BigTv News
September 15, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ಕುಡಿದ ಮತ್ತಿನಲ್ಲಿ ತುಂಬು ಗರ್ಭಿಣಿ ಹೆಂಡತಿಯನ್ನು ಆಕೆಯ ಪತಿಯೇ ಕೊಲೆಗೈದಿರುವ ಘಟನೆ ನಂಜನಗೂಡು ನಗರದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ. ಶೋಭಾ (26) ಮೃತ ಮಹಿಳೆ. ಮಂಜು ಅಲಿಯಾಸ್ ಮಂಜುನಾಥ್ (27) ಕೊಲೆ ಆರೋಪಿ. 8 ವರ್ಷಗಳ ಹಿಂದೆ ಶೋಭಾ ಮತ್ತು ಮಂಜು ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಈ ದಂಪತಿಗೆ ಈಗಾಗಲೇ 5 ವರ್ಷದ ಗಂಡು ಮಗುವಿದೆ. ಮತ್ತೊಂದು ಮಗುವಿಗೆ …
Read More »
BigTv News
September 13, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ 3 ಲಕ್ಷ ಮತಗಳ ಅಂತರದಿಂದ ನೂರಕ್ಕೆ ನೂರರಷ್ಟು ಸೋಲುತ್ತಾರೆ. ಏನಾದರೂ ಪ್ರತಾಪ್ ಸಿಂಹ ಗೆದ್ದರೆ ನಾನು ಊರನ್ನೇ ಬಿಟ್ಟು ಬಿಡುತ್ತೇನೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ಅವರಿಗೆ ನೇರ ಹಾಕಿದ್ದಾರೆ. ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಸೋಲಿನ ಭೀತಿಯಲ್ಲಿದ್ದಾರೆ. ಇದೇ ಕಾರಣದಿಂದ ಕಂಡ …
Read More »
BigTv News
September 11, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ನನ್ನ ಇಡೀ ರಾಜಕಾರಣ ಕೋಮುವಾದಿ ಪಕ್ಷಗಳ ವಿರುದ್ಧವೇ ನಡೆದಿದೆ. ಹೀಗಿರುವಾಗ ನಾನು ಬಿಜೆಪಿಗೆ ಹೋಗುತ್ತೇನೆಂದರೆ ಯಾರಾದರೂ ನಂಬುತ್ತಾರೆಯೇ?. ಅದು ನಂಬುವ ಮಾತೇ? ನಾನು ಬಿಜೆಪಿಗೆ ಸೇರಲು ಹೋಗಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ನಗೆಪಾಟಲಿನದು. ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ …
Read More »
BigTv News
September 8, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ಬರಡು ಭೂಮಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಸಿದ ಕನ್ನಡ ಉಪನ್ಯಾಸಕರೊಬ್ಬರ ಕಾರ್ಯವೈಖರಿಗೆ ಇಲ್ಲಿನ ದೊಡ್ಡ ಕವಲಂದೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣವೂ ಪೂರಕ ಎಂಬ ಮಾತಿಗೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಗಿದೆ. ಬರಡು ಬಯಲಾಗಿದ್ದ ಈ ಕಾಲೇಜು ಆವರಣವೀಗ ಸಸ್ಯಕಾಶಿಯಾಗಿ ರೂಪುಗೊಂಡಿದೆ. ಕನ್ನಡ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿದ್ಯಾರ್ಥಿಗಳು, …
Read More »
BigTv News
September 4, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು : ಸಿದ್ದರಾಮಯ್ಯ ಯಾವಾಗಲೂ ತಮ್ಮ ಶಕ್ತಿಯ ಮೇಲೆ ಸಿಎಂ ಆಗಿಲ್ಲ, 2013 ರಲ್ಲಿ ಬಿಜೆಪಿ, ಕೆಜೆಪಿ ಎಂದು ವಿಭಾಗ ಆಗಿತ್ತು. ಅದರ ಲಾಭ ಪಡೆದು ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿ ಆದರು. ಈಗ ಗ್ಯಾರಂಟಿ ಎಂದು ಹೇಳಿಕೊಂಡು ಸಿಎಂ ಆಗಿದ್ದಾರೆ. ಯಾವಾಗಲೂ ಲಾಟರಿ ಮುಖ್ಯಮಂತ್ರಿ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಮೈಸೂರಿಗೆ ಪಕ್ಷದ ಕಾರ್ಯಕ್ರಮದ ಹಿನ್ನೆಲೆ ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ …
Read More »
BigTv News
September 1, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ಶುಭ ಶುಕ್ರವಾರದ ಬೆಳಗ್ಗೆ 9:45 ರಿಂದ 10:15ರ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಆ ಮೂಲಕ 2023 ರ ನಾಡಹಬ್ಬ ದಸರಾಗೆ ಮುನ್ನುಡಿ ಬರೆಯಲಾಯಿತು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನಹೊಸಳ್ಳಿಯ ಬಳಿ ಅಭಿಮನ್ಯು ನೇತೃತ್ವದ 9 ಗಜಪಡೆಗಳಾದ ಮಹೇಂದ್ರ, ಅರ್ಜುನ, ವರಲಕ್ಷ್ಮಿ, ಧನಂಜಯ, ಗೋಪಿ, ವಿಜಯ, ಪಾರ್ಥಸಾರಥಿ, ರೋಹಿತ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ …
Read More »
BigTv News
August 30, 2023
News, ಕರ್ನಾಟಕ, ಜಿಲ್ಲೆ, ಮೈಸೂರು, ಸುಳ್ಯ
ಬೆಂಗಳೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಿದರು. ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವ ರಾಜ್ಯ ಸರ್ಕಾರ ಇಂದು ಗೃಹಲಕ್ಷಿ ಯೋಜನೆಯ 2,000 ರೂ. ಹಣವನ್ನು ಮಹಿಳೆಯರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತಕ್ಕೆ 100 ದಿನಗಳು …
Read More »
BigTv News
August 25, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು: ಕೇರಳದಲ್ಲಿ ಆಫ್ರಿಕನ್ ಸ್ಟೈನ್ ಫೀವರ್ (African Spain fever) ಕಾಣಿಸಿಕೊಂಡ ಹಿನ್ನೆಲೆ ತಹಶೀಲ್ದಾರ್ ಸಣ್ಣ ರಾಮಪ್ಪ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ ರವಿಕುಮಾರ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಬಿ ಪ್ರಸನ್ನ ಮತ್ತು ತಂಡ ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ …
Read More »
BigTv News
August 23, 2023
ಕರ್ನಾಟಕ, ಮೈಸೂರು, ಸುದ್ದಿ
ಮೈಸೂರು:ರೈತರಿಂದ ಟ್ರ್ಯಾಕ್ಟರ್ಗಳನ್ನು ಬಾಡಿಗೆ ಪಡೆದುಕೊಂಡು, ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯ ವಿಚಾರಣೆಯಿಂದ ಈ ತರಹದ ಪ್ರಕರಣ ಬೆಳಕಿಗೆ ಬಂದಿದೆ. ಹುಣಸೂರು ತಾಲೂಕಿನ ಹನಗೂಡು ಹೊಬಳಿಯ ಗಾಣನಕಟ್ಟೆ ನಂದೀಶ್ ರೈತರಿಂದ ಬಾಡಿಗೆಯ ನೆಪದಲ್ಲಿ ಟ್ರ್ಯಾಕ್ಟರ್ಗಳನ್ನು ಪಡೆದು ಬಳಿಕ ಖಾಸಗಿ ವ್ಯಕ್ತಿಗಳಿಗೆ ಹೆಚ್ಚಿನ ಹಣಕ್ಕೆ ಗಿರವಿ ಇಟ್ಟು ಪರಾರಿಯಾಗುತ್ತಿದ್ದನು.
Read More »
BigTv News
August 19, 2023
News, ಕರ್ನಾಟಕ, ಜಿಲ್ಲೆ, ಮೈಸೂರು
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಲವು ಕಲಾವಿದರು ಮತ್ತು ಕಲಾ ತಂಡಗಳು ಈಗಾಗಲೇ ಅರ್ಜಿ ಸಲ್ಲಿಸುತ್ತಿದ್ದಾರೆ. ದೇಶ ವಿದೇಶಗಳಿಂದ ಅನೇಕ ಕಲಾವಿದರು ಮೈಸೂರಿನ ಕಲಾಮಂದಿರದಲ್ಲಿರುವ ಕಚೇರಿಗೆ ನೇರವಾಗಿ ಮತ್ತು ಅಂಚೆಯ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ ಡಿ.ಸುದರ್ಶನ್ ತಿಳಿಸಿದ್ದಾರೆ. ದಸರಾದಲ್ಲಿ ಜರುಗುವ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ವೀರಗಾಸೆ, ಕತ್ತಿಕುಣಿತ , ಕರಡಿ …
Read More »