Breaking News

ದೇಶ-ವಿದೇಶ

ಲಂಡನ್‌ನಲ್ಲಿ ಕಾಣಿಸಿಕೊಂಡ ನೀರವ್ ಮೋದಿ

ಲಂಡನ್: 13,700 ಕೋಟಿಯ ಪಂಜಾಬ್​​ ನ್ಯಾಷನಲ್​ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಆರೋಪಿ ನೀರವ್ ಮೋದಿ ಸದ್ಯ ಲಂಡನ್‌ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾನೆ. ಲಂಡನ್‌ ನಗರದ ಬೀದಿಯಲ್ಲಿ ನೀರವ್​ ಮೋದಿ ಕಾಣಿಸಿಕೊಂಡಿದ್ದಾನೆ. ಅಲ್ಲದೇ ಲಂಡನ್‌ನಲ್ಲೇ ಹೊಸ ವಜ್ರೋದ್ಯಮವನ್ನು ಶುರು ಮಾಡಿದ್ದಾನೆ ಎಂದು ವರದಿಯಾಗಿದೆ.ವರದಿ ಪ್ರಕಾರ, ನೀರವ್ ಮೋದಿ ಸೆಂಟ್ರಲ್‌ ಲಂಡನ್‌ನ ‘chic street’ನಲ್ಲಿ ಮೂರು ಬೆಡ್‌ ರೂಂವುಳ್ಳ ಫ್ಲ್ಯಾಟ್‌ನಲ್ಲಿ ವಾಸವಿದ್ದು, ಈ ಮನೆಯ ಬಾಡಿಗೆ ತಿಂಗಳಿಗೆ 17,000 ಡಾಲರ್​(ಅಂದಾಜು 11.8 …

Read More »

ಸೇನಾ ಫೋಟೋ ಬಳಸುವಂತಿಲ್ಲ’’ ಚುನಾವಣಾ ಆಯೋಗ ಖಡಕ್​ ವಾರ್ನಿಂಗ್​..!

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಲೋಕ ಸಮರಕ್ಕೆ ದಿನ ನಿಗದಿ ಮಾಡುವ ತಯಾರಿಯಲ್ಲಿದೆ. ಆದ್ರೆ, ಇತ್ತ ರಾಜಕೀಯ ಪಕ್ಷಗಳು ಯೋಧರ ಫೋಟೋ ಬಳಸಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿವೆ. ಇದಕ್ಕೆ ಬ್ರೇಕ್​​ ಹಾಕಲೆಂದೇ ಆಯೋಗ ರಾಜಕೀಯ ಪಕ್ಷಗಳಿಗೆ ಖಡಕ್​ ವಾರ್ನ್ ಮಾಡಿದೆ.‘ತಮ್ಮ ಕಾಲದಲ್ಲಿ ಏರ್​ಸ್ಟ್ರೈಕ್​ ನಡೆಸಿ ಉಗ್ರರನ್ನು ಮಟ್ಟ ಹಾಕಿದ್ದೇವೆ’ ಅಂತಾ ಬಿಜೆಪಿ ಎಲೆಕ್ಷನ್​ ಱಲಿಗಳಲ್ಲಿ ಬೊಬ್ಬೆ ಹೊಡಿತಿದ್ರೆ, ವಿಪಕ್ಷಗಳು ಇದಕ್ಕೆ ಸಾಕ್ಷಿ ನೀಡುವಂತೆ ಪ್ರಧಾನಿ ಮೋದಿ ಮೇಲೆ ಮುಗಿ ಬೀಳುತ್ತಿವೆ. …

Read More »

ನೀರವ್​ ಮೋದಿ ಹಸ್ತಾಂತರ, ಭಾರತದ ಮನವಿಗೆ ಸ್ಪಂದಿಸಿದ ಲಂಡನ್..

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 13.500 ಕೋಟಿ ವಂಚಿಸಿ ಲಂಡನ್​ನಲ್ಲಿ ತಲೆ ಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್​ ಮೋದಿ ಹಸ್ತಾಂತರಕ್ಕೆ ಭಾರತ ಸಲ್ಲಿಸಿದ್ದ ಮನವಿಗೆ ಬ್ರಿಟನ್ ಸರ್ಕಾರ ಸ್ಪಂದಿಸಿದೆ.ಸದ್ಯ ಈ ಪ್ರಕರಣ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿದ್ದು, ಅಲ್ಲಿಂದಲೇ ವಾರಂಟ್ ಜಾರಿಯಾಗಬೇಕು ಅಂತ ಲಂಡನ್​​ ಗೃಹ ಇಲಾಖೆ ಕಾರ್ಯದರ್ಶಿ ಸಾಜಿದ್ ಜಾವಿದ್ ತಿಳಿಸಿದ್ದಾರೆ.ಇನ್ನು ಗಡಿಪಾರಿಗೆ ಒಳಗಾಗಿರುವ ಉದ್ಯಮಿ ವಿಜಯ್​ ಮಲ್ಯ ಕೇಸ್ ಪ್ರಕ್ರಿಯೆಯಂತೆ ಈ ಪ್ರಕರಣವೂ ನಡೆಯುತ್ತದೆ. ಅದಕ್ಕೆ ಮೊದಲು ನೀರವ್​ …

Read More »

ಕಾಡಾನೆ ದಾಳಿ; ಐವರ ದುರ್ಮರಣ..

ಸುಪೌಲ್: ನೇಪಾಳದಿಂದ ಬಿಹಾರದ ಗಡಿಕ್ಷೇತ್ರವಾದ ಸುಪೌಲ್ ಗೆ ನುಗ್ಗಿರುವ ಕಾಡಾನೆಯೊಂದು ಕಳೆದ ಎರಡು ದಿನಗಳಲ್ಲಿ ಐವರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಅಷ್ಟೇ ಅಲ್ಲದೆ, ಹಲವು ಮನೆಗಳನ್ನು ನಾಶ ಮಾಡಿ, ದವಸ ಧಾನ್ಯಗಳನ್ನೂ ಸಹ ತಿಂದು ಹಾಳು ಮಾಡಿವೆ ಎನ್ನಲಾಗಿದೆ.ನೇಪಾಳದ ದಿಯೋಘರ್’ನಿಂದ ಬುಧವಾರ ಬಂದ ಕೆಲವು ಕಾಡಾನೆಗಳು ಬಿಹಾರದ ಭೀಮಾನಗರ್ ಪ್ರದೇಶಕ್ಕೆ ನುಗ್ಗಿದ್ದವು. ಇವುಗಳಲ್ಲಿ ಕೆಲವು ಆನೆಗಳು ಹಿಂದಿರುಗಿದ್ದವು. ಆದರೆ ಒಂದು ಆನೆ ಮಾತ್ರ ಸುಪೌಲ್ ಜಿಲ್ಲೆಯ ಜನನಿಬಿಡ ಪ್ರದೇಶಕ್ಕೆ ನುಗ್ಗಿ ದಾಂಧಲೆ …

Read More »

ಅಮಿತ್ ಶಾ ಜೊತೆ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಘೋಷಣೆ: ಯಡಿಯೂರಪ್ಪ

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ ಬಳಿಕ ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿಂದು ತಿಳಿಸಿದರು.ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಲೋಕಸಭಾ ಚುನಾವಣಾ ಸಂಬಂಧ ಪಕ್ಷದ ಮುಖಂಡರ ಜೊತೆ ಚರ್ಚಿಸಲು ನವದೆಹಲಿಗೆ ಆಗಮಿಸಿದ್ದೇನೆ. ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಯ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮುಖಂಡರೊಂದಿಗೆ ಚರ್ಚಿಸಿ …

Read More »

ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರುವ ಸಾಧ್ಯತೆ!

ನವದೆಹಲಿ: ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ನ ಜಾಮ್ ನಗರದಿಂದ ಸ್ಪರ್ಧಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.ಗುಜರಾತ್ನಲ್ಲಿರುವ ಪಟಿದರ್ ಸಮುದಾಯದ ಮೀಸಲಾತಿಯ ಬೇಡಿಕೆಯ ಮೇಲೆ ಚಳವಳಿಯ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಮಾರ್ಚ್ 12 ರಂದು ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮಾಹಿತಿ ಪ್ರಕಾರ, ಅಹಮದಾಬಾದ್ನಲ್ಲಿ ನಡೆಯುವ ಕಾಂಗ್ರೆಸ್ ವರ್ಕಿಂಗ್ …

Read More »

ತಾಯ್ನಾಡಿಗೆ ಮರಳಿದ ರಿಯಲ್ ಹೀರೋ ಅಭಿ; ಅದ್ದೂರಿ ಸ್ವಾಗತ, Z+ ಭದ್ರತೆ

ನವದೆಹಲಿ:ಅಂತಾರಾಷ್ಟ್ರೀಯ ಹಾಗೂ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಶುಕ್ರವಾರ ಮಧ್ಯಾಹ್ನ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.ಸೇನಾ ಮುಖ್ಯಸ್ಥರಿಗೆ …

Read More »

ವೀರಪುತ್ರ ಅಭಿನಂದನ್‌ ಬರಮಾಡಿಕೊಂಡ ಕ್ರಿಕೆಟಿಗರು

ಹೊಸದಿಲ್ಲಿ: ಪಾಕಿಸ್ತಾನ ಸೆರೆಯಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಮಾರ್ಚ್‌ 01 ಶುಕ್ರವಾರದಂದು ತಾಯ್ನಾಡಿಗೆ ಮರಳುತ್ತಿದ್ದಾರೆ.ರಾಜತಾಂತ್ರಿಕವಾಗಿ ತೀವ್ರ ಒತ್ತಡ ಹೇರಿರುವ ಹಿನ್ನಲೆಯಲ್ಲಿ ಕೊನೆಗೂ ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನ ನಿರ್ಧರಿಸಿದೆ.ಈ ಮೊದಲು ಗಡಿ ನಿಯಂತ್ರಣ ರೇಖೆಯಲ್ಲಿ ತಮ್ಮ ಜೀವವನ್ನೇ ಪಣವಾಗಿಟ್ಟ ಅಭಿನಂದನ್ ಮಿಗ್ 16 ವಿಮಾನ ಮೂಲಕ ಪಾಕಿಸ್ತಾನದ ಅತ್ಯಾಧುನಿಕ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದರು. ಈ ವೇಳೆ ಪ್ಯಾರಾಚೂಟ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದರು. ತಕ್ಷಣವೇ …

Read More »

ಭಾರತದ ಜೊತೆ ನಾವಿದ್ದೇವೆ -ರಷ್ಯಾ ಅಧ್ಯಕ್ಷ ಪುಟಿನ್‌ ಅಭಯ..

ನವದೆಹಲಿ: ಪುಲ್ವಾಮಾ ದಾಳಿಯಲ್ಲಿ 40 ಸಿಆರ್​ಪಿಎಫ್​ ಸೈನಿಕರು ಹುತಾತ್ಮರಾಗಿರುವುದಕ್ಕೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಪಾಕಿಸ್ತಾನ ಮೂಲದ ಜೈಷ್ ಎ ಸಂಘಟನೆಯ ಭಯೋತ್ಪಾದಕರ ದಾಳಿಯನ್ನು ಖಂಡಿಸಿ, ನಾವು ಸದಾ ಭಾರತದ ಜನರೊಂದಿಗೆ ಇದ್ದೇವೆ. ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ರಷ್ಯಾ ಸದಾ ನಿಲ್ಲುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಗಡಿ ದಾಳಿಯಿಂದ ತನ್ನ ಪ್ರದೇಶವನ್ನು ರಕ್ಷಿಸುವಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ದೃಢವಾದ ಬೆಂಬಲಕ್ಕಾಗಿ ಮೋದಿ, …

Read More »

ಗ್ರಾಹಕರಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಸಹಿತ ಎಲ್‌ಪಿಜಿ ದರ 2.08 ರೂ. ಹೆಚ್ಚಳ..

ನವದೆಹಲಿ: ಮೂರು ತಿಂಗಳ ಕಡಿತದ ನಂತರ ಸಿಲಿಂಡರ್ಗಳ ಬೆಲೆ ಏರಿಕೆಯಾಗಿದ್ದು, ಸಬ್ಸಿಡಿ ಹೊಂದಿರುವ ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ 2.08ರೂ. ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರದಲ್ಲಿ 42.50ರೂ. ಏರಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಗುರುವಾರ ತಿಳಿಸಿದೆ.ಇಂಧನ ಬೆಲೆ ಏರಿಕೆ ಹಾಗೂ ತೆರಿಗೆ ಕಾರಣದಿಂದಾಗಿ ಸಿಲಿಂಡರ್ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಲ್‌ಪಿಜಿ ದರ ಹೆಚ್ಚಳದ ಬಳಿಕ ದೆಹಲಿಯಲ್ಲಿ 493.53 ರೂ. …

Read More »