Breaking News

Breaking News

ಪ್ರಿಯಕರನ ಜೊತೆ ಮಗಳು ಪರಾರಿಯಾಗಿದ್ದಕ್ಕೆ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ!.

ಊರಿನ ತುಂಬಾ ಮಗಳು ಸತ್ತಳೆಂದು ಶ್ರದ್ಧಾಂಜಲಿ ಬ್ಯಾನರ್ ಹಾಕಿಸಿ ತಂದೆ ತಿಥಿ ಊಟ ಮಾಡಿಸಿದ್ದಾರೆ. ಪ್ರೀತಿಸಿದ ಹುಡುಗನೊಂದಿಗೆ ಸುಶ್ಮಿತಾ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಈ ಒಂದು ಕಾರಣಕ್ಕೆ ತಂದೆ ಈ ರೀತಿ ಬ್ಯಾನರ್ ಹಾಕಿ ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ. ಗ್ರಾಮದ ವಿಠ್ಠಲ್ ಬಸ್ತಾವಾಡ ಯುವಕನೊಂದಿಗೆ ಸುಶ್ಮಿತಾ ಪ್ರೀತಿಯಲ್ಲಿ ಬಿದ್ದಿದ್ದಳು.ಮಗಳು ಓಡಿ ಹೋಗಿದ್ದರಿಂದ ಮನನೊಂದು ತಂದೆ ಈ ಒಂದು ತಿಥಿ ಊಟ ಮಾಡಿಸಿ ಊರಿಗೆ ಊಟ ಹಾಕಿಸಿದ್ದಾರೆ.

Read More »

ಯುಎಸ್ ಮಿಲಿಟರಿ ಕಾರ್ಖಾನೆಯಲ್ಲಿ ಮಹಾಸ್ಫೋಟ: ಕಿ.ಮೀಗಟ್ಟಲೆ ದೂರಕ್ಕೆ ಕಂಪನ, 19 ಮಂದಿ ಸಾವು .

ಯುಎಸ್‌ ಮಿಲಿಟರಿಗಾಗಿ ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ತಯಾರಿಸಿ, ಪರೀಕ್ಷಿಸುವ ಸ್ಥಳವಾಗಿದ್ದ ಅಕ್ಯುರೇಟ್ ಎನರ್ಜಿಟಿಕ್ ಸಿಸ್ಟಮ್ಸ್ ಕಂಪನಿಗೆ ಸೇರಿದ 1,300 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಈ ದುರಂತ ಸಂಭವಿಸಿದೆ.ಎಂಟು ಕಟ್ಟಡಗಳನ್ನು ಹೊಂದಿರುವ ಈ ಸ್ಥಾವರದಲ್ಲಿನ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಇಡೀ ಕಟ್ಟಡವೇ ನಾಮಾವಶೇಷವಾಗಿದೆ ಮತ್ತು ಕಿಲೋಮೀಟರ್‌ಗಟ್ಟಲೆ ದೂರದವರೆಗೂ ಭಾರೀ ಕಂಪನದ ಅನುಭವವಾಗಿದೆ.

Read More »

ಅಪ್ರಾಪ್ತ ಬಾಲಕಿ ಮೇಲೆ ತಂದೆ ಮತ್ತು ಗೆಳೆಯನಿಂದ ಪದೇ ಪದೇ ಅತ್ಯಾಚಾರ, 3 ಬಾರಿ ಗರ್ಭಪಾತ..

ತಂದೆಯೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ(Rape)ವೆಸಗಿರುವ ಅಮಾನವೀಯ ಘಟನೆ ಹರಿದ್ವಾರದ ಕಂಖಾಲ್​ ಪ್ರದೇಶದಲ್ಲಿ ನಡೆದಿದೆ. 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ 60 ವರ್ಷದ ತಂದೆಯನ್ನು ಬಂಧಿಸಲಾಗಿದೆ. ಗರ್ಭಪಾತದ ಮಾತ್ರೆಗಳನ್ನು ನೀಡಿದ ಬಳಿಕ ಆಕೆಯ ಆರೋಗ್ಯ ತೀವ್ರ ಹದಗೆಟ್ಟಿತ್ತು ಆಗ ಮಾಹಿತಿ ಬೆಳಕಿಗೆ ಬಂದಿದೆ.ಗೆಳೆಯ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದ, ಇದರ ಪರಿಣಾಮವಾಗಿ ಎರಡು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಲಾಗಿತ್ತು ಎಂಬುದು ತಿಳಿದುಬಂದಿದೆ. ತಂದೆ ಮತ್ತು ಗೆಳೆಯ ಇಬ್ಬರನ್ನೂ ಬಂಧಿಸಿ …

Read More »

ಜಾತಿಗಣತಿಗೆ ತೆರಳಿದ್ದ ಶಿಕ್ಷಕಿಯನ್ನು ಕಾಂಪೌಡಿನಲ್ಲಿ ಕೂಡಿಹಾಕಿ ವಿಕೃತಿ – ಆರೋಪಿ ಅರೆಸ್ಟ್‌!

ಜಾತಿಗಣತಿ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿಯೊಬ್ಬರನ್ನು ಮನೆಯ ಕಾಂಪೌಂಡ್ ಒಳಗೆ ಕೂಡಿ ಹಾಕಿ ಬೀಗ ಹಾಕಿಕೊಂಡುಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟೀ ಅಂಗಡಿ ಮಾಲೀಕನನ್ನು ಕೊಡಿಗೇಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಭದ್ರಪ್ಪಲೇಔಟ್ ನಿವಾಸಿ ಸಂದೀಪ್ (31) ಎಂದು ಗುರುತಿಸಲಾಗಿದೆ. ಅ.8 ರಂದು ಕೊಡಿಗೇಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಸುಶೀಲ ಎಂಬುವವರು ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್ ಹಾಗೂ ಸುತ್ತ-ಮುತ್ತ ಗಣತಿ ಕಾರ್ಯ ಮಾಡುತ್ತಿದ್ದರು.

Read More »

ಶಾಲೆಯ ಶೌಚಾಲಯದಲ್ಲಿ ಜಾರಿ ಬಿದ್ದ 3ನೇ ತರಗತಿ ವಿದ್ಯಾರ್ಥಿ : ಕರುಳು ಹೊರ ಬಂದು ಒದ್ದಾಟ.!

ಆಂಧ್ರಪ್ರದೇಶದ ಬುಟಕಪಲ್ಲೆ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಘಟನೆಯಲ್ಲಿ ಶೌಚಾಲಯಕ್ಕೆ ಹೋಗಿದ್ದ ಮೂರನೇ ತರಗತಿಯ ವಿದ್ಯಾರ್ಥಿ ಪ್ರದೀಪ್ (10) ಮೂತ್ರ ವಿಸರ್ಜನಾ ಪಾತ್ರೆಯ ಮೇಲೆ ಹತ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ.ಸಹ ವಿದ್ಯಾರ್ಥಿಗಳು ಅವನನ್ನು ಗುರುತಿಸಿ ಕಿರುಚಿದರು. ಶಿಕ್ಷಕ ಶಂಕರಯ್ಯ ಅವನ ಪೋಷಕರಿಗೆ ಮಾಹಿತಿ ನೀಡಿ ಮದನಪಲ್ಲೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಉತ್ತಮ ಚಿಕಿತ್ಸೆಗಾಗಿ ತಿರುಪತಿಗೆ ಕಳುಹಿಸಲಾಗಿದೆ. ಎಸ್‌ಐ ನಾಗೇಶ್ವರ ರಾವ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More »

ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್ ಸ್ಥಿತಿ ಗಂಭೀರ!

ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್‌ ಆಗಿದ್ದ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಉಮೇಶ್‌ ಅವರ ಸ್ಥಿತಿ ಗಂಭೀರವಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ಮನೆಯಲ್ಲಿಯೇ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ ಎಂದು ವರದಿಯಾಗಿದೆ.ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ತಮ್ಮ ಕುಟುಂಬದೊಂದಿಗೆ ಅವರು ವಾಸವಾಗಿದ್ದರು. 70 ವರ್ಷದ ಉಮೇಶ್‌ ಅವರ ಸ್ಥಿತಿ ಸದ್ಯ ಗಂಭೀರವಾಗಿದ್ದು, ಆಂಬುಲೆನ್ಸ್‌ ಮೂಲಕ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅವರನ್ನು ಕುಟುಂಬಸ್ಥರು ಕರೆದುಕೊಂಡು ಬಂದಿದ್ದಾರೆ.

Read More »

ಶ್ರೀರಂಗಪಟ್ಟಣ | ಸಿಸಿ ವಾಹನಗಳ ತಡೆದ ಆರ್‌ಟಿಒ ಅಧಿಕಾರಿಗಳು: ಮಾಲೀಕರ ಆಕ್ರೋಶ.

ಕಾಂಟ್ರ್ಯಾಕ್ಟ್‌ ಕ್ಯಾರಿ (ಸಿಸಿ) ಪರ್ಮಿಟ್‌ ಬಾಡಿಗೆ ವಾಹನಗಳ ಮುಕ್ತ ಸಂಚಾರಕ್ಕೆ ಆರ್‌ಟಿಒ ಅಧಿಕಾರಿಗಳು ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ವಾಹನಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.ನಾಗಾಲ್ಯಾಂಡ್‌ ಮತ್ತು ದಿಯು-ದಾಮನ್‌ ನೋಂದಣಿ ಇರುವ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿ ಕರ್ನಾಟಕ ನೋಂದಣಿ ಇರುವ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಬೆಂಗಳೂರಿನ ಉಮೇಶ್ ದೂರಿದರು.

Read More »

ಡಿವೋರ್ಸ್‌ ಬಳಿಕ ಲವರ್‌ಬಾಯ್‌ ಆದ ಹಾರ್ದಿಕ್‌! ದಿನಕ್ಕೊಂದು ಹುಡುಗಿ ಜೊತೆ ಡೇಟಿಂಗ್‌.

ಹಾರ್ದಿಕ್‌ ಪಾಂಡ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ಮೈದಾನದಿಗಿಂತ ಹೆಚ್ಚು, ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಅಭಿಮಾನಿಗಳ ಕುತೂಹಲದ ವಿಷಯವಾಗಿದೆ. ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ನಿಂದ ವಿಚ್ಛೇದನ ಪಡೆದ ನಂತರ, ಹಾರ್ದಿಕ್‌ ಅವರ ಹೆಸರು ವಿವಿಧ ಮಾಡೆಲ್‌ಗಳೊಂದಿಗೆ ಸಂಪರ್ಕದಲ್ಲಿರುವ ಸುದ್ದಿ ಹರಿದಾಡುತ್ತಿದೆ.ಅಕ್ಟೋಬರ್‌ 10 ರಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಹಾರ್ದಿಕ್‌ ಮತ್ತು ಮಹಿಕಾ ಒಟ್ಟಿಗೆ ಪ್ರಯಾಣಿಸುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿತ್ತು. ಈ ದೃಶ್ಯಗಳು ಹೊರಬಂದ ಬಳಿಕ ಇಬ್ಬರ ನಡುವಿನ ಸಂಬಂಧದ …

Read More »

ಶೋಚನೀಯ ಸ್ಥಿತಿಯಲ್ಲಿ ಸಂಗೀತ ಸಾಮ್ರಾಜ್ಞಿ ಡಾ.ಗಂಗೂಬಾಯಿ ಹಾನಗಲ್ ನಿವಾಸ: ನವೀಕರಣಕ್ಕೆ ಸರ್ಕಾರಕ್ಕೆ ಆಗ್ರಹ.

ಧಾರವಾಡದ, ಹೊಸ ಯಲ್ಲಾಪುರ ರಸ್ತೆಯಲ್ಲಿರುವ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ, ಸಂಗೀತ ಶಿರೋಮಣಿ, ಸಂಗೀತ ಕಲಾರತ್ನ, ಪದ್ಮವಿಭೂಷಣ ಪುರಸ್ಕೃತ ಡಾ.ಗಂಗೂಬಾಯಿ ಹಾನಗಲ್ ಅವರ ನಿವಾಸ ಶಿಥಿಲಗೊಂಡಿದೆ.ಸ್ಮಾರಕ ಕಟ್ಟಡವು ಹತ್ತೇ ವರ್ಷದಲ್ಲಿ ಪಾಳು ಬಿದ್ದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ, ಕನ್ನಡ & ಸಂಸ್ಕೃತಿ ಇಲಾಖೆಯ ಅಸಡ್ಡೆಗೆ ಹಿಡಿದ ಕೈಗನ್ನಡಿ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ …

Read More »

ಸಂಘ ಪರಿವಾರದ ವಿರುದ್ಧ ದ್ವೇಷ ಭಾಷಣ – ಎಸ್‌ಡಿಪಿಐ ಮುಖಂಡ ರಿಯಾಜ್‌ ಕಡಂಬು ಅರೆಸ್ಟ್‌!

ಸಂಘಪರಿವಾರದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಸ್‌ಡಿಪಿಐ (SDPI) ಮುಖಂಡ ರಿಯಾಜ್ ಕಡಂಬು ಅವರನ್ನು ಪೊಲೀಸರು ಬಂಧಿಸಿದ್ದು 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹಸುವಿನ ತಲೆ ಮತ್ತು ಇತರ ದೇಹದ ಭಾಗಗಳನ್ನು ರಸ್ತೆಗೆ ಎಸೆದ ಘಟನೆಯು ಅಭಿವೃದ್ಧಿ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಂಘ ಪರಿವಾರದ ಕಾರ್ಯಕರ್ತರು ನಡೆಸಿದ ಸಂಘಟಿತ ಕೃತ್ಯವಾಗಿದೆ ಎಂದು ಹೇಳಿದ್ದರು. ಈ ಘಟನೆಯಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು …

Read More »