Breaking News

ದೇಶ-ವಿದೇಶ

ಪ್ರಧಾನಿ ಮೋದಿ ವಿರುದ್ಧ ಮಣಿ ಶಂಕರ್ ಅಯ್ಯರ್ ನೀಡಿರುವ 5 ವಿವಾದಾತ್ಮ ಹೇಳಿಕೆ

ಕಾಂಗ್ರೆಸಿನಿಂದ ಅಮಾನತುಗೊಂಡಿರುವ ಮಣಿ ಶಂಕರ್ ಅಯ್ಯರ್, ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಚರ್ಚೆಯಲ್ಲಿದ್ದಾರೆ.   ನವದೆಹಲಿ: ಕಾಂಗ್ರೆಸಿನಿಂದ ಅಮಾನತುಗೊಂಡಿರುವ ಮಣಿ ಶಂಕರ್ ಅಯ್ಯರ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿರುವ ಅವರು ಈ ಬಾರಿ ‘ನಾಯಿ’ಯ ಬಗೆಗಿನ ಪ್ರತಿಕ್ರಿಯೆಯನ್ನು ನೆನೆಪಿಸಿಕೊಂಡಿದ್ದಾರೆ. “ಮುಸ್ಲಿಮರನ್ನು ನಾಯಿ ಮರಿ (puppies) ಗಳಿಗೆ ಹೋಲಿಸುವ ವ್ಯಕ್ತಿಯೊಬ್ಬ …

Read More »

ಭೀಕರ ಪ್ರವಾಹಕ್ಕೆ ತತ್ತರಿಸಿದ ಕೇರಳ:

ಕೇರಳದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಅಲ್ಲದೆ, ನದಿಗಳು ತುಂಬಿ ಹರಿಯುತ್ತಿದ್ದು ಎಲ್ಲೆಡೆ ಪ್ರವಾಹ ಭೀತಿ ಎದುರಾಗಿದೆ.   ಭಾರಿ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕರಾವಳಿ ಭಾಗ ತತ್ತರಿಸಿದ್ದು, ಮುಖ್ಯಮಂತ್ರಿ ಪಿನರಾಯ್‌ ವಿಜಯನ್‌ ಎಲ್ಲ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಭೀಕರ ಪ್ರವಾಹದಿಂದಾಗಿ ಈವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ.  ವಯನಾಡ್‌ ಜಿಲ್ಲೆಯ ಪನಮರಮ್‌ನಲ್ಲಿ ಪ್ರವಾಹದ ನಡುವೆ ಸಿಕ್ಕಿಹಾಕಿಕೊಂಡ …

Read More »

ಸೆಪ್ಟೆಂಬರ್ 1 ರಿಂದ ಈ ಸೇವೆಗೆ ಶುಲ್ಕ ವಿಧಿಸಲಿದೆ ರೈಲ್ವೆ ಇಲಾಖೆ

ನವದೆಹಲಿ: ಒಂದು ವೇಳೆ ನೀವು ಕೂಡ ರೈಲುಗಳಲ್ಲಿ ರಿಸರ್ವೇಶನ್ ಮಾಡಿ ಪ್ರಯಾಣ ಮಾಡುವವರಾಗಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ. IRCTC ಯಿಂದ ಉಚಿತವಾಗಿ ಒದಗಿಸಲಾಗುತ್ತಿದ್ದ ಸೌಲಭ್ಯಕ್ಕಾಗಿ ಈಗ ನಿಗದಿತ ಶುಲ್ಕವನ್ನು ವಿಧಿಸಲಾಗುವುದು. ಹೀಗಾಗಿ ನೀವು ಮೊದಲು ಬುಕಿಂಗ್ ಮಾಡುವಾಗ ಪಾವತಿಸುತ್ತಿದ್ದ ಹಣಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ಸೆಪ್ಟೆಂಬರ್ 1 ರಿಂದ, ಇ-ಟಿಕೆಟ್ನಲ್ಲಿ ನೀಡಬೇಕಾದ ಉಚಿತ ಟ್ರಾವೆಲ್ ವಿಮೆ ಸೌಲಭ್ಯವನ್ನು IRCTC ಒದಗಿಸುವುದಿಲ್ಲ.  ಒಬ್ಬ ಪ್ರಯಾಣಿಕನು ವಿಮೆಯನ್ನು ತೆಗೆದುಕೊಳ್ಳಲು ಬಯಸಿದರೆ, …

Read More »

ಹಿರಿಯ ಮುತ್ಸದ್ದಿ ರಾಜಕಾರಣಿಯ ಅಗಲಿಕೆ ರಾಷ್ಟ್ರ ರಾಜಕಾರಣಕ್ಕೂ ತುಂಬಲಾರದ ನಷ್ಟ- ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ‌ ಆಡಳಿತಾವಧಿಯಲ್ಲಿ ತಮಿಳುನಾಡಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ಹಿರಿಯ ಮುತ್ಸದ್ದಿ ರಾಜಕಾರಣಿಯ ಅಗಲಿಕೆ ಕೇವಲ ತಮಿಳುನಾಡಿಗಷ್ಟೇ ಅಲ್ಲದೆ, ರಾಷ್ಟ್ರ ರಾಜಕಾರಣಕ್ಕೂ ತುಂಬಲಾರದ ನಷ್ಟ ಎಂದು ಅವರು ತಿಳಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂ.ಕರುಣಾನಿಧಿಯವರು ಇಂದು ಸಂಜೆ ದೈವಾದೀನರಾಗಿರುವುದು ಆಘಾತದ ಜೊತೆಗೆ ನೋವುಂಟು ಮಾಡಿದೆ, ಮೃತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ …

Read More »

ಮಾಜಿ ಸಿಎಂ ಕರುಣಾನಿಧಿ ವಿಧಿವಶ: ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ನಿಧನಕ್ಕೆ ಸಂತಾಪ ಸೂಚಿಸಿರುವ ರಾಜ್ಯ ಸರ್ಕಾರ ಒಂದು ದಿನ ಶೋಕಾಚರಣೆ ನಡೆಸಲು ನಿರ್ಧರಿಸಿದೆ.  ವಯೋಸಹಜ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ಅಧಿನಾಯಕ ಎಂ. ಕರುಣಾನಿಧಿ ತಮ್ಮ 94ನೇ ವಯಸ್ಸಿನಲ್ಲಿ ಮಂಗಳವಾರ ಸಂಜೆ ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ನಿರ್ಧಾರ ಘೋಷಿಸಿದ್ದಾರೆ.   ಬದುಕಿರುವಾಗಲೇ …

Read More »

ತಮಿಳುನಾಡು ಡಿಎಂಕೆ ಅಧಿನಾಯಕ, ಕಲೈಗ್ನಾರ್ ಎಂ.ಕರುಣಾನಿಧಿ ಇನ್ನಿಲ್ಲ

ಚೆನ್ನೈ: ಕಳೆದ ಒಂದು ವಾರದಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗು ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಮಂಗಳವಾರ ಸಂಜೆ 6.10ಕ್ಕೆ ನಿಧನರಾಗಿದ್ದಾರೆ.  ಜ್ವರ ಹಾಗೂ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದ ಡಿಎಂಕೆ ನಾಯಕ ಎಂ.ಕರುಣಾನಿಧಿ(94) ಅವರನ್ನು ಜುಲೈ 28ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಕಳೆದ ಒಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂ.ಕರುಣಾನಿಧಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಇದರಿಂದ …

Read More »

ಬಿ ಎಸ್ ಯಡಿಯೂರಪ್ಪ ಜೊತೆ ದೆಹಲಿಗೆ ಹೊರಟರಾ ಕಾಂಗ್ರೆಸ್ ಶಾಸಕರು?

ಬ್ರೇಕಿಂಗ್ ನ್ಯೂಸ್  ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿರುವುದು ಹೊಸ ವಿಷಯವೇನಲ್ಲ. ಆದರೆ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​. ಯಡಿಯೂರಪ್ಪ ಹಾಗೂ ಐವರು ಕಾಂಗ್ರೆಸ್ ಶಾಸಕರು ಒಂದೇ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದು, ಬಿಜೆಪಿ ಆಪರೇಷನ್​ ಕಮಲ ಮಾಡಲಿದೆಯಾ ಎಂಬ ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.  ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಕೇಂದ್ರ ವಾಣಿಜ್ಯ ಮತ್ತು ಕೃಷಿ ಸಚಿವರ ಭೇಟಿ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದು, …

Read More »

ಜಮ್ಮು ಮತ್ತು ಕಾಶ್ಮೀರ: ಪರಿಶೀಲನೆ, ಅರ್ಜಿ ವಿಚಾರಣೆ ಮುಂದೂಡಿದ ‘ಸುಪ್ರೀಂ’

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ 35ಎ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಚಾಯಿತಿ ಮತ್ತು ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಇರುವುದರಿಂದ ಕಲಂ 35ಎ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ್ದ ಅರ್ಜಿಗೆ ಮನ್ನಣೆ ನೀಡಿ ಸರ್ವೋಚ್ಛ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 27ಕ್ಕೆ …

Read More »

ದೆಹಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ

ನವದೆಹಲಿ: ದೇಶದ ಪ್ರತಿಷ್ಠಿತ ರಂಗಭೂಮಿ ತರಬೇತಿ ಕೇಂದ್ರವಾದ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ವಿದ್ಯಾರ್ಥಿನಿಯೋಬ್ಬರಿಗೆ ಅತಿಥಿ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.   ವಿದ್ಯಾರ್ಥಿನಿ ದಾಖಲಿಸಿರುವ ಕಿರುಕುಳ ಪ್ರಕರಣದಲ್ಲಿ ಎನ್ ಎಸ್ ಡಿ  ಈ ಅತಿಥಿ ಶಿಕ್ಷಕ ಅಸಂಬದ್ದವಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಗಸ್ಟ್ 1 ರಂದು ಪೊಲೀಸರು ಅತಿಥಿ ಶಿಕ್ಷಕ ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ   ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿ, ದೃಶ್ಯದ ಬಗ್ಗೆ ನಟಿಸಲು ಅತಿಥಿ …

Read More »

ಸುಮಾರು ₹67 ಲಕ್ಷ ಕೋಟಿ ಆಗುತ್ತದೆ. ವಿಶ್ವದ ಮೊದಲ

ಆ್ಯಪಲ್ ಕಂಪೆನಿ ಎಂದಾಕ್ಷಣ ನೆನಪಿಗೆ ಬರೋರು ಸ್ಟಿವ್ ಜಾಬ್ಸ್​.. ಇದು ಸ್ಟಿವ್ ಜಾಬ್ಸ್​ ಕನಸಿನ ಕೂಸು. ಜಗತ್ತು ಯೋಚಿಸುವುದಕ್ಕೇ ಎರಡು ಹೆಜ್ಜೆ ಮುಂದಿನ ತಂತ್ರಜ್ಞಾನದ ಮೂಲಕ ಮನೆ ಮಾತಾದ ಆ್ಯಪಲ್ ಬೆಳೆಸಲು ಸ್ಟಿವ್ ಪಟ್ಟ ಕಷ್ಟ ಅಸ್ಟಿಸ್ಟಲ್ಲ. ಒಂದು ಕಾರ್​ ಗ್ಯಾರೇಜ್​ನಲ್ಲಿ ಸ್ಥಾಪನೆಯಾದ ಸ್ಟಿವ್​ ಜಾಬ್ಸ್​ ಕಂಪೆನಿಗೆ ಇದೀಗ 42 ವರ್ಷ. ಇಂದು ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆದಿರುವ ಆ್ಯಪಲ್ ಸಂಸ್ಥೆ ಮುಂದೆ ಜಗತ್ತಿನ ದೈತ್ಯ ಕಂಪೆನಿಗಳಾದ ಅಮೇಜಾನ್, ಗೂಗಲ್, ಮೈಕ್ರೋಸಾಫ್ಟ್, …

Read More »