Breaking News

11 ಮಂದಿ ಐಪಿಎಸ್​ ಅಧಿಕಾರಿಗಳ ವರ್ಗಾವಣೆ


ಬೆಂಗಳೂರು: ಇದೀಗ ರಾಜ್ಯಸರ್ಕಾರ 11 ಮಂದಿ ಐಪಿಎಸ್​ ಅಧಿಕಾರಿಗಳನ್ನು ಬೇರೆ ಬೇರೆ ಸ್ಥಾನಗಳಿಗೆ ವರ್ಗಾವಣೆ ಮಾಡಿದ್ದು ಅವರಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣನವರ್​ ಕೂಡ ಇದ್ದಾರೆ. ರಾಜ್ಯ ಸರ್ಕಾರ ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಚೆನ್ನಣ್ಣನವರ್​ರನ್ನು ಕಿಯೋನಿಕ್ಸ್​ ಸಂಸ್ಥೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್​ ಟ್ರಾಫಿಕ್​ ಕಮಿಷನರ್​ಅನ್ನು ನೇಮಕ ಮಾಡಲಾಗಿದ್ದು ಐಪಿಎಸ್​ ಅಬ್ದುಲ್​ ಸಲೀಂಗೆ ಈ ಸ್ಥಾನವನ್ನು ನೀಡಲಾಗಿದೆ. ಅದಲ್ಲದೇ ಈ ಬಾರಿ ಪದವಿಯನ್ನು ADGP ದರ್ಜೆಗೆ ಸಮಾನವೆಂದು ಸರ್ಕಾರ ಆದೇಶ ಹೊರಡಿಸಿದೆ.

ಯಾವ ಅಧಿಕಾರಿಗಳನ್ನು ಯಾವ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ? ಮಾಹಿತಿ ಇಲ್ಲಿದೆ:

ಅಬ್ದುಲ್ ಸಲೀಂ – ಸಂಚಾರ ವಿಭಾಗ ಮುಖ್ಯಸ್ಥರಾಗಿ ವರ್ಗಾವಣೆ

ಉಮೇಶ್ ಕುಮಾರ್ – ಆಡಳಿತ ವಿಭಾಗ ಎಡಿಜಿಪಿ ವರ್ಗಾವಣೆ

ದಿವ್ಯಾಜ್ಯೋತಿರಾಯ್- ಮಾನವಹಕ್ಕಗಳ ಆಯೋಗ

ರವಿಕಾಂತೇಗೌಡ – ಸಿಐಡಿ ವರ್ಗಾವಣೆ

ಲೋಕೇಶ್ ಕುಮಾರ್ – ಬಳ್ಳಾರಿ ಐಜಿ ವರ್ಗಾವಣೆ

ರಮಣ್ ಗುಪ್ತಾ- ಬೆಂಗಳೂರು ಇಂಟಲಿಜೆನ್ಸ್ ವರ್ಗಾವಣೆ

ಚಂದ್ರಗುಪ್ತ – ಮಂಗಳೂರು ಐಜಿಯಾಗಿ ವರ್ಗಾವಣೆ

ಶರಣಪ್ಪ – ಜಂಟಿ ಪೊಲೀಸ್ ಆಯುಕ್ತ ಸಿಸಿಬಿ ವರ್ಗಾವಣೆ

ಅನುಚೇತ್ – ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ

ರವಿ ಡಿ ಚೆನ್ನಣ್ಣದಣವರ್ – ಕಿಯೋನಿಕ್ಸ್ ನಿರ್ದೇಶಕರಾಗಿ ವರ್ಗಾವಣೆ

ರಮೇಶ್ – ಮೈಸೂರು ಸಿಟಿ ಕಮಿಷನರ್ ಆಗಿ ವರ್ಗಾವಣೆ

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *