ಮೈಸೂರು: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಇಂದು(ಸೋಮವಾರ) 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಆರ್.ಗೇಟ್ ವೃತ್ತದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ರಾಹುಲ್ ಸುತ್ತ ಮುತ್ತ ಕಾರ್ಯಕರ್ತರಿಗಿಂತ ಬಹುತೇಕ ಪೊಲೀಸರೇ ಇದ್ದು, ಬಿಗಿ ಭದ್ರತೆ ನೀಡಲಾಗಿದೆ.
ದಾರಿ ಮಧ್ಯೆ ಮಸೀದಿ ಮತ್ತು ಚರ್ಚ್ಗೂ ರಾಹುಲ್ ಭೇಟಿ ನೀಡಿದರು. ಮಂಡಿ ಮೊಹಲ್ಲಾದಲ್ಲಿರುವ ಮಸ್ಜಿದೇ ಅಜಃಮ್ ಮಸಿದೀಗೆ ತೆರಳಿದ ರಾಗಾ, ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸಿದರು. ಅಶೋಕ ರಸ್ತೆಯಲ್ಲಿರುವ ಸೇಂಟ್ ಫಿಲೋಮಿನಾ ಚರ್ಚ್ಗೂ ಭೇಟಿ ನೀಡಿದ ರಾಹುಲ್, ಕೆಲ ಕ್ಷಣ ಚರ್ಚಿಸಿದರು. ಮತ್ತೆ ಪಾದಯಾತ್ರೆ ಹೊರಟರು.
ಎಐಸಿಸಿ ಪ್ರಧಾನ ಕಾರ್ಯದಶಿರ್ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ಸಿಂಗ್ ಸುರ್ಜೇವಾಲಾ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆರ್.ದೃವನಾರಾಯಣ್, ಯು.ಟಿ.ಖಾದರ್, ತನ್ವೀರ್ ಸೇಠ್, ವಾಸು ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಪಾದಯಾತ್ರೆಯು ಅರಮನೆ ಮೂಲಕ ಅಶೋಕ ರಸ್ತೆ ತಲುಪಿ ಬನ್ನಿಮಂಟಪ ಮೂಲಕ ಶ್ರೀರಂಗಪಟ್ಟಣ ತಲುಪಲಿದೆ. ಬೆಳಗ್ಗೆ 14 ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ನಂತರ ಪಾದಯಾತ್ರಿಗಳು ವಿಶ್ರಾಂತಿ ಪಡೆಯುವರು. ಸಂಜೆ 4ಕ್ಕೆ ಮತ್ತೆ ಪಾದಯಾತ್ರೆ ಆರಂಭವಾಗಿ ಶ್ರೀರಂಗಪಟ್ಟಣ ಮೂಲಕ ಪಾಂಡವಪುರ ತಲುಪಲಿದೆ. ಇಂದು ಒಟ್ಟು 25 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

