Breaking News

ಧಾರವಾಡ

ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚನಸಾಲಿ ಸಮಾಜ ವಿರೋಧ

ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿರೋಧಿಸಿನಗರದ ಅಕ್ಕನ ಬಳಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚಾಮಸಾಲಿ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಸಭೆಯ ಹೊರಗಡೆ ಪಂಚಮಸಾಲಿ ಸಮಾಜದ ಮುಖಂಡರು, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ವಿರುದ್ಧ ಘೋಷಣೆ ಕೂಗಿ ಪುಟ್ಟಸಿದ್ದಶೆಟ್ಟಿಯ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ …

Read More »

ಧಾರವಾಡದಲ್ಲಿ ಕುಸಿದುಬಿದ್ದ ಮನೆ: ತಪ್ಪಿದ ದುರಂತ

ಧಾರವಾಡ: ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜನ್ನತಗರದಲ್ಲಿ ನಿನ್ನೆ ಮನೆಯೊಂದು ಕುಸಿದು ಬಿದ್ದಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.ಜನ್ನತನಗರ 8ನೇ ಕ್ರಾಸ್‌ನಲ್ಲಿರುವ ಕಲಾಲ ಎಂಬುವವರಿಗೆ ಸೇರಿದ ಮನೆಯೇ ರಾತ್ರಿ ಕುಸಿದು ಬಿದ್ದಿದೆ. ನಾಲ್ಕು ಜನ ಮನೆಯ ಸದಸ್ಯರು ಮಲಗಿದ್ದ ವೇಳೆಯೇ ಮನೆ ಕುಸಿದು ಬಿದ್ದಿದೆ. ಮೊದಲಿಗೆ ಮನೆಯ ಗೋಡೆಯಿಂದ ಮಣ್ಣು ಕುಸಿದ ಸಪ್ಪಳ ಕೇಳಿದ ಮನೆಯ ಸದಸ್ಯರು ಕೂಡಲೇ ಎದ್ದು ಹೊರಗಡೆ ಓಡಿ ಬಂದು ತಮ್ಮ ಪ್ರಾಣ …

Read More »

ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದು ಕೊನೆಗೆ ತಾನೂ ನೇಣು ಬಿಗಿದುಕೊಂಡ ಪತಿ

ಧಾರವಾಡ: ತನ್ನ ಪತ್ನಿಯ ಶೀಲ ಶಂಕಿಸಿದ ಪತಿರಾಯನೊಬ್ಬ ಆಕೆಯನ್ನು ಕೊಲೆ ಮಾಡಿ ಕೊನೆಗೆ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದಿದೆ. ಶ್ರೀದೇವಿ ರಾಮಾಪುರ ಎಂಬುವವಳೇ ಪತಿಯಿಂದ ಕೊಲೆಯಾದವಳು. ರಾಜು ರಾಮಾಪುರ ಎಂಬಾತನೇ ನೇಣು ಹಾಕಿಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡವನು. ಪತ್ನಿಯ ಮೇಲೆ ಸಂಶಯಪಡುತ್ತಿದ್ದ ರಾಜು, ಆಕೆಯನ್ನು ಹೊಲದಲ್ಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಆನಂತರ ತಾನೂ ಹೊಲದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ …

Read More »

ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿ : ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಸಾವು

ಧಾರವಾಡ:  ಎಸ್.ಪಿ. ಕಚೇರಿ ಎದುರು ನಡೆದ ಅಪಘಾತದಲ್ಲಿ ಶಾಸಕ ಅರವಿಂದ ಬೆಲ್ಲದ ಅವರ ಚಿಕ್ಕಪ್ಪ ಶಿವಣ್ಣ ಬೆಲ್ಲದ(82) ಸಾವನ್ನಪ್ಪಿದ್ದಾರೆ. ರಸ್ತೆ ಡಿವೈಡರ್ ಗೆ ಕಾರ್ ಡಿಕ್ಕಿಯಾಗಿ ಶಿವಣ್ಣ ಬೆಲ್ಲದ ಮೃತಪಟ್ಟಿದ್ದಾರೆ. ತಡರಾತ್ರಿ ಧಾರವಾಡದ ಎಸ್ಪಿ ಕಚೇರಿ ಎದುರು ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶಿವಣ್ಣ ಬೆಲ್ಲದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಬೆಲ್ಲದ ಮೃತಪಟ್ಟಿದ್ದಾರೆನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ರಾಷ್ಟ್ರಪತಿ ಆಗಮನ ಹಿನ್ನೆಲೆ , ಐಐಐಟಿಗೆ ಶಾಸಕ ಬೆಲ್ಲದ ಭೇಟಿ

ಧಾರವಾಡ : ಐಐಐಟಿ ಉದ್ಘಾಟನೆಗೆ ಸೋಮವಾರ ಧಾರವಾಡಕ್ಕೆ ರಾಷ್ಟ್ರಪತಿ ದೌಪದಿ ಮರ್ಮು ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಐಐಐಟಿಗೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ ಅವರು , ಅಲ್ಲಿನ ಪೂರ್ವಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಈ ಕಾರ್ಯಕ್ರಮದ ಬಂದೋಬಸ್ತ್ ಜವಾಬ್ದಾರಿ ಹೊತ್ತಿದ್ದು ಐಐಐಟಿಯಲ್ಲಿನ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ . ಶಾಸಕ ಅರವಿಂದ ಬೆಲ್ಲದ ಅವರು , ಕೇಂದ್ರಕ್ಕೆ ಭೇಟಿ …

Read More »

ಧಾರವಾಡ ಕೃಷಿ ಮೇಳದಲ್ಲಿ ಶ್ವಾನನಿಂದ ರಕ್ತದಾನ

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಕೃಷಿಮೇಳ ಆರಂಭಗೊಂಡು ಇಂದಿಗೆ ಮೂರು ದಿನ ಕಳೆಯಿತು. ಈ ಬಾರೀ ಮೇಳದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಶ್ವಾನಯೊಂದು ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಿದೆ… ಧಾರವಾಡದ ಕೃಷಿಮೇಳದಲ್ಲಿ ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಜೀವ ಉಳಿಸಿದೆ. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಸೋಮಶೇಖರ್ ಮಾನವೀಯತೆಯ ಮೆರೆದಿದ್ದಾರೆ…ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಹೆಸರಿನ ಶ್ವಾನಕ್ಕೆ ರಕ್ತ ಬೇಕಾಗಿತ್ತು. ವೈದ್ಯರ ಕರೆಯ …

Read More »

ಮೋದಿಜಿ ನಡೆ ಚಿಣ್ಣರ ಕಡೆ ಚಾಲನೆ

ಧಾರವಾಡ: ಕರ್ಪ್‌ಜ್ಞಾನ ಫೌಂಡೇಶನ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಎಜುಕೇಷನ್ ಬೋರ್ಡ್ ಇವರ ಸಂಯುಕ್ತ ಆಶ್ರಯದಲ್ಲಿ ಮೋದಿಜಿ ನಡೆ ಚಿಣ್ಣರ ಕಡೆ ಪ್ರಧಾನಿ ನರೇಂದ್ರ ಮೋದಿಯವರ 72ನೇಯ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ಗಣಿತ-ಮೇಳಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು. ಈ ಕಾರ್ಯಕ್ರಮ ದ ಅಂಗವಾಗಿ ಒಟ್ಟು 8 ಕೆ.ಜಿ ರಂಗೋಲಿ‌ ಬಳಸಿ, 7 ಪೋಟ್.2. ಇಂಚಿನ ಪ್ರಧಾನಿ ಮೋದಿ ಅವರ ಭಾವಚಿತ್ರ ಕೆಲಗೇರಿಯ ಮಂಜುನಾಥ …

Read More »

ಕರ್ತವ್ಯ ಲೋಪ ಇಬ್ಬರು ಪೊಲೀಸರನ್ನು ಅಮಾನತ್ತುಗೊಳಿಸಿದ ಎಸ್‌ಪಿ

ಧಾರವಾಡ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಿಂದ ಹಾವೇರಿ ಜಿಲ್ಲೆಗೆ ರಸ್ತೆ ಮುಖಾಂತರ ಹೋಗುವ ಸಂದರ್ಭದಲ್ಲಿ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸರು ಕರ್ತವ್ಯಕ್ಕೆ ತಡವಾಗಿ ಬಂದಿದ್ದಕ್ಕೆ ಆ ಇಬ್ಬರೂ ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ . ಧಾರವಾಡ ಮಹಿಳಾ ಪೊಲೀಸ್ ಠಾಣೆಯ ಹವಾಲ್ದಾರ ಸುರೇಶ ಹುಡೇದ ಹಾಗೂ ಅಣ್ಣಿಗೇರಿ ಪೊಲೀಸ್ ಠಾಣೆಯ ರಾಜೀವ್ ಶಿರುಂದ ಎಂಬುವವರೇ ಅಮಾನತ್ತುಗೊಂಡ ಪೊಲೀಸರು . ತಮಗೆ ನಿಯೋಜಿಸಿದ್ದ …

Read More »

ಧಾರವಾಡ ದೇವರ ಜಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರ ಮೆರವಣಿಗೆ

ಧಾರವಾಡ : ರಾಜ್ಯದಲ್ಲಿ ವಿ.ಡಿ.ಸಾವರ್ಕರ್ ಫೋಟೋ ವಿಚಾರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಧಾರವಾಡದಲ್ಲಿ ದೇವರ ಜಾತ್ರೆಯಲ್ಲಿ ಯುವಕರು ವಿ.ಡಿ. ಸಾವರ್ಕರ್ ಭಾವಚಿತ್ರ ಮೆರವಣಿಗೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಅಮ್ಮಿನಬಾವಿಯ ಈಶ್ವರ ಜಾತ್ರೆ ಹಿನ್ನೆಲೆಯಲ್ಲಿ ಹೆಜ್ಜೆಮೇಳದೊಂದಿಗೆ ಯುವಕರುಉ ವಿ.ಡಿ.ಸಾವರ್ಕರ್ ಭಾವಚಿತ್ರವನ್ನು ಹಿಡಿದು ಯುವಕರು ಸಾಗಿದ್ದಾರೆ. ವಿ.ಡಿ.ಸಾವರ್ಕರ್ ಭಾರತಾಂಬೆಯ ಹೆಮ್ಮೆಯ ವೀರಪುತ್ರ ಎಂಬ ಬರಹವುಳ್ಳ ಫೋಟೋ ಹಿಡಿದು ಸಾಗಿರುವ ಘಟನೆ ನಡೆದಿದೆ.

Read More »

ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ : ಜೋಶಿ

ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು ಮತ್ತು ಅದನ್ನು ಖಂಡಿಸುತ್ತೇನೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕರು, ಎಲ್ಲಿ ಬೇಕಾದರು ಅವರು ಹೋಗಿ ಪರಿಶೀಲನೆ ಮಾಡುವ ಹಕ್ಕು ಅವರಿಗಿದೆಎಂದರು. …

Read More »

You cannot copy content of this page