Breaking News

ದೇಶ-ವಿದೇಶ

ಲಂಕಾ ಕ್ರಿಕೆಟಿಗರು ಫಿಟ್‌ನೆಸ್‌ ಕಳೆದುಕೊಂಡರೆ ವೇತನ ಕಡಿತ !

ಕೊಲಂಬೊ: ರಾಷ್ಟ್ರೀಯ ತಂಡದ ಆಟಗಾರರ ಫಿಟ್‌ನೆಸ್‌ ವಿಚಾರದಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರಂತೆ ಮುಂದಿನ ವರ್ಷದಿಂದ ಆಟಗಾರರು ಕಟ್ಟುನಿಟ್ಟಿನ ಫಿಟ್‌ನೆಸ್‌ ಪರೀಕ್ಷೆಗೆ ಒಳಪಡಲಿದ್ದು, ಇಲ್ಲಿ ಅನುತ್ತೀರ್ಣರಾದ ಆಟಗಾರ ವೇತನ ಕಡಿತ ಮಾಡಲು ನಿರ್ಧರಿಸಿದೆ!ಲಂಕಾ ಕ್ರಿಕೆಟ್‌ ಮಂಡಳಿ ಕಳೆದ ವರ್ಷ ರೂಪಿಸಿದ್ದ ನಿಯಮಾನುಸಾರ ಆಟಗಾರರು 8 ನಿಮಿಷ, 55 ಸೆಕೆಂಡ್‌ಗಳಲ್ಲಿ 2 ಕಿ.ಮೀ. ಓಟವನ್ನು ಪೂರೈಸಬೇಕಿತ್ತು.ಇದಕ್ಕೂ ಮುನ್ನ ಈ ದೂರವನ್ನು 8 ನಿಮಿಷ, 35 ಸೆಕೆಂಡ್‌ಗಳಲ್ಲಿ ಪೂರೈಸುವಂತೆ ಸೂಚಿಸಲಾಗಿತ್ತು. …

Read More »

ದೈಹಿಕ ಸಂಬಂಧದ ನಂತರ ಮದುವೆಯಾಗಲು ನಿರಾಕರಿಸುವುದು ಮೋಸವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಪರಸ್ಪರ ಒಪ್ಪಿಗೆಯೊಂದಿಗೆ ದೀರ್ಘಾವಧಿಯವರೆಗೆ ದೈಹಿಕ ಸಂಬಂಧಗಳನ್ನು ಉಳಿಸಿಕೊಂಡ ನಂತರ ಮದುವೆಯಾಗಲು ನಿರಾಕರಿಸುವುದನ್ನು ವಂಚನೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಸಂತ್ರಸ್ತೆ ಪಾಲ್ಘರ್ ನಿವಾಸಿಯೊಬ್ಬರು ಮೂರು ವರ್ಷಗಳಕಾಲ ಮದುವೆಯ ನೆಪದಲ್ಲಿ ದೈಹಿಕ ಸಂಬಂಧವನ್ನು ಹೊಂದಿದ್ದರು ಮದುವೆ ಮಾಡಿಕೊಳ್ಳುವಂತೆ ಕೇಳಿದ್ದಾಗ ಯುವಕ ನಿರಾಕರಿಸಿದ್ದಾನೆ ಅಂತ ಯುವತಿ ನ್ಯಾಯಾಕ್ಕಾಗಿ ಮನವಿ ಸಲ್ಲಿಸಿದ್ದಳು. ಇದೇ ವೇಳೇ ಆರೋಪಿಯ ಮೇಲೆ ಅತ್ಯಾಚಾರ ಮತ್ತು ವಂಚನೆಗಾಗಿ ಸೆಕ್ಷನ್ 376 ಮತ್ತು 417 ರ ಅಡಿಯಲ್ಲಿ …

Read More »

ತೃತೀಯ ಲಿಂಗಿಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಅವಕಾಶ..!

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ನೀಡುವ ಮೂಲಕ ಸ್ವಾಗತಾರ್ಹ ಮತ್ತು ಪ್ರಗತಿಪರ ಹೆಜ್ಜೆ ಇಟ್ಟಿದ್ದು, ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಪುರುಷ, ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಳೆದ ವರ್ಷ ನಗರದ ಎನ್‌ಜಿಒ ಮತ್ತು ಹಕ್ಕುಗಳ ಸಂಘ – ಸಂಗಮ ಹಾಗೂ ಸಾಮಾಜಿಕ ಕಾರ್ಯಕರ್ತೆ ನಿಶಾ ಗೂಳೂರ್ ಪರ ಹಿರಿಯ ವಕೀಲ ಬಿಟಿ ವೆಂಕಟೇಶ್ …

Read More »

ಹೊಸ ವರ್ಷಕ್ಕೆ ನಿರ್ಬಂಧ, ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ-ಕ್ರೀಸ್ಮಸ್‌ ಗಿಲ್ಲ ನಿರ್ಬಂಧ

ಬೆಂಗಳೂರು : 2021ಕ್ಕೆ ಬೈ-ಬೈ ಹೇಳಿ 2022ಕ್ಕೆ ಹಾಯ್‌ ಹೇಳುತ್ತಾ ಅದ್ಧೂರಿಯಾಗಿ ಹೊಸ ವರ್ಷವನ್ನು ವೆಲ್‌ಕಮ್‌ ಮಾಡ್ಕೊಳ್ಳೋಕೆ ಸಾಕಷ್ಟು ಮಂದಿ ತುದಿಗಾಲಲ್ಲಿರುವ ಹೊತ್ತಿನಲ್ಲೇ, ಕೊರೊನಾ ಮತ್ತು ಒಮಿಕ್ರಾನ್‌ ವೈರಸ್‌ ತಡೆಗಟ್ಟುವ ಕಾರಣದಿಂದ ಸರ್ಕಾರ ಅದ್ಧೂರಿ ವರ್ಷಾಚರಣೆಗೆ ಬ್ರೇಕ್‌ ಹಾಕಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಜೊತೆಗೆ ಕ್ರೀಸ್ಮಸ್‌ ಹಬ್ಬಕ್ಕೆ ಯಾವುದೇ ನಿರ್ಭಂದ ಹೇರಿಲ್ಲ. ರೆಸ್ಟೋರೆಂಟ್, ಕ್ಲಬ್‌ಗಳಿಗೆ ಶೇಕಡಾ 50ರಷ್ಟು ಜನರಿಗೆ ಪ್ರವೇಶಸೀಮಿತ ಪ್ರಮಾಣದಲ್ಲಿ ಮ್ಯೂಸಿಕ್‌, ಡಿ.ಜೆಗೆ ಅವಕಾಶಎಂಜಿ ರಸ್ತೆ, ಬ್ರಿಗೇಡ್ ರಸ್ತೆ …

Read More »

ಡೆಲ್ಟಾಗಿಂತ ವ್ಯಾಪಕವಾಗಿ ಹರಡುತ್ತಿದೆ ಒಮಿಕ್ರಾನ್;‌ ಈ ಕುರಿತು ಸಾಕ್ಷ್ಯ ಲಭ್ಯ ಎಂದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ

ಒಮಿಕ್ರಾನ್ ರೂಪಾಂತರಿ ಕೋವಿಡ್ ಸೋಂಕು ಈಗ ವ್ಯಾಪಕವಾಗಿ ಹರಡುತ್ತಿದ್ದು, ಲಸಿಕೆ ಪಡೆದ ಹಾಗೂ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲೂ ಸಹ ಕಂಡು ಬರುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ತಿಳಿಸಿದ್ದಾರೆ. “ಡೆಲ್ಟಾ ರೂಪಾಂತರಿಗಿಂತಲೂ ಒಮಿಕ್ರಾನ್‌ ವ್ಯಾಪಕವಾಗಿ ಹರಡುತ್ತಿದೆ ಎಂಬ ಕುರಿತು ಈಗ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ,” ಎಂದ ಟೆಡ್ರೋಸ್, “ಮತ್ತು ಲಸಿಕೆ ಪಡೆದ ಮತ್ತು ಚೇತರಿಸಿಕೊಂಡ ಮಂದಿಗೂ ಈ ಸೋಂಕು ತಗುಲುವ ಸಾಧ್ಯತೆ ಇದೆ,” ಎಂದಿದ್ದಾರೆ.

Read More »
Featured Video Play Icon

ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು-ನಟ ಪ್ರೇಮ್

Read More »

ತಮಿಳ್ ತಾಯ್ ವಾಳ್ತ್ ಈಗ ತಮಿಳುನಾಡಿನ ಅಧಿಕೃತ ನಾಡಗೀತೆ

– ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ ಚೆನ್ನೈ: ತಮಿಳು ತಾಯಿಗೆ ವಂದಿಸುವ (ತಮಿಳ್ ತಾಯ್ ವಾಳ್ತ್) ತಮಿಳು ತಾಯಿಯೇ ನಿನಗೆ ವಂದನೆ ಗೀತೆಯನ್ನು ತಮಿಳುನಾಡು ತನ್ನ ನಾಡಗೀತೆಯಾಗಿ ಫೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ. ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್ ತಮಿಳ್ ತಾಯ್ ವಾಳ್ತ್ ಕೇವಲ ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರ ಗೀತೆಯಲ್ಲ, ಹೀಗಾಗಿ ಈ ಹಾಡಿನ ವೇಳೆ ಯಾರೂ ಎದ್ದು ನಿಲ್ಲುವ …

Read More »

ಮಾರುಕಟ್ಟೆಗೆ ಹೋಗಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

ಕೋಲ್ಕತ್ತಾ: 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮಾರುಕಟ್ಟೆಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಸಂಬಂಧ ಪರಿಚಯಸ್ತ ಆಟೋ ಚಾಲಕನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಘಟನೆಯ ದಿನ, ವಿದ್ಯಾರ್ಥಿನಿ ಮಾರುಕಟ್ಟೆಗೆ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಆಟೋ ಚಾಲಕ ಅವಳನ್ನು ಮಾರುಕಟ್ಟೆಗೆ ಬಿಡುತ್ತೇನೆ ಎಂದು ನಂಬಿಸಿದ್ದಾನೆ. ನಂತರ ದಾರಿಯಲ್ಲಿ ಆಟೋದ …

Read More »

ದೇಶದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಡೋಸ್ ವ್ಯರ್ಥ

ನವದೆಹಲಿ: ಭಾರತದಲ್ಲಿ 62 ಲಕ್ಷಕ್ಕೂ ಅಧಿಕ ಕೋವಿಡ್ ಲಸಿಕೆ ವ್ಯರ್ಥವಾಗಿದೆ. ಅದರಲ್ಲಿ ಅರ್ಧದಷ್ಟು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳೆಂದು ಎಂದು ವರದಿಯಾಗಿದೆ. ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು 16.48 ಲಕ್ಷ, ಉತ್ತರ ಪ್ರದೇಶದಲ್ಲಿ 12.60 ಲಕ್ಷ ಮತ್ತು ರಾಜಸ್ಥಾನದಲ್ಲಿ 6.86 ಲಕ್ಷ ಕೋವಿಡ್ ಡೋಸ್ ವ್ಯರ್ಥವಾಗಿದೆ. ಈ ಮೂರು ರಾಜ್ಯಗಳನ್ನು ತೆಗೆದುಕೊಂಡರೆ ಒಟ್ಟಾರೆಯಾಗಿ 36 ಲಕ್ಷದಷ್ಟು ನಷ್ಟವಾಗಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ …

Read More »

ಮಹಾರಾಷ್ಟ್ರ ಸಿಎಂ ಭಾವಚಿತ್ರ ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದ ಕನ್ನಡಪರ ಸಂಘಟನೆಗಳು

ಹುಬ್ಬಳ್ಳಿ: ಕನ್ನಡ ಧ್ವಜವನ್ನು ಸುಟ್ಟು ಹಾಕಿದ ಕಿಡಿಗೇಡಿಗಳನ್ನು ಬಂಧಿಸಿ, ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ, ಹಾಗೂ ಮಹಾರಾಷ್ಟ್ರ ಸಿಎಂ ಭಾವಚಿತ್ರವನ್ನು ಸುಟ್ಟು ಹಾಕಿ, ವಿವಿಧ ಕನ್ನಡ ಪರ ಸಂಘಟನೆಗಳು ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತ ತಮ್ಮ ಆಕ್ರೋಶ ಹೊರ ಹಾಕಿದರು. ನಂತರ ತಹಶೀಲ್ದಾರರ ಕಚೇರಿ ವರೆಗೆ ಬಂದು ತಹಶೀಲ್ದಾರರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ನೀಡಿದರು

Read More »