Breaking News

ಜಿಂದಾಲ್ ಗೆ ಭೂಮಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ

ಜಿಂದಾಲ್ ಗೆ ಭೂಮಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ರೈತರು ಒಂದು ಎಕರೆ ಭೂಮಿ ಖರೀದಿಸಲು ಕಷ್ಟವಿದೆ. ರೈತರಿಗೆ ಸಾಗುವಳಿ ಭೂಮಿ ನೀಡುತ್ತಿಲ್ಲ. ಒಂದು ಎಕರೆ ಭೂಮಿ ಖರೀದಿಸಿ ನೋಂದಣಿ ಮಾಡಿಸಲು ನೂರೆಂಟು ದಾಖಲೆಗಳನ್ನ ಕೇಳಿ ಅಲೆದಾಡಿಸಲಾಗುತ್ತೆ. ಆದ್ರೆ ಜಿಂದಾಲ್ ಗೆ ಸರ್ಕಾರವೇ ಮೂರೂವರೆ ಸಾವಿರ ಎಕರೆ ಭೂಮಿ ನೀಡಲು ಮುಂದಾಗಿ. ಎಕರೆಗೆ ಒಂದು ಲಕ್ಷದ ಇಪ್ಪತ್ತು ಸಾವಿರದಂತೆ ನೀಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಇದನ್ನು ಎಲ್ಲರೂ ಖಂಡಿಸಲೇಬೇಕು. ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ರು.

Share News

About admin

Check Also

ಮಹದೇಶ್ವರ ದೇಗುಲದ ಗೋಪುರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!!

ಮಲೆ ಮಹದೇಶ್ವರ ದೇಗುಲದ ಗೋಪುರವನ್ನು ಹತ್ತಿ ವ್ಯಕ್ತಿಯೊಬ್ದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಅರೆಬರೆ ಬಟ್ಟೆಯಲ್ಲಿರುವ ವ್ಯಕ್ತಿಯೊಬ್ಬ ಗೋಪುರವನ್ನು …

Leave a Reply

Your email address will not be published. Required fields are marked *