Breaking News

ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚನಸಾಲಿ ಸಮಾಜ ವಿರೋಧ

ಧಾರವಾಡ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿರೋಧಿಸಿ
ನಗರದ ಅಕ್ಕನ ಬಳಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾಯಕ ಸಮಾಜದ ಒಕ್ಕೂಟಗಳ ಚಿಂತನ ಮಂಥನ ಸಭೆಗೆ ಪಂಚಾಮಸಾಲಿ ಸಮಾಜದ ಮುಖಂಡರು ವಿರೋಧ ವ್ಯಕ್ತಪಡಿಸಿದರು.

ಸಭೆಯ ಹೊರಗಡೆ ಪಂಚಮಸಾಲಿ ಸಮಾಜದ ಮುಖಂಡರು, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ವಿರುದ್ಧ ಘೋಷಣೆ ಕೂಗಿ ಪುಟ್ಟಸಿದ್ದಶೆಟ್ಟಿಯ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ಹೊರಹಾಕಿದರು.

ಪಂಚಮಸಾಲಿ‌ ಸಮಾಜ ಹಿಂದುಳಿದ ಸಮಾಜ .‌ಆದ್ರೆ ಕೆಲವರು ನಮ್ಮ ಸಮಾಜಕ್ಕೆ ಸಿಗುವ ಮೀಸಲಾತಿ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸಲು ಆಯೋಜಿಸಿರುವ ಈ ಚಿಂತನ ಮಂಥನ ಸಭೆ ನಡೆಯಬಾರದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಸ್ಥಿತಿ ಶಾಂತಗೊಳಿಸಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *