Breaking News

ಮೃತ ರೈತ ಕುಟುಂಬಕ್ಕೆ ಒಂದು ಲಕ್ಷ ಪರಿಹಾರಧನ ವಿತರಣೆ

ಮಂಡ್ಯ: ಕಳೆದ ಒಂದು ತಿಂಗಳ ಹಿಂದೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ನರಸೇಗೌಡ ಎತ್ತಿನಗಾಡಿ ಮಗುಚಿ ಮೃತಪಟ್ಟದ್ದ ಹಿನ್ನೆಲೆಯಲ್ಲಿ ಇಂದು ಕೃಷ್ಣರಾಜಪೇಟೆ ಎ ಪಿ ಎಂ ಸಿ ನಿರ್ದೇಶಕ ರಾದ ಐನೋರಹಳ್ಳಿ ಮಲ್ಲೇಶ್ ಹಾಗೂ ಮಹೇಶ್ವರಿ ನರಸೇಗೌಡ ರವರು ಮೃತ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆಯಡಿ ಮೃತ ಕುಟುಂಬದ ಮನೆಗೆ ಬೇಟಿ ನೀಡಿ ಮೃತನ ಪತ್ನಿ ಚಂದ್ರಮ್ಮ ರವರಿಗೆ ಒಂದು ಲಕ್ಷ ಪರಿಹಾರ ವಿತರಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ನಮ್ಮ ಎಂಪಿಎಂಸಿ ವತಿಯಿಂದ ರೈತ ಸಂಜೀವಿನಿ ಯೋಜನೆಯಡಿ ಜನಪ್ರಿಯ ಶಾಸಕರಾದ ಕೆ ಸಿ ನಾರಾಯಣಗೌಡರು,ಚೋಳೇನಹಳ್ಳಿ ಪುಟ್ಟಸ್ವಾಮಿಗೌಡರು, ಕಿಕ್ಕೇರಿ ಪ್ರಭಾಕರ್, ಎಚ್ ಟಿ ಮಂಜು, ಟಿ ಪಿ ಶಾರದಮ್ಮ ಕೃಷ್ಣೇಗೌಡರ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ಎ ಪಿ ಎಂ ಸಿ ಅದ್ಯಕ್ಷರು ಹಾಗೂ ಉಪಾದ್ಯಕ್ಷರು ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಇಂದು ಸೊಳ್ಳೇಪುರ ಗ್ರಾಮದ ಚಂದ್ರಮ್ಮ‌ನವಿಗೆ ಒಂದು ಲಕ್ಷ ಪರಿಯಾರ ನೀಡಿರುವದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕಿಕ್ಕೇರಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಸೊಳ್ಳೇಪುರ ಜಯರಾಮು, ಪಿ ಎ ಸಿ ಎಸ್ ಮಾಜಿ ಅದ್ಯಕ್ಷ ಸುರೇಶ್ ಗ್ರಾಮದ ಮುಖಂಡರಾದ ಸರ್ವೇ ವಾಸಣ್ಣ, ಮೋಹನ್, ಮನು, ರಮೇಶ್, ಶಂಭು ಸೇರಿದಂತೆ ಮತ್ತಿತ್ತರರು ಇದ್ದರು..

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *