Breaking News

ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ


ಮೈಸೂರು : ದಸರಾಕ್ಕೆ ಕಾಯುವುದು ಮಾಮೂಲಿ. ಸಡಗರ ಸಂಭ್ರಮದಿಂದಲೇ ಆರಂಭವಾಗುವ ದಸರಾ ಜಂಬೂ ಸವಾರಿಯೊಂದಿಗೆ ಮುಗಿದು ಹೋಗುತ್ತದೆ. ಇಷ್ಟು ವರ್ಷಗಳಲ್ಲಿ ನಡೆದ ದಸರಾಕ್ಕೆ ಹೋಲಿಸಿದರೆ ಈ ಬಾರಿಯ ದಸರಾವನ್ನು ಜನ ಸ್ವಾಗತಿಸಿದ ರೀತಿ ವಿಶೇಷವಾಗಿದೆ. ಏಕೆಂದರೆ ಎರಡು ವರ್ಷಗಳ ಕಾಲ ಕಾಡಿದ ಕೊರೋನಾ ದಸರಾ ಸಂಭ್ರಮವನ್ನು ನುಂಗಿ ಹಾಕಿತ್ತು.

ಈ ಬಾರಿಯ ದಸರಾದಲ್ಲಿ ಜನ ಮೈಕೊಡವಿಕೊಂಡು ಮನೆಯಿಂದ ಹೊರ ಬಂದಿದ್ದರ ಪರಿಣಾಮ ಎಲ್ಲೆಂದರಲ್ಲಿ ಜನವೋ ಜನ…

ಸಾಮಾನ್ಯವಾಗಿ ದಸರಾ ಎಂದರೆ ಜಗಮಗಿಸುವ ವಿದ್ಯುದ್ದೀಪದ ಅಲಂಕಾರ, ವಿವಿಧ ಕಾರ್ಯಕ್ರಮಗಳು, ಮೇಳಗಳು, ಕುಸ್ತಿ, ಆಟಗಳು, ವ್ಯಾಪಾರ ವಹಿವಾಟು, ಜನಜಂಗುಳಿ ಅಂತಿಮವಾಗಿ ಜಂಬೂಸವಾರಿ ಪಂಜಿನ ಕವಾಯತು ಮೂಲಕ ಮುಗಿದು ಹೋಗಿ ಬಿಡುತ್ತದೆ. ಆದರೆ ಸುಮಾರು 413 ವರ್ಷಗಳ ಕಾಲ ನಡೆದ ದಸರಾ ಆರಂಭದಿಂದ ಇಲ್ಲಿಯವರೆಗೆ ಮಗ್ಗುಲು ಬದಲಿಸಿಕೊಂಡು ಅವತ್ತಿನ ರಾಜವೈಭದಿಂದ ಇಂದಿನ ಪ್ರಜಾವೈಭವದವರೆಗೆ ಹತ್ತು ಹಲವು ಕಾರ್ಯಕ್ರಮಗಳ ಸೇರ್ಪಡೆಯೊಂದಿಗೆ ಜನಮನ ಸೆಳೆಯುತ್ತಾ ಬಂದಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *