ತುಮಕೂರು : ಶ್ರೀ ಶಿವಕುಮಾರ ಸ್ವಾಮೀಜಿಯ ಜನ್ಮದಿನೋತ್ಸವ ಹಿನ್ನೆಲೆ ನಿನ್ನೆ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ . ಹಿಂದೆ ನಾನು ಇಲ್ಲಿಗೆ ಬಂದಿದ್ದೆ . ನನ್ನ ಅಜ್ಜಿ , ತಂದೆ , ತಾಯಿಯೂ ಇಲ್ಲಿಗೆ ಭೇಟಿ ನೀಡಿದ್ದರು . ಹಾಗಾಗಿ , ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ . ಇಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯವಾಗುತ್ತಿದೆ.
ಮಠದ ಸೇವೆ , ದಾಸೋಹ ಬಹಳಷ್ಟು ಸಂತೋಷ ಉಂಟು ಮಾಡುವಂಥದ್ದು . ಬಸವಣ್ಣನವರು ನೀಡಿದ ಜಾತಿ , ಧರ್ಮ , ದ್ವೇಷ ಹಾಗು ಅಸೂಹೆ ಇಲ್ಲದ ಜೀವನವೇ ನಮಗೆ ಮಂತ್ರವಾಗಿದೆ ಎಂದು ಹೇಳಿದರು.ಶಿವಕುಮಾರ ಸ್ವಾಮೀಜಿಗಳು ಸುಮಾರು ವರ್ಷಗಳ ಕಾಲ ನಮಗೆ ದಾರಿದೀಪವಾಗಿದ್ದರು.ನಾನು ಹಿಂದೆ ಮಠಕ್ಕೆ ಭೇಟಿ ಕೊಟ್ಟಾಗ ಶ್ರೀಗಳನ್ನು ಭೇಟಿ ಮಾಡಿದ್ದೆ . ಇಂದು ಸ್ವಾಮೀಜಿ ನಮ್ಮೊಂದಿಗಿಲ್ಲ , ಆದರೆ ನಮಗೆ ಅವರು ಬದುಕುವ ಮಾರ್ಗ ತೋರಿದ್ದಾರೆ . ಆ ಮಾರ್ಗದಲ್ಲಿ ನಾವು ನಡೆಯಬೇಕು ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

