Breaking News

ಜಿಲ್ಲೆ

ಪ್ರೀತಿಸಿ ಮದುವೆಯಾದ ಪತಿಯ ಕೈಯಲೇ ಪ್ರಾಣ ಬಿಟ್ಟ ಪತ್ನಿ

ಮೈಸೂರು: ಪತಿಯೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿ ಎ.ಕೆ ಕಾಲೋನಿಯಲ್ಲಿ ನಡೆದಿದೆ. ಸಂಧ್ಯಾ (23) ಕೊಲೆಯಾದ ದುರ್ದೈವಿ. ಪತಿ ಕಿರಣ್ (27) ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ.ಸಂಧ್ಯಾ ಹಾಗೂ ಕಿರಣ್​ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಿರಣ್ ಮೂರು ತಿಂಗಳು ಪುನರ್ವಸತಿ ಕೇಂದ್ರದಲ್ಲಿದ್ದು ಮತ್ತೆ ಮನೆಗೆ ವಾಪಸ್​ ಆಗಿದ್ದ.ಇನ್ನು ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, …

Read More »

ಟಿಪ್ಪು ಎಕ್ಸ್​ಪ್ರೆಸ್ ಹೆಸರು ಬದಲಾಯಿಸುವಂತೆ ಪ್ರತಾಪ್ ಸಿಂಹ ಮನವಿ

ಮೈಸೂರು : ಟಿಪ್ಪು ಎಕ್ಸ್ ಪ್ರೆಸ್ ರೈಲು ಹೆಸರು ಬದಲಾಯಿಸುವ ಸಂಬಂದ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ಗೆ ದೆಹಲಿಯಲ್ಲಿ ಭೇಟಿಯಾಗಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಟಿಪ್ಪು ಎಕ್ಸ್​ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ಎಂದು ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಬಹಳಷ್ಟು ಇದೆ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಹೆಸರಿಡಲು ಒತ್ತಾಯ ಮಾಡಲಾಗಿದೆ.

Read More »

ಗೊಮ್ಮಟೇಶ್ವರ ಮೂರ್ತಿ ಅವಹೇಳನಕಾರಿ ಮಾತು : ಮೈಸೂರುನಲ್ಲಿ ನಿಷೇಧಾಜ್ಞೆ ಜಾರಿ

ಮೈಸೂರು: ನಗರದಲ್ಲಿ ಫೆ. 11ರಂದು ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಎಲ್ಲ ರೀತಿಯ ಪ್ರತಿಭಟನೆ ಹಾಗೂ ಮೆರವಣಿಗೆಗಳನ್ನು ನಿಷೇಧಿಸಿ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ‘ಗೊಮ್ಮಟೇಶ್ವರ ಮೂರ್ತಿ ಕುರಿತು ದಿ ನ್ಯೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಯೂಬ್‌ಖಾನ್‌ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾಗೆ ಕರೆ ನೀಡಿರುವ ಸಂದೇಶ ವೈರಲ್‌ ಆಗಿರುವುದು ಹಾಗೂ …

Read More »

ಹಿಜಾಬ್ ವಿವಾದದ ಅಂತಿಮ ತೀರ್ಪು ಬರುವವರೆಗೂ ಕಾಯಬೇಕು : ಕುಮಾರಸ್ವಾಮಿ

ಹಾಸನ: ಹಿಜಾಬ್ ವಿವಾದದ ಬಗ್ಗೆ ಅಂತಿಮ ತೀರ್ಪು ಬರುವವರೆಗೂ ಸಮಾಧಾನದಿಂದ ಇರಬೇಕು ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಾಗರಹಳ್ಳಿ ಗ್ರಾಮದ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾನಾಡಿದ ಅವರು, ನನಗೆ ಜನ್ಮ ಕೊಟ್ಟ ಜಿಲ್ಲೆ ಹಾಸನ, ರಾಜಕೀಯಕ್ಕೆ ಜನ್ಮ ಕೊಟ್ಟ ಜಿಲ್ಲೆ ರಾಮನಗರ ಎಂದರು.

Read More »

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಂದಿನ ಜೆಡಿಎಸ್ ಅಭ್ಯರ್ಥಿ ನಾನೇ : ಕುಮಾರಸ್ವಾಮಿ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮುಂದಿನ ಜೆಡಿಎಸ್ ಅಭ್ಯರ್ಥಿ ನಾನೇ . ಕುಟುಂಬ ರಾಜಕಾರಣ ಹೆಸರಲ್ಲಿ ನಮ್ಮ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಈಗ ಕೇವಲ ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾನು, ನಮ್ಮ ಸಹೋದರರು ಬೇರೆಯಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂದು ಕಾರ್ಯಕರ್ತರು ಪ್ರಶ್ನಿಸಿದಾಗ, ನಾನೇ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ನಾನು ನನ್ನ ಪತ್ನಿ, ನನ್ನ …

Read More »

ತನ್ವೀರ್‌ಸೇಠ್ ಆಸ್ಪತ್ರೆಗೆ ದಾಖಲು

ಮೈಸೂರು: ನಗರದ ತಮ್ಮ ಮನೆಯಲ್ಲಿ ಅಸ್ವಸ್ಥರಾದ ಶಾಸಕ ತನ್ವೀರ್‌ಸೇಠ್ ಅವರನ್ನು ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶೆಣೈ, ‘ಅಸಿಟಿಡಿ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅವರು ಆಸ್ಪತ್ರೆಗೆ ಬಂದರು. ಕೆಲವೊಂದು ಪರೀಕ್ಷೆಗಳನ್ನು ಮಾಡಬೇಕಿರುವುದರಿಂದ ಒಂದು ದಿನದ ಮಟ್ಟಿಗೆ ದಾಖಲಿಸಿಕೊಳ್ಳಲಾಗಿದೆ. ಸದ್ಯ, ಅವರು ಸಾಮಾನ್ಯ ವಾರ್ಡ್‌ನಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ಹೇಳಿದರು.

Read More »

ಹಿಜಾಬ್‌ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನ : ಡಿಕೆಶಿ

ಮಂಗಳೂರು : ಹಿಜಾಬ್‌ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವ ಕುಮಾರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಪ್ರಸ್ತುತ ಜನರಿಗೆ ಬೇಕಾಗಿರುವುದು ಆರ್ಥಿಕ ಭದ್ರತೆ, ಉದ್ಯೋಗ, ನೆಮ್ಮದಿಯ ಬದುಕು. ಜನತೆಯ ಈ ಆಶೋತ್ತರಗಳನ್ನು ಈಡೇರಿಸುವುದೇ ಕಾಂಗ್ರೆಸ್‌ನ ಗುರಿ. ನಾವು ಆದ್ಯತೆ ನೀಡುವುದು ಇದಕ್ಕೆ. ಆದರೆ ಬಿಜೆಪಿಗೆ ಈ ಆದ್ಯತೆಗಳು ಬೇಕಾಗಿಲ್ಲ . ಅವರ ಗಮನ ಇರುವುದು ಮತೀಯ ಭಾವನೆಗಳನ್ನು ಕೆರಳಿಸಿ ಅರಾಜಕತೆ …

Read More »

ಹಿಜಾಬ್ ವಿವಾದಕ್ಕೆ ಕಿಡಿಕಾರಿದ ಯತ್ನಾಳ್

ಮೈಸೂರು: ಹಿಜಾಬ್ ಧರಿಸಬೇಕೆಂದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಇಂದು ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತೇವೆ ಎಂದು ಹೇಳುವವರು ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಲು ಅವಕಾಶ ಕೊಡಿ ಎನ್ನುತ್ತಾರೆ.ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.

Read More »

ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ನಿಧನ

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಅವರಿಗೆ ಇಂದು ಮುಂಜಾನೆ ಹೃದಯಘಾತವಾಗಿತ್ತು ಎನ್ನಲಾಗಿದೆ. ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (ಹುಟ್ಟು-10 ಮೇ 1940) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿರುವ ತತ್ವಪದಕಾರರು ಮತ್ತು ಪ್ರವಚನಕಾರರು.ಇವರಿಗೆ 2018ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.

Read More »

ವರ್ಗಾವಣೆ ಮಾಡಿರುವ ನಿರ್ಧಾರಕ್ಕೆ ಅಸಮಾಧಾನವಿಲ್ಲ : ಡಾ.ಬಸಪ್ಪ

ಮೈಸೂರು: ಈಚೆಗಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಉಪಕುಲಸಚಿವ ಸ್ಥಾನದಿಂದ ಡಾ.ಬಸಪ್ಪ ಅವರನ್ನು ಏಕಾ-ಏಕಿ ವರ್ಗಾವಣೆ ಮಾಡಿರುವ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಸ್ಪಷನೆ ನೀಡಿರುವ ಡಾ.ಬಸಪ್ಪ ಅವರು, ʻವರ್ಗಾವಣೆ ಮಾಡುವುದು ವಿಶ್ವವಿದ್ಯಾನಿಲಯದ ನಿರ್ಧಾರ, ಅದಕ್ಕೆ ನಾನು ಬದ್ಧನಾಗಿದ್ದೇನೆ. ವಿವಿಯ ಯಾವುದೇ ವಿಭಾಗಕ್ಕೆ ವರ್ಗಾವನೆ ಮಾಡಿದರೂ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇದರಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

Read More »