Breaking News

ಹೊಸಪೇಟೆ : ಯುವಕನ ಭೀಕರ ಹತ್ಯೆ; ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಹೊಸಪೇಟೆ: ಕೈ ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಕೇಳಿದ್ದಕ್ಕೆ ಆಟೋ ಚಾಲಕನೊಬ್ಬನನ್ನು ರುಬ್ಬುಗುಂಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಸಪೇಟೆಯ ಎಸ್.ಎಲ್. ಚೌಕಿ 4ನೇ ಕ್ರಾಸ್‌ನಲ್ಲಿ ನಡೆದಿದೆ. ಕಿರಣ್ ಅಲಿಯಾಸ್ ಚುಮ್ಮಿ (25) ಕೊಲೆಯಾದ ಯುವಕ. ಕಿರಣ್ ಸಾಲದ ಹಣ ವಾಪಸ್ ಕೇಳಲು ತೆರಳಿದ್ದಾಗ ಆರೋಪಿತನು ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಜಗಳವಾಡಿ, ರುಬ್ಬುಗುಂಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಿಯಪ್ಪ ಅಲಿಯಾಸ್ ಕರಿಯಾ, ರಾಜಶೇಖರ್ ಹಾಗೂ ವೆಂಕಟೇಶ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

1.15 ಕೋಟಿ ಹವಾಲಾ ಹಣ ದರೋಡೆ ಪ್ರಕರಣ: ಕಾನ್ಸ್‌ಟೇಬಲ್‌ ಅರೆಸ್ಟ್‌

ಕಾರವಾರ: 1.15 ಕೋಟಿ ರೂ. ಹವಾಲಾ ಹಣ ದರೋಡೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಟ್ರಾಫಿಕ್ ಪೊಲೀಸ್ ಠಾಣೆಯ …

Leave a Reply

Your email address will not be published. Required fields are marked *