ಬೆಂಗಳೂರು: ದೀಪಾವಳಿ ಹೆಸರಿನಲ್ಲಿ ಮಾರತಹಳ್ಳಿಯ ಯಮಲೂರು ಕರಿಯಮ್ಮನ ಅಗ್ರಹಾರ ರಸ್ತೆಯ ಖಾಸಗಿ ವಿಲ್ಲಾದಲ್ಲಿ ನಡೆಯುತ್ತಿದ್ದ ಹೈಟೆಕ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅರಿಹಂತ್ ಪಾಂಡೆ, ಅಭಿನವ್ ಪಾಂಡೆ ಮತ್ತು ಪಾರ್ಥ ಬಂಧಿತರು. ಪೊಲೀಸರಿಗೆ ಮಾಹಿತಿ ಸಿಗದಂತೆ ಪ್ರತಿ ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಪಾರ್ಟಿ ಆಯೋಜಿಸಿ, ನಿಖರ ಸ್ಥಳವನ್ನು ಗೌಪ್ಯವಾಗಿಡಲಾಗುತ್ತಿತ್ತು. ದಾಳಿ ವೇಳೆ ಅನುಮತಿಯಿಲ್ಲದೆ ಪಾರ್ಟಿ ನಡೆಸುತ್ತಿರುವುದು ಹಾಗೂ ಹುಕ್ಕಾ, ಮದ್ಯ, ಡ್ರಗ್ಸ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಯುವತಿಯರ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡಿ ಯುವಕರನ್ನು ಪಾರ್ಟಿಗೆ ಆಹ್ವಾನಿಸಲಾಗುತ್ತಿತ್ತು. ಯುವಕರಿಗೆ ₹1,710, ಯುವತಿಯರಿಗೆ ₹1,080 ಹಾಗೂ ಜೋಡಿಗಳಿಗೆ ₹2,400 ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಈ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

