Breaking News

ದೇಶ-ವಿದೇಶ

ಗೋವಾ ಸಿಎಂ ಮನೋಹರ್​ ಪರಿಕ್ಕರ್​ ಇನ್ನಿಲ್ಲ..

ಗೋವಾ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್ (63)​ ಅವರು ಇಂದು ವಿಧಿವಶರಾದರು. ಪಣಜಿಯಲ್ಲಿ ತಮ್ಮ ಪುತ್ರನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್​​ ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಸಿಎಂ ಪರಿಕ್ಕರ್ ಅವರ ಆರೋಗ್ಯ ಶನಿವಾರದಿಂದ ತೀವ್ರ ಬಿಗಡಾಯಿಸಿತ್ತು.#Goa #CM #BJP #ManoharParrikar #Death #Cancer

Read More »

ಕಳ್ಳರಿಗೆಲ್ಲ 'ಮೋದಿ' ಸರ್‌ನೇಮ್ ಏಕೆ?: ರಾಹುಲ್ ಗಾಂಧಿ ಲೇವಡಿ…?

ಡೆಹರಾಡೂನ್, ಮಾರ್ಚ್ 17: ಪ್ರಧಾನಿ ನರೇಂದ್ರ ಮೋದಿ ಅವರು ‘ನಾನೂ ಚೌಕಿದಾರ’ ಆಂದೋಲನ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡೆಹ್ರಾಡೂನ್‌ನಲ್ಲಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಫೇಲ್ ಒಪ್ಪಂದ ಪಾರದರ್ಶಕವಾಗಿದ್ದರೆ ಜಂಟಿ ಸಂಸದೀಯ ಸಮಿತಿಯನ್ನು ಏಕೆ ರಚಿಸಲಿಲ್ಲ ಎಂದು ಪ್ರಶ್ನಿಸಿದರು.ಲೋಕ ಕದನಕ್ಕೆ ಮೋದಿ ರೆಡಿ… ಎಲ್ಲೆಲ್ಲೂ ‘ಚೌಕಿದಾರಂದೇ’ ಹವಾ!ಕಳೆದ ಚುನಾವಣೆಯಲ್ಲಿ ‘ಅಚ್ಚೇ ದಿನ್’ ಎಂಬ ಘೋಷಣೆ ಇತ್ತು. ಈಗ …

Read More »

ಚುನಾವಣಾ ಕಣಕ್ಕೆ ಇಳಿಯುತ್ತಿದೆ ಕೋಟ್ಯಂತರ ಹಣ.

ಬೆಂಗಳೂರು ಹಾಗೂ ಹಾವೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ ಸುಮಾರು 2 ಕೋಟಿ ರೂ. ಹಣ ಪತ್ತೆಯಾಗಿದೆ. ಈ ಹಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಗುತ್ತಿಗೆದಾರರು ನೀಡಿದ್ದು, ಚುನಾವಣೆ ಪ್ರಚಾರಕ್ಕಾಗಿ ಬಳಸಲು ಉದ್ದೇಶಿಸಲಾಗಿತ್ತು ಎಂದು ವರದಿಯಾಗಿದೆ. ಇದಲ್ಲದೆ, ರಾಜ್ಯದಲ್ಲಿ ಈವರೆಗೆ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8.57 ಕೋಟಿ ರೂ. ಮೌಲ್ಯದ ಮದ್ಯ, 54 ಲಕ್ಷ ರೂ. ನಗದು, 650 ಗ್ರಾಂ ಚಿನ್ನ ಹಾಗೂ …

Read More »

ನ್ಯೂಜಿಲ್ಯಾಂಡ್​​ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ, 27 ಮಂದಿ ಸಾವು ..

ನ್ಯೂಜಿಲ್ಯಾಂಡ್​​ನ ಕ್ರೈಸ್ಟ್​​ಚರ್ಚ್​​ ನಗರದಲ್ಲಿರೋ ಎರಡು ಮಸೀದಿಗಳಲ್ಲಿ ನಿನ್ನೆ ಭಕ್ತರ ಮೇಲೆ ಗುಂಡಿನ ದಾಳಿ ನಡೆದಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಮಿಲಿಟರಿ ಸ್ಟೈಲ್​​ ಬಟ್ಟೆ ಧರಿಸಿ, ಆಟೋಮ್ಯಾಟಿಕ್​​ ರೈಫಲ್​​​ ಹಿಡಿದು ಬಂದಿದ್ದ ವ್ಯಕ್ತಿ ಅಲ್​​ ನೂರ್​ ಮಸೀದಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗುಂಡಿನ ದಾಳಿ ನಡೆದ ವೇಳೆ ಬಾಂಗ್ಲಾದೇಶ ಕ್ರಿಕೆಟ್​​ ತಂಡ ಪ್ರಾರ್ಥನೆಗಾಗಿ ಮಸೀದಿಗೆ ಆಗಮಿಸುತ್ತಿತ್ತು. ಸದ್ಯ ತಂಡದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ ಎಂದು …

Read More »

ಇನ್ನೂ ಮುಗಿದಿಲ್ಲ ಯುದ್ಧದ ಛಾಯೆ, ನಿನ್ನೆ ರಾತ್ರಿ ಶಬ್ದದ ವೇಗಕ್ಕಿಂತಲೂ ವೇಗವಾಗಿ ವಾಯುಪಡೆ ವಿಮಾನ ಹಾರಾಟ..!

ಭಾರತೀಯ ವಾಯು ಸೇನೆ ನಿನ್ನೆ ರಾತ್ರಿ ಪಂಜಾಬ್​​ ಹಾಗೂ ಜಮ್ಮುವಿನಲ್ಲಿ ಭಾರೀ ದೊಡ್ಡ ತರಬೇತಿ ನಡೆಸಿದೆ. ಸಾಕಷ್ಟು ಸಂಖ್ಯೆಯ ಯುದ್ಧವಿಮಾನಗಳನ್ನು ಬಳಸಿಕೊಂಡು ನಿನ್ನೆ ರಾತ್ರಿ ರೆಡಿನೆಸ್​ ಎಕ್ಸರ್ಸೈಜ್​ ಮಾಡಲಾಗಿದೆ. ಈ ವೇಳೆ ಐಎಎಫ್​​​ ವಿಮಾನಗಳು ಗಡಿ ಜಿಲ್ಲೆಗಳಲ್ಲಿ ಶಬ್ದದ ವೇಗಕ್ಕಿಂತಲೂ ವೇಗದಲ್ಲಿ ಹಾರಾಟ ಮಾಡಿವೆ. ಒಂದು ವೇಳೆ ಪಾಕಿಸ್ತಾನ ವಾಯು ಪಡೆ ಯಾವುದೇ ದಾಳಿ ನಡೆಸಿದ್ರೆ ಅದನ್ನ ಮಣಿಸಲು ಸಿದ್ಧವಾಗಿರುವ ಉದ್ದೇಶದಿಂದ ಈ ತರಬೇತಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Read More »

ಮುಂಬೈನಲ್ಲಿ ಮೇಲ್ಸೇತುವೆ ಕುಸಿತ, 6 ಮಂದಿ ಸಾವು

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​​​ ಟರ್ಮಿನಸ್​​​ ರೇಲ್ವೆ ನಿಲ್ದಾಣದ ಬಳಿ ಮೇಲ್ಸೇತುವೆ ಕುಸಿದು 6 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ 33 ಮಂದಿಗೆ ಗಾಯಗಳಾಗಿದೆ. ಈ ಮೇಲ್ಸೇತುವೆ ರಿಪೇರಿಯಲ್ಲಿತ್ತು. ಆದ್ರೂ ಇದನ್ನು ಬಳಕೆ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ. ನಿನ್ನೆ ಸಂಜೆ ಹೆಚ್ಚಿನ ಜನಸಂದಣಿ ಇದ್ದಾಗಲೇ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಟ್ವಿಟರ್​ ಮೂಲಕ ಸಾಂತ್ವನ …

Read More »

ಯೂಟ್ಯೂಬ್ ನೋಡಿ ಸ್ವತಃ ಹೆರಿಗೆಗೆ ಮುಂದಾದ ಮಹಿಳೆ, ಮಗು-ತಾಯಿ ಇಬ್ಬರೂ ಸಾವು..

ಲಖನೌ: ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ಯೂಟ್ಯೂಬ್ ನೋಡಿಕೊಂಡು ತಮ್ಮ ಹೆರಿಗೆ ತಾವೇ ಮಾಡಿಕೊಳ್ಳಲು ಯತ್ನಿಸಿ ತಮ್ಮ ಮಗುವಿನೊಂದಿಗೇ ಸಾವಿಗೀಡಾದ ಘೋರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಈ ಘಟನೆ ನಡೆದಿದ್ದು, ಯೂ ಟ್ಯೂಬ್‌ ನಲ್ಲಿ ಮಗು ಪ್ರಸವದ ವೀಡಿಯೊವನ್ನು ವೀಕ್ಷಿಸುತ್ತಾ ಸ್ವತಃ ಹೆರಿಗೆಗೆ ಯತ್ನಿಸಿದ 26ರ ಹರೆಯದ ಅವಿವಾಹಿತ ಮಹಿಳೆ ಮೃತಪಟ್ಟಿದ್ದಾರೆ. ಬಾಡಿಗೆ ಮನೆಯಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ ಮಹಿಳೆ ಹಾಗೂ …

Read More »

ಲೋಕಸಭಾ ಚುನಾವಣೆಗಾಗಿ ಪಂಜಾಬ್'ನಲ್ಲಿ 6 ಪಕ್ಷಗಳ ಮೈತ್ರಿ.

ಚಂಡೀಗಢ: ಪಂಜಾಬ್ ನಲ್ಲಿ ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಘಟಬಂಧನ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಹೋರಾಡಲು ತೃತೀಯ ರಂಗ ಸಜ್ಜಾಗಿದ್ದು ಆರು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಬಹುಜನ ಸಮಾಜ ಪಕ್ಷ, ಲೋಕ ಇನ್ಸಾಫ್ ಪಕ್ಷ, ಸಿಪಿಐಎಂ, ನಾವ್ ಪಂಜಾಬ್ ಪಕ್ಷ, ಪಂಜಾಬ್ ಏಕ್ತ ಪಕ್ಷ ಮತ್ತು ಆರ್ಎಂಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.ಮೈತ್ರಿ ಪಕ್ಷಗಳು ಇಂದು 13 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಪಟಿಯಾಲ ಕ್ಷೇತ್ರದಿಂದ …

Read More »

ಮಹಿಳೆಯ ಬ್ಯಾಗ್ ಕದ್ದು, 25 ಮೀಟರ್​ ದೂರ ಎಳೆದೊಯ್ದ ದುಷ್ಕರ್ಮಿಗಳು..

ನವದೆಹಲಿ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ವ್ಯಾನಿಟಿ ಬ್ಯಾಗ್‌ ಕದ್ದು ಎಸ್ಕೇಪ್ ಆದ ಘಟನೆ ದೆಹಲಿಯ ಜನಕ್‌ಪುರಿ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ 4 ಗಂಟೆ ಸುಮಾರಿಗೆ ಪೊಲೀಸ್ ಬೂತ್ ಮುಂದೆಯೇ ಈ ಘಟನೆ ನಡೆದಿದೆ. ರಸ್ತೆ ಪಕ್ಕ ಮಹಿಳೆಯನ್ನ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಆಕೆಯ ಬ್ಯಾಗ್‌ ಎಗರಿಸಲು ಯತ್ನಿಸಿದ್ದಾರೆ. ಬ್ಯಾಗ್‌ ಕಸಿದುಕೊಳ್ಳುತ್ತಿದ್ದಂತೆ ಮಹಿಳೆ ಅದನ್ನ ಬಿಗಿಯಾಗಿ ಹಿಡಿದುಕೊಂಡು ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ಇದನ್ನು ಲೆಕ್ಕಿಸದೆ …

Read More »

ಕೇವಲ 7 ದಿನಗಳಲ್ಲಿ ಹಂದಿ ಜ್ವರದಿಂದಾಗಿ 75 ಮಂದಿ ಸಾವು..

ನವದೆಹಲಿ: ಕಳೆದ ವಾರ ದೇಶದಲ್ಲಿ ಹಂದಿ ಜ್ವರದಿಂದ 75 ಮಂದಿ ಸಾವನ್ನಪ್ಪಿದ್ದು, ಈ ವರ್ಷ ಒಟ್ಟು 605 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ಮಾಹಿತಿ ಲಭಿಸಿದೆ. ಭಾನುವಾರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 19,380 ಜನರು ಈ ವೈರಸ್ ಗೆ ತುತ್ತಾಗಿರುವುದು ಖಚಿತಗೊಂಡಿದೆ.ರಾಜಸ್ಥಾನದಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು:ರಾಜಸ್ಥಾನದಲ್ಲಿ 4,551 ಹಂದಿ ಜ್ವರ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈ ವೈರಸ್ನಿಂದ 162 ಜನರು …

Read More »