Breaking News

ಮಂಗಳೂರಿನಲ್ಲಿ ಮಹಿಳೆಯ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 1,81,50,000ರೂ. ವಂಚಿಸಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಹಿಳೆಯೊಬ್ಬರ ಮೊಬೈಲ್‌ಗೆ ಅ.24ರಂದು ಅಪರಿಚಿತ ಕರೆ ಮಾಡಿದ್ದು, ಮುಂಬೈನ ಕೊಲಾಲ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಮಹಿಳೆಯನ್ನು ನಂಬಿಸಿ ಆಕೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಮಾಡಿ ಕಮಿಷನ್ ತೆಗೆದುಕೊಂಡ ಆರೋಪವಿದೆ ಎಂದು ಹೇಳಿದರೆನ್ನಲಾಗಿದೆ.ಇದರಿಂದ ಭಯಭೀತರಾದ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಲೆಟರ್ ಬರೆಸಿಕೊಂಡು ವಾಟ್ಸ್‌ಆಯಪ್ ನಂಬ್ರವೊಂದಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ. ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತ ವ್ಯಕ್ತಿಗಳು ಪೊಲೀಸ್ ಅಕಾರಿಗಳೆಂದು ಪರಿಚಯಿಸಿ ವಾಟ್ಸಪ್ ವಿಡಿಯೋ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಾದ ಬಳಿಕ ನಮ್ಮಲ್ಲಿ ಹಣವನ್ನು ನೀಡಿದರೆ, ಪ್ರಕರಣ ಇತ್ಯರ್ಥವಾದ ಬಳಿಕ ವಾಪಾಸ್ ನೀಡುತ್ತೇವೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಅ.28ರಿಂದ ನ.11ರವರೆಗೆ ಹಂತಹಂತವಾಗಿ 1,81,50,000ರೂ. ಆರ್ಟಿಜಿಎಸ್ ಮೂಲಕ ಹಣ ವರ್ಗಾಯಿಸಿದ್ದಾರೆ.ವಂಚನೆಗೊಳಗಾದ ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *