Breaking News

ಮೈಸೂರು

ನಂಜುಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿದ ಅರ್ಜುನ್ ಸರ್ಜಾ

ಮೈಸೂರು: ಬೆಳ್ಳಂಬೆಳಗ್ಗೆ ನಟ ಅರ್ಜುನ್ ಸರ್ಜಾ ಅವರು ಮೈಸೂರಿನ ನಂಜನಗೂಡಿನ ನಂಜುಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಅರ್ಜುನ್​ ಸರ್ಜಾ ಅವರು ನಂಜುಡೇಶ್ವರ, ಪಾರ್ವತಮ್ಮ, ಗಣಪತಿಗೆ ಪೂಜೆ ಸಲ್ಲಿಸಿ, ಕೆಲ ಸಮಯ ನಂಜುಡೇಶ್ವರನ ದೇವಸ್ಥಾನದ ಸನ್ನಿಧಿಯಲ್ಲಿಯೇ ಕಳೆದರು.ಇನ್ನು ತಮ್ಮ ನೆಚ್ಚಿನ ನಟ ದೇವಸ್ಥಾನಕ್ಕೆ ಆಗಮನ ಹಿನ್ನಲೆಯಲ್ಲಿ ಅಭಿಮಾನಗಿಳು ಸೆಲ್ಫಿಗಾಗಿ ಮುಗಿಬಿದ್ದರು. ಕಳೆದ ಕೆಲವು ತಿಂಗಳ ಹಿಂದೆ ತೆಲುಗಿನಲ್ಲೂ ನಿರ್ದೇಶನ ಮಾಡುತ್ತೇನೆ. ಕಥೆಯೂ ಸಿದ್ಧವಾಗಿದೆ. ಮಗಳ ಸಿನಿಮಾ ಮುಗಿದ ನಂತರ …

Read More »

ಅದ್ಧೂರಿಯಾಗಿ ನೆರವೇರಿದ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಮಹಾರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಸಾವಿರಾರು ಭಕ್ತರು ಸಮ್ಮುಖದಲ್ಲಿ ಬೆಳಿಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವರಾತ್ರಿ ಮುಗಿದ ಮೊದಲ ಹುಣ್ಣಿಮೆಯಲ್ಲಿ ಚಾಮುಂಡಿ ತಾಯಿಯ ರಥೋತ್ಸವ ನಡೆಸಲಾಗುತ್ತದೆ. ನವರಾತ್ರಿಯಂದು ಭಕ್ತರಿಗೆ ಶ್ರೀ ತಾಯಿಯ ದರ್ಶನ ಸಿಗಲೆಂದು ರಾಜವಂಶಸ್ಥರು ಈ ಮಹಾರಥೋತ್ಸವನ್ನು ಪ್ರಾರಂಭಿಸಿದರು. ಕಲಾತಂಡಗಳು …

Read More »

ಚಾಮುಂಡಿ ಬೆಟ್ಟದಲ್ಲಿ ಸ್ಥಳೀಯ ವರ್ತಕರೊಂದಿಗೆ ಸಂವಾದ ಮಾಡಿದ ಸಿಎಂ

ಮೈಸೂರು :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿನಲ್ಲಿದ್ದಾರೆ.  ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ವಿಜಯದಶಮಿಯ ಪ್ರಯುಕ್ತ ಬಸವರಾಜ ಬೊಮ್ಮಾಯಿ ಮೈಸೂರಿ‌ನ ಚಾಮುಂಡಿ ಬೆಟ್ಟದಲ್ಲಿ  ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ಥಳೀಯ ವರ್ತಕರೊಂದಿಗೆ ಸಂವಾದ ನಡೆಸಿದರು. ಚಾಮುಂಡಿ ಬೆಟ್ಟದ ಹೊರಗೆ ಹಣ್ಣುಕಾಯಿ ವ್ಯಾಪಾರಿಗಳ ಕುಶುಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು, ಹಬ್ಬದ ಶುಭಾಶಯಗಳನ್ನು ವಿನಿಮಯಮಾಡಿಕೊಂಡರು.

Read More »

ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ

ಮೈಸೂರು : ವಿಜಯದಶಮಿಯ ದಿನವಾದ ಇಂದು ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಜಂಬೂಸವಾರಿಯಲ್ಲಿ ಅಂಬಾರಿಯಲ್ಲಿ ಸಾಗುವ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ನಾದಸ್ವರತಂಡದೊಂದಿಗೆ ಮೆರವಣಿಗೆ ಮೂಲಕ ಅರಮನೆಗೆ ಕರೆತರಲಾಗುತ್ತದೆ. ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್ ಸೇರಿದಂತೆ ನಾನಾ ಗಣ್ಯರು ಉಪಸ್ಥಿತರಿದ್ದರು. ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಳ್ಳಲು …

Read More »

ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ

ಮೈಸೂರು : ದಸರಾಕ್ಕೆ ಕಾಯುವುದು ಮಾಮೂಲಿ. ಸಡಗರ ಸಂಭ್ರಮದಿಂದಲೇ ಆರಂಭವಾಗುವ ದಸರಾ ಜಂಬೂ ಸವಾರಿಯೊಂದಿಗೆ ಮುಗಿದು ಹೋಗುತ್ತದೆ. ಇಷ್ಟು ವರ್ಷಗಳಲ್ಲಿ ನಡೆದ ದಸರಾಕ್ಕೆ ಹೋಲಿಸಿದರೆ ಈ ಬಾರಿಯ ದಸರಾವನ್ನು ಜನ ಸ್ವಾಗತಿಸಿದ ರೀತಿ ವಿಶೇಷವಾಗಿದೆ. ಏಕೆಂದರೆ ಎರಡು ವರ್ಷಗಳ ಕಾಲ ಕಾಡಿದ ಕೊರೋನಾ ದಸರಾ ಸಂಭ್ರಮವನ್ನು ನುಂಗಿ ಹಾಕಿತ್ತು. ಈ ಬಾರಿಯ ದಸರಾದಲ್ಲಿ ಜನ ಮೈಕೊಡವಿಕೊಂಡು ಮನೆಯಿಂದ ಹೊರ ಬಂದಿದ್ದರ ಪರಿಣಾಮ ಎಲ್ಲೆಂದರಲ್ಲಿ ಜನವೋ ಜನ… ಸಾಮಾನ್ಯವಾಗಿ ದಸರಾ ಎಂದರೆ …

Read More »

ಭಾರತ್‌ ಜೋಡೋ ಯಾತ್ರೆಗೆ 2 ದಿನ ಬ್ರೇಕ್‌

ಮೈಸೂರು: ಏಕೆಂದರೆ ಕಾಂಗ್ರೆಸ್‌ನ ಐಕ್ಯತಾ ಯಾತ್ರೆ ಭಾರತ್‌ ಜೋಡೋಗೆ ಎರಡು ದಿನದ ಬ್ರೇಕ್‌ ಗೆ ಮಹಾನವಮಿ ಮತ್ತು ಆಯುಧ ಪೂಜೆ ಪ್ರಯುಕ್ತ ಅಕ್ಟೋಬರ್‌ 4 ರಂದು ಮತ್ತು ಅಕ್ಟೋಬರ್‌ 5 ರಂದು ವಿಜಯ ದಶಮಿ ಸಲುವಾಗಿ ವಿರಾಮ ಸಿಕ್ಕಿದೆ. ಅಕ್ಟೋಬರ್‌ 6 ರಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ಈ ಎರಡು ದಿನಗಳ ಕಾಲ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಡಿಕೇರಿಯ ಖಾಸಗಿ ರೆಸಾರ್ಟ್‌ನಲ್ಲಿ ವಿರಾಮ ಪಡೆಯಲಿದ್ದಾರೆ. ಉಳಿದ …

Read More »

ಶ್ರೀಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ರಾಗಾ

ಮೈಸೂರು: ಭಾರತ್​ ಜೋಡೋ ಯಾತ್ರೆ ಮಂಡ್ಯ ಜಿಲ್ಲೆಯನ್ನು ಪ್ರವೇಶಿಸಿದ್ದು, ಮತ್ತೆ ವಾಪಸ್​ ಮೈಸೂರಿಗೆ ಆಗಮಿಸಿದ ಕಾಂಗ್ರೆಸ್​ ನಾಯಕ ರಾಹುಲ್​ಗಾಂಧಿ ಚಾಮುಂಡಿ ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಅತ್ ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ದೆಹಲಿಯಿಂದ ಮೈಸೂರಿಗೆ ಆಗಮಿಸಿದರು. ಚಾಮುಂಡಿ ದರ್ಶನ ಪಡೆದು ಮತ್ತೆ ಶ್ರೀರಂಗಪಟ್ಟಣಕ್ಕೆ ಹಿಂತಿರುಗಿರುವ ರಾಹುಲ್​ಗಾಂಧಿ, ಪರಿವರ್ತನ ಶಾಲೆಯಲ್ಲಿ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಊಟದ ಬಳಿಕ ಪಾದಯಾತ್ರೆ ಮುಂದುವರಿಯಲಿದೆ. ಅತ್ತ ದೆಹಲಿಯಿಂದ ವಿಶೇಷ ವಿಮಾನದಲ್ಲಿ …

Read More »

ಮೈಸೂರ : ಮಳೆಗೂ ಕೇರ್ ಮಾಡದೇ ಭಾಷಣ ಮಾಡಿದ ರಾಗಾ

ಮೈಸೂರು: ಸುರಿಯುತ್ತಿದ್ದ ಮಳೆಯಲ್ಲೇ ನೆನೆದುಕೊಂಡೇ ರಾಹುಲ್‍ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೈಸೂರು ತಾಲ್ಲೂಕು ಕಡಕೊಳದಿಂದ ಪಾದಯಾತ್ರೆ ಆರಂಭಿಸಿದ ರಾಹುಲ್‍ ಗಾಂಧಿ ಮೈಸೂರು ನಗರ ತಲುಪುತ್ತಿದ್ದಂತೆ ಮಳೆ ಪ್ರಾರಂಭವಾಯಿತು. ದೊಡ್ಡಕೆರೆ ಮೈದಾನದಲ್ಲಿ ಹಾಕಲಾಗಿದ್ದ ಓಪನ್ ವೇದಿಕೆಯಲ್ಲೇ ಸುರಿಯುತ್ತಿದ್ದ ಬಾರಿ ಮಳೆಯಲ್ಲೇ ನೆನೆದುಕೊಂಡೇ ಬಾಷಣ ಮಾಡಿದರು. ಬಳಿಕ ರಾಹುಲ್‍ ಗಾಂಧಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ನಾಯಕರುಗಳು ಪರಸ್ಪರ ಕೈ ಹಿಡಿದುಕೊಂಡು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು.

Read More »

ಮಗನಿಗೆ ಸಾಥ್ ಕೊಡಲು ನಾಳೆ ಮೈಸೂರುಗೆ ಸೋನಿಯಾ ಗಾಂಧಿ

ಮೈಸೂರು : ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಡಿಕೇರಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 4 ರಂದು ಬೆಳಿಗ್ಗೆ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಾಳೆ ಮೈಸೂರು ನಗರದಿಂದ Ts ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ನಂತರ ಎಸಿಸಿಸಿ ಅಧ್ಯಕ್ಷ ಚುನಾವಣೆ ಕುರಿತು ರಾಹುಲ್ ಜೊತೆ ಚರ್ಚಿಸಲು ಮಡಿಕೇರಿಗೆ ಸೋಮವಾರ ಮಧ್ಯಾಹ್ನ 12.30ಕ್ಕೆ …

Read More »

4ನೇ ದಿನಕ್ಕೆ ಕಾಲಿಟ್ಟಿ ಭಾರತ್​ ಜೋಡೋ ಯಾತ್ರೆ : ರಾಗಾ ಸುತ್ತ ಮುತ್ತ ಪೋಲಿಸ್ ಭದ್ರತೆ

ಮೈಸೂರು: ಕರ್ನಾಟಕದಲ್ಲಿ ಭಾರತ್​ ಜೋಡೋ ಯಾತ್ರೆ ಇಂದು(ಸೋಮವಾರ) 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಆರ್​.ಗೇಟ್ ವೃತ್ತದಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ರಾಹುಲ್ ಸುತ್ತ ಮುತ್ತ ಕಾರ್ಯಕರ್ತರಿಗಿಂತ ಬಹುತೇಕ ಪೊಲೀಸರೇ ಇದ್ದು, ಬಿಗಿ ಭದ್ರತೆ ನೀಡಲಾಗಿದೆ. ದಾರಿ ಮಧ್ಯೆ ಮಸೀದಿ ಮತ್ತು ಚರ್ಚ್​ಗೂ ರಾಹುಲ್ ಭೇಟಿ ನೀಡಿದರು. ಮಂಡಿ ಮೊಹಲ್ಲಾದಲ್ಲಿರುವ ಮಸ್ಜಿದೇ ಅಜಃಮ್ ಮಸಿದೀಗೆ ತೆರಳಿದ ರಾಗಾ, ಕೆಲ ನಿಮಿಷ ಪ್ರಾರ್ಥನೆ …

Read More »

You cannot copy content of this page