ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಯುವಕರಿಗೆ ಬಿಜೆಪಿ ಪಕ್ಷ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಹಾಗಾಗಿ ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ವಿಶ್ವಾಸ ನಮ್ಮಗೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ – ಧಾರವಾಡದಲ್ಲಿ ಯುವ ಜನೋತ್ಸವ ಕಾರ್ಯಕ್ರಮ …
Read More »ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆ
ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆಯಲ್ಲಿ ಇಂದು ಲಿಂಗಯಿತ ಸಮೂದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರ ಮನೆ ಮುಂದೆ ಪ್ರತಿಭಟನೆ ಮುಂದಾಗಿದ್ದಾರೆ. ಶಿಗ್ಗಾವಿ ಪಟ್ಟಣದ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಜಯಮೃತ್ಯಂಜಯ ಸ್ವಾಮೀಜಿ ಮಾಧ್ಯಮರೊಂದಿಗೆ ಮಾತನಾಡಿ ಕಳೆದ ಅಧಿವೇಶನದಲ್ಲಿ ನಮಗೆ ಸಿಎಂ ಮಾತು ಕೊಟ್ಟಿದ್ದರು. ತಾಯಿಯ ಮೇಲೆ ಪ್ರಮಾಣ ಮಾಡಿ ಡಿ,29 ಕ್ಕೆ 2A ಮೀಸಲಾತಿ ನೀಡುತ್ತೇವೆಂದು ಹೇಳಿದರು. ಆದರೆ 2C, 2D ಹೊಸ …
Read More »ಮೋದಿ ಮೇಲಿನ ಅಭಿಮಾನದಿಂದ ಯುವಕ ಹಾರ ಹಾಕಲು ಬಂದಿದ್ದ ಕೇಂದ್ರ ಸಚಿವ ಜೋಶಿ
ಧಾರವಾಡ : ನಿನ್ನೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ರೋಡ್ ಶೋ ವೇಳೆ ಯುವಕ ಹಾರ ಹಾಕಲು ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಗಳಿಗೆ ದೊಡ್ಡ ಪ್ರಮಾಣದ ಭದ್ರತೆ ಇರುತ್ತದೆ. ನಮ್ಮ ಮಾಹಿತಿ ಪ್ರಕಾರ ಆ ಯುವಕ ಅಭಿಮಾನದಿಂದ, ಪ್ರೀತಿಯಿಂದ ಮಾಲೆ ಹಾಕಲು ಬಂದಿದ್ದ. ಅದರಿಂದ ಏನೂ ದೊಡ್ಡ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ.
Read More »ಬಣಜಿಗ ಬಂಧುಗಳು ಸಂಕ್ರಾಂತಿ ಸಂಭ್ರಮ ನಾಳೆ
ಹುಬ್ಬಳ್ಳಿ: ಬಣಜಿಗ ಬಂಧುಗಳು ಸಂಕ್ರಾಂತಿ ಸಂಭ್ರಮ ಸಮಿತಿ, ಹುಬ್ಬಳ್ಳಿ ತಾಲೂಕು ವತಿಯಿಂದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ನಗರದ ಗೋಕುಲ್ ರಸ್ತೆಯ ಚವ್ಹಾನ್ ಗಾರ್ಡನ್ ನಲ್ಲಿ ಜನೆವರಿ ೧೫ ರಂದು ಸಾಯಂಕಾಲ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೋಮಶೇಖರ ಉಮರಾಣಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಈ ಕಾರ್ಯಕ್ರಮಕ್ಕೆ ಚಲನಚಿತ್ರ ಹಾಸ್ಯ ನಟ ದೊಡ್ಡಣ್ಣ ಎಸ್, ಸಂಗೀತ ಸಂಯೋಜನಾಕಾರಿ ಭೋಜಶೆಟ್ಟಿ ಉಪಸ್ಥಿತರಿರಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಬೆ. ೧೦ ರಿಂದ …
Read More »ಯುವಜನೋತ್ಸವಕ್ಕೆ ಬಂದಿದ್ದ ಯುವಕನಿಗೆ ಕಾಣಿಸಿಕೊಂಡ ಹೃದಯದ ಸಮಸ್ಯೆ
ಧಾರವಾಡ: ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆಂದು ಬಂದಿದ್ದ ಜಮ್ಮು, ಕಾಶ್ಮೀರದ ಯುವಕನಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ಸದಿನ್ ಎನ್ನುವ ಯುವಕನಿಗೆ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಈತ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲೆಂದು ಬಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಉಳಿದುಕೊಂಡಿದ್ದ. ಈತನಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read More »ಮೋದಿ ಆಗಮನ ಹಿನ್ನೆಲೆ, ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಕಾವು.
ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಯುವಜನೋತ್ಷವ ಕಾರ್ಯಕ್ರಮ ಆಯೋಜಿಸಲಾಗಿದೆ. ಇವೊಂದು ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಮೋದಿ ಆಗಮಿಸುತ್ತಿದ್ದಾರೆ. ಆದ್ರೇ ನಗರದ ಕೆಲವರು ಮೋದಿ ಗೋಬ್ಯಾಕ್ ಎಂದು ಘೋಷಣೆ ಕೂಗುತ್ತಿದ್ದಾರೆ. ಇನ್ನೂ ನಗರದ ಮಿನಿ ಸೌಧದ ಎದುರು ಖಾಲಿ ಬಿಂದಿಗೆ, ಹಾಗೂ ಅಣುಕು ಪ್ರದರ್ಶನದ ಫೋಸ್ಟರ್ ಹಿಡಿದು ಕಾಂಗ್ರೆಸ್ ಕಾರ್ಯ ಕರ್ತರು, ಮಹಿಳೆಯರು ಹಾಗೂ ಯುವಕರು ಪ್ರತಿಭಟನೆ ಮಾಡಿದರು. ಉದ್ಯೋಗ ಸೃಷ್ಟಿ ಎಂದು ಸುಳ್ಳು ಭರವಸೆ, ಬೆಲೆ ಎರಿಕೆ, ನೀರಿನ ಸಮಸ್ಯೆ, …
Read More »ಲಾರಿ ಹಾಗೂ ರಿಕ್ಷಾ ಮಧ್ಯೆ ಭೀಕರ ರಸ್ತೆ ಅಪಘಾತ,
ಧಾರವಾಡ ಜಿಲ್ಲೆಯನವಲಗುಂದ ತಾಲೂಕಿನ ಯಮನೂರ ಗ್ರಾಮದ ಬೆಣ್ಣೆ ಹಳ್ಳದ ಸೇತುವೆಯ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿ ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ.ನರಗುಂದ ಕಡೆ ತೆರಳುತ್ತಿದ್ದ ಲಾರಿ ಹಾಗೂ ಹುಬ್ಬಳ್ಳಿ ಕಡೆಗೆ ಹೊರಟಿದ್ದ ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು, ರಿಕ್ಷಾ ದಲ್ಲಿರುವ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ನವಲಗುಂದ ತಾಲೂಕ ಆಸ್ಪತ್ರೆಗೆ …
Read More »ಹಣೆಗೆ ಹಚ್ಚಿದ ತಿಲಕ ಅಳಿಸಿಕೊಂಡ ಸಿಎಂ: ಚರ್ಚೆಗೆ ಗ್ರಾಸವಾದ ಸಿಎಂ ನಡೆ…!
ಹುಬ್ಬಳ್ಳಿ: ಯುವಜನೋತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು ಹಣೆಗೆ ಹಚ್ಚಿದ ತಿಲಕವನ್ನು ಅಳಿಸಿಕೊಂಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೌದು.. ಯುವಜನೋತ್ಸವಕ್ಕೆ ಆಗಮಿಸುವ ಜನನಾಯಕರಿಗೆ ಸ್ವಾಗತ ಮಾಡಲು ವಿಮಾನ ನಿಲ್ದಾಣದಲ್ಲಿ ಸ್ವಾಗತ ಸಮಿತಿ ಆರತಿ ಬೆಳಗಿ ತಿಲಕ ಇಟ್ಟು ಸ್ವಾಗತಿಸುತ್ತಿದೆ. ಆದರೆ ಸಿಎಂ ಬೊಮ್ಮಾಯಿಯವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಮುನ್ನವೇ ಹಣೆಗೆ ಹಚ್ಚಿದ ಹಿಂದೂ ಸಂಪ್ರದಾಯದ ತಿಲಕವನ್ನು ಅಳಿಸಿಕೊಳ್ಳುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಮೋದಿಯವರ ನೇತೃತ್ವದಲ್ಲಿ …
Read More »ಪ್ರಧಾನಿ ನರೇಂದ್ರ ಮೋದಿಗೆ ಗೋ ಬ್ಯಾಕ್ ಅಭಿಯಾನ ಆರಂಭ
ಹುಬ್ಬಳ್ಳಿ: ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಗೋ ಬ್ಯಾಕ್ ಅಭಿಯಾನವನ್ನು ಕಾಂಗ್ರೇಸ್ ಪಕ್ಷದವರೇ ಕೈಗೆತ್ತಿಕೊಂಡಿದ್ದಾರೆ. ರಜತ್ ಉಳ್ಳಾಗಡ್ಡಿಮಠ ಅವರಿಂದ ಈ ಒಂದು ಅಭಿಯಾನ ಆರಂಭವಾಗಿದೆ, ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿ, ಕೆಲವೊಂದಿಷ್ಟು ಸರ್ಕಾರದ ವೈಫಲ್ಯವನ್ನು ಕಂಡಿಸಿ ಹಲವು ದಿನಗಳಿಂದಲ್ಲೂ ಅಭಿಯಾನ ನಡೆಸುತ್ತಿದ್ದಾರೆ. ಈ ಒಂದು ಅಭಿಯಾನಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಬೆಂಬಲ ನೀಡಿದ್ದಾರೆ. ರಜತ್ ಉಳ್ಳಾಗಡ್ಡಿಮಠ ಕಾಂಗ್ರೇಸ್ ಪಕ್ಷದ ಯುವ ಮುಖಂಡನಾಗಿದ್ದು, ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಅಭಿಯಾನ ಆರಂಬಿಸಿದ್ದರು. …
Read More »ಮೋದಿ ಕಾರ್ಯಕ್ರಮ ಹಿನ್ನಲೆ ಖಾಕಿ ಕಟ್ಟೆಚ್ಚರ..
ಹುಬ್ಬಳ್ಳಿ: ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಇಂದೇ ಸಾವಿರಾರು ಯುವ ಜನತೆಯನ್ನು ಉದ್ದೇಶಿಸಿ ಮಾತನಾಡಲಿರುವ ಮೋದಿ ಸ್ವಗತಿಸಿಲು ಇಡೇ ನಗರವೇ ಸಜ್ಜಾಗಿದ್ದು, ಇನ್ನು ಮುನ್ನೆಚ್ಚರಿಕ ಕ್ರಮವಾಘಿ ಪೋಲಿಸ್ ಬಂದೂ ಬಸ್ತ್ ಜೋರಾಗಿದೆ. ಸುಮಾರು 2900 ಪೊಲೀಸರ ನಿಯೋಜನೆ ಮಾಡಲಾಗಿದ್ದು, 7ಎಸ್ ಸ್ ಪಿ ದರ್ಜೆ ಅಧಿಕಾರಿಗಳು, 25 ಡಿಐಎಸ್ ಪಿ ದರ್ಜೆ, 60 ಪಿಐ, 18 ಕೆಎಸ್ ಆರ್ ಪಿ, ಗರುಡಾ, ಸಿಆರ್ ,ಡಿಆರ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





