Breaking News

ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಯುವಕ: ಜೋಳಿಗೆಯಲ್ಲಿ ಸಾವಿರಾರು ರೂ. ಪತ್ತೆ, ಸಾರ್ವಜನಿಕರಿಂದ ಧರ್ಮದೇಟು!

ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ವಿಶೇಷಚೇತನನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ಮಹಾರಾಷ್ಟ್ರ ಮೂಲದ ಸನ್ನಿ ಎಂಬ ಯುವಕನನ್ನು ಸಾರ್ವಜನಿಕರು ಹಿಡಿದಿದ್ದಾರೆ. ವಾಕಿಂಗ್ ಸ್ಟಿಕ್ ಬಳಸಿ, ಕೈಕಾಲು ನಡುಗಿಸುತ್ತಾ ಜನರ ಅನುಕಂಪ ಗಳಿಸಿ ಹಣ ಪಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಯುವಕನ ವರ್ತನೆ ಬಗ್ಗೆ ಅನುಮಾನಗೊಂಡ ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು ಆತನನ್ನು ವಿಚಾರಿಸಿದಾಗ ನಾಟಕ ಬಯಲಾಗಿದೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಸಾರ್ವಜನಿಕರು ಯುವಕನ ಮೇಲೆ ಹಲ್ಲೆ ನಡೆಸಿದ್ದು, ಆತನ ಜೋಳಿಗೆಯಲ್ಲಿ ಸಾವಿರಾರು ರೂಪಾಯಿ ಹಣ ಪತ್ತೆಯಾಗಿದೆ. ಪ್ರತಿದಿನ ₹5 ಸಾವಿರದಿಂದ ₹10 ಸಾವಿರ ಸಂಪಾದಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಬಳಿಕ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಜೋಳಿಗೆಯಲ್ಲಿ ಪತ್ತೆಯಾದ ಹಣವನ್ನು ಸಿದ್ದಗಂಗಾ ಮಠದ ಅನ್ನದಾಸೋಹಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದರ ಹಿಂದೆ ಸಂಘಟಿತ ಭಿಕ್ಷಾಟನೆ ಜಾಲ ಇರುವ ಶಂಕೆಯೂ ವ್ಯಕ್ತವಾಗಿದೆ.

Share News

About BigTv News

Check Also

ಪೂಜೆ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಅಕ್ಕ ಪಡೆಯಿಂದ ರಹಸ್ಯ ಕಾರ್ಯಾಚರಣೆ: 11 ಆರೋಪಿಗಳು ಅರೆಸ್ಟ್

ಬಳ್ಳಾರಿಯಲ್ಲಿ ಲಕ್ಷ್ಮೀ ಪೂಜೆ ಹೆಸರಿನಲ್ಲಿ ಬಡ ಹಾಗೂ ಮೂಢನಂಬಿಕೆ ನಂಬುವ ಯುವತಿಯರನ್ನು ವಂಚಿಸಿ, ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದ ಅಂತರರಾಜ್ಯ …

Leave a Reply

Your email address will not be published. Required fields are marked *