ ಸಹಕಾರವಿಲ್ಲದೆ ಈ ದಾಳಿ ನಡೆದಿರಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರದಲ್ಲಿರುವ ಮುಸ್ಲಿಮರು ಭಯೋತ್ಪಾದಕರ ಬಚಾವ ಮಾಡುವದನ್ನು ಬಿಡಬೇಕು, ಭಯೋತ್ಪಾದಕರ ವಿರುದ್ಧ ಸಿಡಿದೆಳಬೇಕು. …

Read More »

ಹುಬ್ಬಳ್ಳಿ: ರಾಜಕಾಲುವೆಯಲ್ಲಿ ಪತ್ತೆಯಾದ ಅಪರಿಚಿತ ಶವ!!

ಹುಬ್ಬಳ್ಳಿಯ ರಾಜಕಾಲುವೆಯಲ್ಲಿ ಇಂದು ಬೆಳಿಗ್ಗೆ ಯುವಕನ ಶವವೊಂದು ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೋಲೀಸರು ಯುವಕನ ಮೃತದೇಹವನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ.ಸದ್ಯ ಯುವಕ ಯಾರೆಂಬ ಮಾಹಿತಿ ಲಭ್ಯವಾಗಿಲ್ಲ, ಇನ್ನಷ್ಟೇ ಪೋಲೀಸ್ ತನಿಖೆಯಿಂದ ತಿಳಿದುಬರಬೇಕಿದೆ…

Read More »

ಹುಬ್ಬಳ್ಳಿ: ಗುಡುಗು ಸಿಡಿಲು ಸಹಿತ ಧಾರಾಕಾರ ಅನೇಕಲ್ಲು ಮಳೆ, ಜನಜೀವನ ಅಸ್ತವ್ಯಸ್ತ!!

ಹುಬ್ಬಳ್ಳಿಯಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ನಗರದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು ಕೆಲಸಕ್ಕೆ ತೆರಳಿದವರು ಮನೆಗೆ ಮರಳಲು ಪರದಾಡುತ್ತಿದ್ದಾರೆ.ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿರುವ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಆದ ಹಾನಿ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅನೇಕಲ್ಲು ಮಳೆ ಕೂಡ ಖುಷಿ ತಂದು ಕೊಟ್ಟಿದೆ.

Read More »

ಹುಬ್ಬಳ್ಳಿ :ಎನ್‌ಕೌಂಟರ್‌ಗೆ ಬಲಿಯಾದ ಹಂತಕನ ಫೋಟೋ ರಿಲೀಸ್..

ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಇಲ್ಲಿಯವರೆಗೂ ಅನಾಥವಾಗಿ ಬಿದ್ದಿರುವ ಹಂತಕನ ಶವ ಗುರುತಿಸಲು ಅವರ ಸಂಬಂಧಿಕರಾಗಲಿ, ಪರಿಚಯಸ್ಥರಾಗಲಿ ಯಾರೂ ಬಾರದ ಕಾರಣ ಪೋಟೋ ರಿಲೀಸ್ ಮಾಡಿದ್ದಾರೆ. ಕಾಮುಕ ರಿತೇಶಕುಮಾರನ (35) ಭಾವಚಿತ್ರ ಬಿಡುಗಡೆ ಮಾಡಿದ್ದು.ಕುಟುಂಬಸ್ಥರ ಪತ್ತೆಗೆ ಭಾವಚಿತ್ರ ಸಹಿತ ಅಶೋಕ ನಗರ ಪೋಲೀಸರುಪ್ರಕಟಣೆ ಹೊರಡಿಸಿದ್ದಾರೆ. ಈತ ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ.ಅಲ್ಲದೆ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ಓಂ ನಮಃ ಶಿವಾಯ …

Read More »

ಹುಬ್ಬಳ್ಳಿ: ಕಿಮ್ಸ್ನ ಶವಗಾರಕೆ ಸಚಿವ ಸಂತೋಷ ಲಾಡ್ ಭೇಟಿ..

ಅಧಿಕಾರಿಗಳೊಂದಿಗೆ ಘಟನೆ ಬಗ್ಗೆ ಮಾಹಿತಿ ಪಡೆದ ಸಂತೋಷ ಲಾಡ್ ರವರು ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಬಳಿ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಿದರು. ಪೊಲೀಸ್ ಇಲಾಖೆ ತುರ್ತಾಗಿ ಪತ್ತೆ ಹಚ್ಚಿದೆ ಆರೋಪಿಯನ್ನ ಹಿಡಿಯುವಲ್ಲಿ ಸಾರ್ವಜನಿಕರು ಸಹಾಯ ಮಾಡಿದ್ದಾರೆ, ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು,ಚಿಕ್ಕ ಮಕ್ಕಳನ್ನ ರಸ್ತೆಯಲ್ಲಿ ಅಲ್ಲಿ ಇಲ್ಲಿ ಬಿಡೋವಂತದ್ದು ಮಾಡದೆ ಎಚ್ಚರಿಕೆ ವಹಿಸಬೇಕು,ನಮ್ಮ ಎಲ್ಲಾ ಇಲಾಖೆಯಿಂದಲೂ ಈ ಬಗ್ಗೆ ಎಚ್ಚರಿಕೆ ವಹಿಸಲು …

Read More »

ಹುಬ್ಬಳ್ಳಿಯಲ್ಲಿ ಬಾಲಕಿ ಕೊಲೆ ಪ್ರಕರಣ; ಕಣ್ಣೀರು ಹಾಕಿದ ಕೇಂದ್ರ ಸಚಿವ!!

ಹುಬ್ಬಳ್ಳಿ ಪ್ರಕರಣದ ಬಗ್ಗೆ ಮಾತನಾಡಲು ಬಂದಿದ್ದ ಕೇಂದ್ರ ಸಚಿವ ಪ್ರಜಾಶ್ರೀ ಅವರು ಬಹಳ ದುಃಖದಿಂದ ನುಡಿದರು. ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐದು ವರ್ಷದ ಬಾಲಕಿಯನ್ನು ಇಷ್ಟೊಂದು ಹೀನವಾಗಿ ಕೊಲೆ ಮಾಡಿದ್ದಾನೆ. ಇದು ಅತೀ ಹೀನ ಕೃತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಣ್ಣೀರು ಹಾಕುತ್ತ ಹೇಳಿದರು‌. ಅಪರಾಧಿಗೆ ತಕ್ಕ ಶಿಕ್ಷೆ ನೀಡುವ ಬಗ್ಗೆ ಮಾತನಾಡಿದರು.

Read More »

ಹುಬ್ಬಳ್ಳಿ :ಬಾಲಕಿ ಅತ್ಯಾಚಾರ ಯತ್ನಿಸಿ ಕೊಲೆ ಪ್ರಕರಣ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಎನ್ ಕೌಂಟರ್!!

ಹುಬ್ಬಳ್ಳಿ ಇತಿಹಾಸದಲ್ಲಿ ಐವತ್ತು ವರ್ಷದ ನಂತರ ಮೊದಲ ಎನ್ ಕೌಂಟರ್!. ಅವಳಿನಗರದ ಪೊಲೀಸರಿಂದ ಮಗು ಕೊಲೆ ಆರೋಪಿ ಎನ್ ಕೌಂಟರ್ ಮಾಡಲಾಗಿದೆ. ಅಶೋಕನಗರ ಪೊಲೀಸರಿಂದ ಆರೋಪಿ ಮೇಲೆ ಪೈರಿಂಗ್ ನಡೆದಿದೆ.ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಇಂದು ಬೆಳಗಿನ ಜಾವ 11 ಗಂಟೆಗೆ ಬಾಲಕಿ ಅಪಹರಿಸಿ ಹತ್ಯೆ ಮಾಡಿದ್ದ ಆರೋಪಿ,ನಂತರ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ,ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆದಿತ್ತು.ಪಕ್ಷಾತೀತವಾಗಿ ಆರೋಪಿಗೆ ಶಿಕ್ಷೆ ಯಾಗಬೇಕು ಎಂದು …

Read More »

ಹುಬ್ಬಳ್ಳಿ ಬ್ರೇಕಿಂಗ್: ಬಾಲಕಿ ಕೊಲೆ ಪ್ರಕರಣದ ಹಿನ್ನಲೆ ತೀವ್ರಗೊಂಡ ಪ್ರತಿಭಟನೆ!!

ಹುಬ್ಬಳ್ಳಿ ನಗರದ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ, ಅಧ್ಯಾಪಕ ನಗರದಲ್ಲಿ ನಡೆದ ಐದು ವರ್ಷದ ಬಾಲಕಿ ಕೊಲೆ ಘಟನೆ ಬಿಹಾರ್ ಮೂಲದ ಯುವಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ನಾ ಅನ್ನೋ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು,ಬಾಲಕಿಯನ್ನ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಬಾಲಕಿಯನ್ನ ಎತ್ತಿಕೊಂಡು ಹೋಗುವ ದೃಶ್ಯ ಸೆರೆಯಾಗಿದ್ದು, ಸಾರ್ವಜನಿಕರು ಅಶೋಕ್ ನಗರ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.ಕೊಲೆಗಡುಕನ ವಿರುದ್ಧ ಘೋಷಣೆ ಕೂಗಿ ಆಕ್ರೋಶ …

Read More »

ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : 5 ವರ್ಷದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ!!!

ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಬಿಹಾರ ಮೂಲದ ವ್ಯಕ್ತಿಯೊಬ್ಬ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಸದ್ಯ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬಿಹಾರ್ ಮೂಲದ ವ್ಯಕ್ತಿಯಿಂದ ಈ ಒಂದು ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಘಟನೆ ಖಂಡಿಸಿ ಅಶೋಕ್ ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಮನೆಯ …

Read More »

ಹುಬ್ಬಳ್ಳಿ: ಬ್ಲಾಕ್ ಮೇಲ್ ಪ್ರಕರಣದ ಹಿನ್ನೆಲೆ ರಾಮ್ ಸೇನಾ ಅಧ್ಯಕ್ಷರ ಪ್ರಚೋದನಕಾರಿ ಹೇಳಿಕೆ.

ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ರಿಂದ ಪ್ರಚೋದನಕಾರಿ ಹೇಳಿಕೆ: ಕಾಂಗ್ರೆಸ್ ಮಹಿಳೆಯರ ರಕ್ಷಣೆ ಮಾಡಲ್ಲ ಕಾಂಗ್ರೆಸ್ ಇರೋದು ಮುಸ್ಲಿಂರ ರಕ್ಷಣೆಗಾಗಿ ಮಾತ್ರ,ನೇಹಾ ಹಿರೇಮಠ ಹತ್ಯೆಯಾಗಿ ಏಪ್ರಿಲ್18 ಕ್ಕೆ ಒಂದು ವರ್ಷ ಆಗುತ್ತೆ. ಅಂದು ಶ್ರೀರಾಮಸೇನೆ ಒಂದು ಸಾವಿರ ಮಹಿಳೆಯರಿಗೆ “ತ್ರಿಶೂಲ ದಿಕ್ಷೆ” ನೀಡಲಿದೆ.ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಈ ತ್ರಿಶೂಲ ಇಟ್ಟುಕೊಳ್ಳಲಿ.ಅತ್ಯಾಚಾರಿಗಳು, ಕೊಲೆಗಡಿಗರಿ, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ನೇಹಾ ಹಿರೇಮಠ ಹತ್ಯೆ ಆಗಿ ಇನ್ನೂ ಒಂದು ವರ್ಷ ಆಗಿಲ್ಲ ಈಗ …

Read More »