Breaking News

ದರ್ಶನ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ: 1 ಲಕ್ಷ ರೂ.ಖರ್ಚು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್‌ ಮತ್ತು ತಂಡ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಆದರೆ ಅಚ್ಚರಿ ಸಂಗತಿ ಎಂದರೆ ಪೊಲೀಸ್​​ ಇಲಾಖೆ ಚಾರ್ಜ್​ಶೀಟ್​ಗಾಗಿ ₹1 ಲಕ್ಷ ಖರ್ಚು ಮಾಡಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್​ ದುಬಾರಿ ಎಂದೆನಿಸಿಕೊಂಡಿದೆ. ಪೊಲೀಸ್​ ಇಲಾಖೆಯು ಪ್ರಕರಣದ ತನಿಖೆಗೆ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದ ಸಂಬಂಧ 22 ಬಂಡಲ್ ಚಾರ್ಚ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಒಟ್ಟಾರೆ 90 ಸಾವಿರ ಪುಟಗಳಿಗೆ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಉಳಿದ ಹತ್ತು ಸಾವಿರ ರೂಪಾಯಿ ಕವರ್ ಬೈಂಡಿಂಗ್​​ಗೆ ಎಂದು ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. 17 ಆರೋಪಿಗಳಿಗೂ ಒಂದೊಂದು ಕಾಪಿ ಚಾರ್ಜ್​ಶೀಟ್ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮತ್ತು ವಕೀಲರಿಗೆ ಸೇರಿ ಒಟ್ಟು 22 ಸೆಟ್ ಬೇಕು 3 ದಿನಗಳಿಂದ ಚಾರ್ಜ್​ಶೀಟ್​ನಲ್ಲಿ ಯಾವುದೇ ತಪ್ಪಾಗದ ರೀತಿ ಎಚ್ಚರವಹಿಸಲಾಗಿದೆ. ಚಾರ್ಜ್​ಶೀಟ್​ ಸೇರಿ ತನಿಖೆಯ ಒಟ್ಟು ಖರ್ಚು 6 ಲಕ್ಷ 45 ಸಾವಿರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *