ಧಾರವಾಡ : ಐಐಐಟಿ ಉದ್ಘಾಟನೆಗೆ ಸೋಮವಾರ ಧಾರವಾಡಕ್ಕೆ ರಾಷ್ಟ್ರಪತಿ ದೌಪದಿ ಮರ್ಮು ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಐಐಐಟಿಗೆ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ ಅವರು , ಅಲ್ಲಿನ ಪೂರ್ವಸಿದ್ಧತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಈ ಕಾರ್ಯಕ್ರಮದ ಬಂದೋಬಸ್ತ್ ಜವಾಬ್ದಾರಿ ಹೊತ್ತಿದ್ದು
ಐಐಐಟಿಯಲ್ಲಿನ ಎಲ್ಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ . ಶಾಸಕ ಅರವಿಂದ ಬೆಲ್ಲದ ಅವರು , ಕೇಂದ್ರಕ್ಕೆ ಭೇಟಿ ನೀಡಿ ಮುಖ್ಯವೇದಿಕೆ , ಪೊಲೀಸ್ ಬಂದೋಬಸ್ತ್ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು .
ರಾಷ್ಟ್ರಪತಿಗಳೊಂದಿಗೆ ಸಂವಾದ ನಡೆಯಲಿದ್ದು , ಅವರಿಗೆ ಬೇಕಾದ ಊಟದ ವ್ಯವಸ್ಥೆಯನ್ನೂ ಇಲ್ಲೇ ಮಾಡಲಾಗಿದೆ . ನಾಳೆ ಭದ್ರತೆಗೆ ಎಸ್‌ಪಿಜಿ ಬರಲಿದೆ . ಉದ್ಘಾಟನಾ ಕಾರ್ಯಕ್ರಮದಲ್ಲಿ 700 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ .
ಐಐಐಟಿಗೆ ಜಾಗ ಕೊಟ್ಟ ರೈತರು , ವಿದ್ಯಾರ್ಥಿಗಳು , ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಬೆಲ್ಲದ ಮಾಹಿತಿ ನೀಡಿದರು . ಸೋಮವಾರ ನಡೆಯಲಿರುವ ಐಐಐಟಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಒಂದು ಗಂಟೆ ಸಮಯ ಮೀಸಲಿಟ್ಟಿದ್ದು , ಈಗಾಗಲೇ ಐಐಐಟಿ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

