Breaking News

ಬರಡು ಬಯಲಾಗಿದ್ದ ಈ ಕಾಲೇಜು ಆವರಣವೀಗ ಸಸ್ಯಕಾಶಿ…

ಮೈಸೂರು: ಬರಡು ಭೂಮಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಸಿದ ಕನ್ನಡ ಉಪನ್ಯಾಸಕರೊಬ್ಬರ ಕಾರ್ಯವೈಖರಿಗೆ ಇಲ್ಲಿನ ದೊಡ್ಡ ಕವಲಂದೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣವೂ ಪೂರಕ ಎಂಬ ಮಾತಿಗೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಗಿದೆ.

ಬರಡು ಬಯಲಾಗಿದ್ದ ಈ ಕಾಲೇಜು ಆವರಣವೀಗ ಸಸ್ಯಕಾಶಿಯಾಗಿ ರೂಪುಗೊಂಡಿದೆ. ಕನ್ನಡ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿದ್ಯಾರ್ಥಿಗಳು, ಪ್ರಾಂಶುಪಾಲ ಡಾ.ಟಿ.ಆರ್ ಸಿದ್ದರಾಜು ಹಾಗು ಸಹೋದ್ಯೋಗಿಗಳ ಸಹಕಾರದಿಂದ ಕಾಲೇಜು ಕ್ಯಾಂಪಸ್‌ ಹಸಿರಾಗಿದೆ

ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಬೆಳವಣಿಗೆಗಾಗಿ ಮೀಸಲಾಗಿದ್ದ ಜಾಗ ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿತ್ತು. ಆಟದ ಮೈದಾನ ಹೊರತುಪಡಿಸಿ ಉಳಿದ ಜಾಗವನ್ನು ಹಸಿರೀಕರಣ ಮಾಡಲು ವೆಂಕಟರಮಣ ನಿರ್ಧರಿಸಿ ಕಾರ್ಯೋನ್ಮುಖರಾಗಿದ್ದರು. ಇದಕ್ಕಾಗಿ ಸಹೋದ್ಯೋಗಿಗಳ ಅಪಹಾಸ್ಯವನ್ನೂ ಅವರು ಎದುರಿಸಿದ್ದರಂತೆ.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *