Breaking News

ನಿರುದ್ಯೋಗಿಗಳಲ್ಲಿ ಆಶಾಕಿರಣ ಮೂಡಿಸಿದ ಮಾಜಿ‌ ಸೈನಿಕ

ಚಿತ್ರದುರ್ಗ: ಕೆಲವರು ತಮ್ಮ ನೌಕರಿಯಿಂದ ನಿವೃತ್ತಿಯಾದರೆ ಸಾಕು ಕೈತುಂಭಾ ಪೆನ್ಷೆನ್ ತಗೊಂಡು ಹಾಯಾಗಿ ಕಾಲ ಕಳೆಯಬೇಕು ಅಂತ ಇಚ್ಚೆ ಪಡುತ್ತಾರೆ.ಆದರೆ ಇಲ್ಲಿ ನಾವೊಬ್ಬರು ಬದುಕಿದರೆ ಸಾಲದು.‌ ನಮ್ಮ ಸುತ್ತಮುತ್ತ ಇರುವ ಜನರಿಗೂ ಬದಕು ರೂಪಿಸಿಕೊಡಬೇಕು ಎಂಬ ಸಂಕಲ್ಪದಿಂದ ಉದ್ದಮೆ ಪ್ರಾರಂಭಿಸಿ ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಹಾಗು ತಮ್ಮ ಉದ್ದಿಮೆಯಲ್ಲಿ ಯಶಸ್ಸು ಕಂಡಿದ್ದಾರೆ,ಇಷ್ಷಕ್ಕೂ ಅವರು ಯಾರು,ಎಲ್ಲಿಯವರು ಏನು ಉದ್ದಿಮೆ ಮಾಡಿದ್ದರೆ ಅನ್ನೋದನ್ನ ಈ ವರದಿಯಲ್ಲಿ ನೊಡೋಣಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿ ನಿವಾಸಿಯಾದ ಇವರು ಮಾಜಿ ಸೈನಿಕರೊಬ್ಬರು ಯಂತ್ರಗಳನ್ನು ಜೋಡಿಸುತ್ತಾ ಸಾಮಾನ್ಯ ಕೆಲಸಗಾರನಂತೆ ಕೆಲಸ ಮಾಡ್ತಾ ಇದ್ದಾರೆ. ಅವರೇ ಸುಬ್ರಮಣ್ಯಂ. ಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಸುಬ್ರಮಣ್ಯಂ ನವರು ಹಾಯಾಗಿ ಕಾಲ ಕಳೆಯದೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದವರು. . ನಾವೊಬ್ಬರು ಬದುಕಿದರೆ ಸಾಲದು ನಮ್ಮ ಸುತ್ತಮುತ್ತ ಇರುವ ಜನರಿಗೂ ಬದುಕು ರೂಪಿಸಿಕೊಡಬೇಕು ಅನ್ನೋ ಸಂಕಲ್ಪಕ್ಕೆ ಕಾರಣ ಆ ಭಾಗದ ಜನರಲ್ಲಿ ಇರುವ ನೀರುದ್ಯೋಗದ ಸಮಸ್ಯೆ ಮತ್ತು ಅಲ್ಲಿ ಕಾಡುತ್ತಿರುವ ಬರ. ಹೀಗಾಗಿ ಮರದ ಗಾಣದಿಂದ ಎಣ್ಣೆ ತೆಗೆಯೂ ಉದ್ದಮಿ ಪ್ರಾರಂಭಿಸಿ ತಮ್ಮ ಗ್ರಾಮದ 20 ಕುಟುಂಬಗಳಿಗೆ ಉದ್ಯೊಗ ಸೃಷ್ಟಿಸಿದ್ದಾರೆ.
ಸುಬ್ರಮಣ್ಯಂನವರ ಈ ಕಾಯಕ್ಕೆ ಅವರ ಪತ್ನಿ ಹಾಗು ಕುಟುಂಬದ ಸದ್ಯಸರು ಕೂಡ ಸಾತ್ ನೀಡಿದ್ದಾರೆ.ಕೆಲಸಕ್ಕೆ ಬರೋ ಎಲ್ಲಾ ನೌಕರರ ಜೊತೆಗೆ ನಾವೂ ಕೆಲಸ ಮಾಡ್ತಿವಿ. ಸುಬ್ರಮಣ್ಯಂ ನವರು ಮನಸ್ಸು ಮಾಡಿದ್ದರೆ ನಿವೃತ್ತಿ ವೃತನದ ಜೋತೆಗೆ ಇನ್ನೋಂದು ಸರಕಾರಿ ನೌಕರಿ ಪಡೆದು ಹಾಯಾಗಿ ಇರಬಹುದಾಗಿತ್ತು. ಆದರೆ ಸ್ವಾವಲಂಬಿಯಾಗಿ ಬದುಕಿ ಇತರಿಗೂ ಜೀವನಕ್ಕೆ ದಾರಿಮಾಡಬೇಕು ಎಂಬಂತಹ ಮನೋಭಾವನೆ ನಮಗೆ ಸ್ಪೂರ್ತಿ ಎಂದು‌ ಕುಟುಂಬದ ಸದಸ್ಯರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಓಟ್ಟಾರೆ ಭಾರತೀಯ ಸೈನ್ಯದಲ್ಲಿ ಕೆಲಸ ಮಾಡಿ ಅಲ್ಲಿನ ತತ್ವ ಸಿದ್ದಾಂತಗಳನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೂ ಮಾದರಿಯಾದ ಮಾಜಿ ಸೈನಿಕನ ಈ ಕಾಯಕ ನಿಜಕ್ಕೂ ಗ್ರೇಟ್.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *