Breaking News

BigTv News

ಯಾವುದೇ ಸಂದರ್ಭದಲ್ಲೂ ಚುನಾವಣೆ ಘೋಷಣೆ ಆಗಬಹುದು -ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ : ರಾಜ್ಯಸಭಾ ಚುನಾವಣೆ ಯಾವುದೇ ಸಂದರ್ಭದಲ್ಲಾದರೂ ಘೋಷಣೆ ಆಗಬಹುದೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಹಲವಾರು ದಶಕಗಳಿಂದ ನಡೆದು ಬಂದಂತಹ ಸದಾಶಿವ ಆಯೋಗವನ್ನು ಅತ್ಯಂತ ಧೈರ್ಯದಿಂದ ಅನುಷ್ಟಾನ ಮಾಡಿದ್ದಕ್ಕೆ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Read More »

ಯುವಕನೋರ್ವನನ್ನು ಕಾಪಾಡಲು ಡಿವೈಡರ್ ಗೆ ಡಿಕ್ಕಿ ಹೊಡೆದ ಚಿಗರಿ ಬಸ್

ಹುಬ್ಬಳ್ಳಿ : ಬಿ.ಆರ್.ಟಿ.ಎಸ್ ರಸ್ತೆ ದಾಟುತ್ತಿದ್ದ ಯುವಕನೋರ್ವನನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬಿ.ಆರ್.ಟಿ.ಎಸ್ (ಚಿಗರಿ) ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡ ಘಟನೆ ನಗರದ ವಿದ್ಯಾನಗರದ ಜೆ.ಜಿ. ಕಾಮರ್ಸ್ ಕಾಲೇಜ್ ಬಳಿ ನಡೆದಿದೆ. ಘಟನೆಯಲ್ಲಿ ಯುವಕನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದ್ದು, ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತಂತೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಲಾರಿ ಬೈಕ್ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರರ ಸಾವು

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆ ಕಿಲ್ಲರ್ ಬೈಪಾಸ್ ಎಂದೇ ಹೆಸರು ಪಡೆದಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಒಂದಿಲ್ಲೊಂದು ಅಪಘಾತ ನಡೆದು ವಾಹನ ಸವಾರರು ಸಾವನ್ನಪ್ಪುತ್ತಲೇ ಇರುತ್ತಾರೆ. ಇದೀಗ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಭೀಮರಾವ್ ಗೋಸಾವಿ (38) ಹಾಗೂ ಏಕನಾಥ ಗೋಸಾವಿ (40) ಎಂಬುವವ ಸಾವನ್ನಪ್ಪದ್ದಾರೆ. ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ಈ ದುರ್ಘಟನೆ …

Read More »

ಬದಾಮಿ ಸ್ಪರ್ಧೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಸಿದ್ದರಾಮಯ್ಯ

ಹುಬ್ಬಳ್ಳಿ: ಬದಾಮಿಗೆ ಅವಾಗ ಅವಾಗ ಬರ್ತಾ ಇರ್ತೀನಿ ಎಂದು ಹುಬ್ಬಳ್ಳಿ ಏರಪೋರ್ಟ್ ನಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಮಾತನಾಡಿದ್ದಾರೆ. ಕ್ಷೇತ್ರ ಸಿಗ್ತಿಲ್ಲ ಅನ್ನೋ ಬಿಜೆಪಿ ನಾಯಕರ ಮಾತಿಗೆ ಸಿದ್ದರಾಮಯ್ಯ ಪ್ರತಿಕ್ರೀಯಿಸಿದ್ದಾರೆ. ಸುಮಾರು 20 ರಿಂದ 25 ಕ್ಷೇತ್ರದಲ್ಲಿ ಕರೀತಿದಾರೆ. ಎಲ್ಲ ಕಡೆ ನಿಲ್ಲೋಕೆ ಆಗಲ್ಲ.ಅದಕ್ಕೆ ನಾನು ಹೈಕಮಾಂಡ್ ಗೆ ಬಿಟ್ಟಿದೀನಿ. ಸೋಲೋರನ್ನ ಕರೀತಾರಾ, ಗೆಲ್ಲೋರನ್ನ ಕರೀತಾರಾ. ಅಭಿಮಾನ ಪ್ರೀತಿಯಿಂದ ಕರೀತಾರೆ, ಮತ್ತೆ ಕ್ಷೇತ್ರ ಇಲ್ಲ ಹೇಗೆ ಅಂತಾರೆ?.. ನಂಗೆ ಯಾವದೇ …

Read More »

ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ ಕಚೇರಿಯ ಎದುರು ಪ್ರತಿಭಟನೆ

ಧಾರವಾಡ: ಕೊಳಚೆ ಪ್ರದೇಶದ ‌ನಿವಾಸಿಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗಿದ್ದು, ಧಾರವಾಡ ನಗರದ ಕೊಳಚೆ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ನೀರಿನ ಬಿಲ್, ಮನೆ ಕರ ಕಡಿಮೆ ಮಾಡಬೇಕು.ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸಮಗ್ರ ಪ್ರಜೆಗಳ ಧ್ವನಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Read More »

ನರೇಂದ್ರ ಮೋದಿ ಸರ್ಕಾರ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ- ಮಾಜಿ ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿಯವರು ಹೇಳುವ ಸತ್ಯವನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನವನ್ನು ಜಾಹೀರುಗೊಳಿಸಿದೆ. ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದೊಂದು ಕರಾಳ ದಿನ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಪಾಪದ ಕೊಡ ತುಂಬಿದೆ. ತನ್ನ ನಾಶದ ಶವದಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಬಡಿದಿದೆ. ಈ ಫ್ಯಾಸಿಸ್ಟ್ ನಡವಳಿಕೆಗೆ ಹೆದರುವ, ಹಿಂಜರಿಯುವ ಪ್ರಶ್ನೆಯೇ ಇಲ್ಲ. ಈ …

Read More »

ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ..!

ನವದೆಹಲಿ: ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್​ನ ಜಿಲ್ಲಾ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಇಂದು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇಂದು ಬೆಳಗ್ಗೆ ಲೋಕಸಭೆ ಅಧಿವೇಶನಕ್ಕೆ ಹಾಜರಾದ ಕೆಲವೇ ಗಂಟೆಗಳಲ್ಲಿ ವಯನಾಡ್ ಸಂಸದ ರಾಹುಲ್​ ಗಾಂಧಿ ಅವರನ್ನು ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

Read More »

ಮೇವಿನ ಬಣವಿಗೆ ಬೆಂಕಿ

ಹುಬ್ಬಳ್ಳಿ : ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಮೇವಿನ ಬಣವಿಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಅಪಾರ ಪ್ರಮಾಣದ ಜೋಳದ ಮೇವು ಸುಟ್ಟು ಕರಕಲಾಗಿದೆ.ಬ್ಯಾಹಟ್ಟಿ ಗ್ರಾಮದ ನಿವಾಸಿಯಾದ ಬಸಪ್ಪ ತಮ್ಮಪ್ಪ ಹರಣಶಿಕಾರಿ ಅವರ ಜೋಳದ ಮೇವು ಹಾಗೂ ಗೋಧಿಯ ಹೊಟ್ಟಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ. ತಕ್ಷಣವೇ ಸ್ಥಳೀಯರೇ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ನಂತರ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ …

Read More »

ಕಾರಿನಲ್ಲಿ ಕಂತೆ ಕಂತೆ ನೋಟುಗಳು: ವಶಕ್ಕೆ ಪಡೆದ ಪೊಲೀಸರು

ಧಾರವಾಡ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 53 ಲಕ್ಷ ಹಣವನ್ನು ಗರಗ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕೋಡಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ವಾಹನ ತೇಗೂರು ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೆ ಪೊಲೀಸರು ತಪಾಸಣೆಗೊಳಪಡಿಸಿದಾಗ ಕಾರಿನಲ್ಲಿ ಹಣ ಪತ್ತೆಯಾಗಿದೆ. ಚಿಕ್ಕೋಡಿ ಮೂಲದ ಸಂಜು ಹಿರೇಮಠ ಎಂಬಾತ ಈ ಕಾರು ತೆಗೆದುಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ದಾಖಲೆ ಇಲ್ಲದ ಹಣ …

Read More »

ಆತ್ಮ ನಿರ್ಬರವಾಗಿ ಬದುಕಬೇಕು- ಲೂಸಿ ಸಾಲ್ದಾನಾ

ಧಾರವಾಡ: ಮಹಿಳೆ ಅಬಲೆ ಎಂದುಕೊಳ್ಳದೇ ಬಲಯುಳ್ಳ ಸಬಲೆಯೆಂದು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಸ್ವಾವಲಂಬಿಯಾಗಿ ಜೀವನ ನಡೆಸಬೇಕೆಂದು ಲೂಸಿ ಸಾಲ್ದಾನಾ ಅಕ್ಷರದ ಅವ್ವ ಹೇಳಿದರು. ನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿ ಅಭ್ಯುದಯ ಫೌಂಡೇಶನ್, ಆಸ್ಥಾ ಮಹಿಳಾ ವೇದಿಕೆಯಿಂದ ಆಚರಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ಎಷ್ಟೇ ನೋವು ಕಷ್ಟಗಳು ಬಂದರು ಎದೆಗುಂದದೇ ಮಹಿಳೆಯರು ದಿಟ್ಟತನದಿಂದ ಮುಂದೆ ಸಾಗಬೇಕೆಂದು ತಿಳಿಸಿದರು. ಅತಿಥಿಯಾಗಿ ಆಗಮಿಸಿದ ಉದ್ಯಮಿ ಸುಮಿತ್ರ ನವಲಗುಂದ ಮಾತನಾಡಿ, ನಾವು …

Read More »