Breaking News

ಮೊಬೈಲ್​ ನಿಂದ ಹಣ ದೋಚಿ ಬಳ್ಳಾರಿ ಕಂಪನಿಗೆ ಪಂಗನಾಮ ಹಾಕಿದ ಯುವಕನನ್ನು ವಶಕ್ಕೆ ಪಡೆದ ಪೊಲೀಸರು

ಬಳ್ಳಾರಿ: ವಿವೋ ಕಂಪನಿಯ ಮೊಬೈಲ್ ಮೂಲಕ 23 ವರ್ಷದ ಯುವಕನೊಬ್ಬ ಬಳ್ಳಾರಿಯ ಕಂಪನಿಗೆ ಪಂಗನಾಮ ಹಾಕಿದ್ದ, ಸೈಬರ್ ಕ್ರೈಂನ ತನಿಖೆ ಕೈಗೊಂಡ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ದೊಡ್ಡ ಕಂಪನಿಯಿಂದ ಯುವಕ ತನ್ನ ಖಾತೆಗೆ ಹಾಕಿಸಿಕೊಂಡಿದ್ದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೂರದಲ್ಲಿ ಕುಳಿತು ಕಂಪನಿ ಯಾಮಾರಿಸಿದ ಯುವಕನ ತಂತ್ರವನ್ನು ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ.
ಬಳ್ಳಾರಿಯ ಎಸ್‌ಪಿ ಶೋಭಾರಾಣಿ ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ, ಬಳ್ಳಾರಿ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿ ರೂ. 1,21,04,500 ಹಣ ಮತ್ತು ಕೃತ್ಯಕ್ಕೆ ಬಳಕೆ ಮಾಡಿದ್ದ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಬಳ್ಳಾರಿ ಮೂಲದ ಕಂಪನಿಯಿಂದ ವರ್ಗಾವಣೆಯಾದ ಹಣ ಮಾತ್ರವಲ್ಲ. ಆರೋಪಿಯ ಬೇರೆ ಬೇರೆ ಖಾತೆಗಳಲ್ಲಿದ್ದ ರೂ. 27,97,582 ಹಣವನ್ನು ಸಹ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಎಸ್‌ಪಿ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *