BigTv News
June 10, 2022
Breaking News
ಅಥಣಿ: ‘ಚುನಾವಣೆ ಕುರಿತು ಒಬ್ಬ ವಕೀಲನಿಗೆ ಇರುವಷ್ಟು ಮಾಹಿತಿ ನಿಮಗೆ ತಿಳಿದಿದೆಯೇ? ನಿಮ್ಮ ವಿದ್ಯಾರ್ಹತೆ ಏನು?’ ಎಂದು ವಾಯವ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಅವರು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಪ್ರಶ್ನಿಸಿದರು. ‘ಕಾಂಗ್ರೆಸ್ ಅಭ್ಯರ್ಥಿಗೆ ವಾಯವ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯೇ ಗೊತ್ತಿಲ್ಲ’ ಎಂಬ ಸವದಿ ಹೇಳಿಕೆಗೆ, ಪಟ್ಟಣದಲ್ಲಿ ಗುರುವಾರ ಸುದ್ದಿಗಾರರಿಗೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು. ‘ನಾನೊಬ್ಬ ವಕೀಲ. ನನಗೆ ಚುನಾವಣೆ, ಕ್ಷೇತ್ರವ್ಯಾಪ್ತಿ ಬಗ್ಗೆ ತಿಳಿದಿದೆ ಎಂಬ …
Read More »
BigTv News
June 10, 2022
Breaking News, ಬೆಂಗಳೂರು
ಬೆಂಗಳೂರು : ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಈಗಾಗಲೇ ಕರ್ನಾಟಕ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂಗಾರು ಚುರುಕಾಗಿದ್ದು, ಕರ್ನಾಟಕದಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ.
Read More »
BigTv News
June 10, 2022
Breaking News
ಕಲಬುರಗಿ: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಸಿಐಡಿಯಿಂದ ಮತ್ತಿಬ್ಬರು ಆರೋಪಿಗಳ ಬಂಧನವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ನಿವಾಸಿಗಳಾದ ಮಹೇಶ್ ಹಿರೋಳಿ, ಸೈಫನ್ ಬಂಧಿತರು. ಬಂಧಿತರು ಕಿಂಗ್ಪಿನ್ ರುದ್ರಗೌಡ ಪಾಟೀಲ್ನ ಸಹಚರರು.ಇವರು ನೇಮಕಾತಿ ಅಕ್ರಮದಲ್ಲಿ ರುದ್ರಗೌಡನ ಜೊತೆ ಶಾಮೀಲು ಆಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಸೈಫನ್ ಸಹೋದರ ಪಿಎಸ್‌ಐ …
Read More »
BigTv News
June 9, 2022
Breaking News
ಕೊಪ್ಪಳ: ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಗುರುವಾರ ಮಾತನಾಡಿರುವ ಅವರು, ‘ಸಿದ್ದರಾಮಯ್ಯನವರು ನಮ್ಮ ನಾಯಕರನ್ನು ಏನೇನಕ್ಕೂ ಹೋಲಿಕೆ ಮಾಡುತ್ತಿದ್ದಾರೆ. ನಾವೆಲ್ಲ ಅವರನ್ನು ಎರಡು ತಲೆ ಹಾವು ಎಂದು ಕರೆಯಬೇಕಾಗುತ್ತೆ. ಯಾಕಂದ್ರೆ ಸಿದ್ದರಾಮಯ್ಯರ ನಾಲಿಗೆ ಸೀಳು ನಾಲಿಗೆ’ ಎಂದು ಏಕವಚನದಲ್ಲಿಯೇ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.’ಸಿದ್ದರಾಮಯ್ಯ ಬೆಳಗ್ಗೆ ಒಂದು ಮಾತಾಡ್ತಾನೆ, ಸಂಜೆ ಒಂದು ಮಾತಾಡ್ತಾನೆ. ಅವರ …
Read More »
BigTv News
June 9, 2022
Breaking News, ಬೆಂಗಳೂರು
ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಫಸ್ಟ್ ರ್ಯಾಂಕ್ ಅಭ್ಯರ್ಥಿ ಕೂಡ ಅರೆಸ್ಟ್ ಆಗಿದ್ದು, 545 ಹುದ್ದೆ ನೇಮಕಾತಿಯೇ ಸಂಪೂರ್ಣ ಅಕ್ರಮವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಪಿಎಸ್ ಐ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿ ಕುಶಾಲ್ ಕುಮಾರ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದಿದ್ದ ಆರೋಪ ಹಿನ್ನೆಲೆಯಲ್ಲಿ ಕುಶಾಲ್ ಕುಮಾರ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನುಮಾನದ …
Read More »
BigTv News
June 9, 2022
Breaking News, ಗದಗ, ಜಿಲ್ಲೆ
ಗದಗ: ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಆಯಾ ತಪ್ಪಿ ರೈಲಿನಡಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಮಹಿಳೆಯೊಬ್ಬಳನ್ನು ಸ್ಥಳದಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಸಿಬ್ಬಂದಿಯೊಬ್ಬರು ರಕ್ಷಣೆ ಮಾಡಿ ಸಮಯ ಪ್ರಜ್ಣೆ ಮೆರೆದ ಘಟನೆ ಗದಗ ರೈಲ್ವೆ ಜಂಕ್ಷನ್ನಲ್ಲಿ ನಡೆದಿದೆ. ನಿನ್ನೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಾಯಿರಾ ಎಂಬ ಮಹಿಳೆ ತಮ್ಮ ಕುಟುಂಬ ಸಮೇತರಾಗಿ ಹುಬ್ಬಳ್ಳಿ ವಿಜಯಪುರ ಪ್ಯಾಸೆಂಜರ್ ರೈಲಿನ ಮೂಲಕ ಗದಗ ಮಾರ್ಗವಾಗಿ ವಿಜಯಪುರ, ಸೊಲ್ಲಾಪುರಕ್ಕೆ ಹೊರಟಿದ್ರು. ಗದದ ರೈಲು ನಿಲ್ದಾಣದಲ್ಲಿ …
Read More »
BigTv News
June 9, 2022
Breaking News
ವಿಜಯಪುರ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉಪಾಧ್ಯಕ್ಷರಾದ, ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ.ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸ ತಮಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪರಿಷತ್ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಕಡೆಗಣಿಸಲಾಗಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ನಗರದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ಒಂದೇ ಕುಟುಂಬದವರಿಗೆ ಟಿಕೆಟ್ ಕೊಡಬಾರದು ಎಂಬುದು ಪ್ರಧಾನಿ ಮೋದಿ ಅವರ …
Read More »
BigTv News
June 9, 2022
Breaking News
ವಿಜಯಪುರ : ಬಿಜೆಪಿ ಬಿಎಸ್ವೈ ಹಾಗೂ ಅವರ ಕುಟುಂಬವನ್ನು ಪಕ್ಕಕ್ಕೆ ಸರಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲಾ ಬಿಜೆಪಿ ನನಗೆ ಕೊಟ್ಟಿರೋ ಸ್ಥಾನಮಾನಗಳು ಬೇರೆ ಯಾರಿಗೂ ಸಿಕ್ಕಿಲ್ಲ.ನಾಲ್ಕು ಬಾರಿ ಸಿಎಂ ಆಗಿದ್ದೇ, ಎಲ್ಲಾ ಅವಕಾಶ ಸಿಕ್ಕಿವೆ. ನಾನೇ ಸಿಎಂ ಸ್ಥಾನಕ್ಕೆ …
Read More »
BigTv News
June 9, 2022
Breaking News
ಮಂಡ್ಯ : ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ಜೈಜಗದೀಶ್ ಮತ್ತಿತರರ ವಿರುದ್ಧ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 5ರಂದು ಈ ಘಟನೆ ನಡೆದಿದ್ದು, ಜಯರಾಮೇಗೌಡ ಎಂಬವರು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.ಈ ವೇಳೆ ಅವರು ನಿರ್ವಾಹಕನಿಗೆ ಹೇಳಿ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಕಾರಿನಲ್ಲಿ ಬಂದ ಜೈಜಗದೀಶ್ ಮತ್ತಿತರರು, ಯಾಕೋ ಬಸ್ಸಿನಿಂದ ಬಾಟಲಿ ಎಸೆಯುತ್ತೀಯಾ ಎಂದು …
Read More »
BigTv News
June 9, 2022
Breaking News, ಮಂಡ್ಯ
ಮಂಡ್ಯ : ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕಾಲುವೆಯಲ್ಲಿ ಅರ್ಧ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯ ಹೊಟ್ಟೆಯ ಮೇಲ್ಭಾಗ, ತಲೆ, ಕೈ ನಾಪತ್ತೆಯಾಗಿದೆ. ಬೇರೆಲ್ಲೋ ಕೊಲೆ ಮಾಡಿ ದೇಹವನ್ನ ಕತ್ತರಿಸಿ ಕಾಲುವೆಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪಾಂಡವಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹದ ಕಾಲುಗಳಿಗೆ ಹಗ್ಗ ಕಟ್ಟಿರುವುದು ಬೆಳಕಿಗೆ ಬಂದಿದ್ದು ಮೃತ ಮಹಿಳೆಯ ದೇಹದ ಇತರೆ ಭಾಗಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.
Read More »