ಗಂಗೊಳ್ಳಿ: ನಾಡ ಗ್ರಾಮದ ಕೋಣ್ಕಿಯ ನಂದ್ರೋಳಿ ಮನೆಯ ಸಾರ್ವಜನಿಕ ಜಾಗದಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳದ ಮೇಲೆ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿ ಸೋಮವಾರ (ಆ.03)ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕಂಬದಕೋಣೆ ಗ್ರಾಮ ಹಳಗೇರಿ ನಿವಾಸಿ ಸುಧಾಕರ (61) ಮತ್ತು ಕಿರಿಮಜೇಶ್ವರ ನಿವಾಸಿ ಸುರೇಶ (40) ಬಂಧಿತ ಆರೋಪಿಗಳು. ದಾಳಿ ವೇಳೆ ಉಳಿದವರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ 10 ಕೋಳಿಗಳು, ಕೋಳಿಬಾಳು (ಕತ್ತಿ), 2350 ರೂ. ನಗದು ಹಾಗೂ 8 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

