Breaking News

ಸುಮಾರು ₹67 ಲಕ್ಷ ಕೋಟಿ ಆಗುತ್ತದೆ. ವಿಶ್ವದ ಮೊದಲ

ಆ್ಯಪಲ್ ಕಂಪೆನಿ ಎಂದಾಕ್ಷಣ ನೆನಪಿಗೆ ಬರೋರು ಸ್ಟಿವ್ ಜಾಬ್ಸ್​.. ಇದು ಸ್ಟಿವ್ ಜಾಬ್ಸ್​ ಕನಸಿನ ಕೂಸು. ಜಗತ್ತು ಯೋಚಿಸುವುದಕ್ಕೇ ಎರಡು ಹೆಜ್ಜೆ ಮುಂದಿನ ತಂತ್ರಜ್ಞಾನದ ಮೂಲಕ ಮನೆ ಮಾತಾದ ಆ್ಯಪಲ್ ಬೆಳೆಸಲು ಸ್ಟಿವ್ ಪಟ್ಟ ಕಷ್ಟ ಅಸ್ಟಿಸ್ಟಲ್ಲ. ಒಂದು ಕಾರ್​ ಗ್ಯಾರೇಜ್​ನಲ್ಲಿ ಸ್ಥಾಪನೆಯಾದ ಸ್ಟಿವ್​ ಜಾಬ್ಸ್​ ಕಂಪೆನಿಗೆ ಇದೀಗ 42 ವರ್ಷ. ಇಂದು ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆದಿರುವ ಆ್ಯಪಲ್ ಸಂಸ್ಥೆ ಮುಂದೆ ಜಗತ್ತಿನ ದೈತ್ಯ ಕಂಪೆನಿಗಳಾದ ಅಮೇಜಾನ್, ಗೂಗಲ್, ಮೈಕ್ರೋಸಾಫ್ಟ್, ಫೇಸ್​ಬುಕ್​ ಮುಂಡಿಯೂರಿವೆ.
ಅಂದ್ಹಾಗೆ ಫೆಬ್ರವರಿ 24, 1955 ರಲ್ಲಿ ಹುಟ್ಟಿದ ಸ್ಟಿವ್​ ಜಾಬ್ಸ್​ ಬಾಲ್ಯದಿಂದಲೂ ಎಲೆಕ್ಟ್ರಾನಿಕ್ಸ್​ನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲೇ ಸ್ಟಿವ್ ವೋಜ್ನಿಯಾಕ್ ಅನ್ನೋರ ಜೊತೆ ಸ್ನೇಹ ಬೆಳೆದು ಆಗಾಗ ಕೆಲವು ಎಲೆಕ್ಟ್ರಾನಿಕ್ಸ್​ ಉಪಕರಣಗಳನ್ನ ಅಭಿವೃದ್ಧಿ ಮಾಡುತ್ತಿದ್ದರು. ಒಂದು ದಿನ ಬ್ಲೂಬಾಕ್ಸ್​ ಅನ್ನೋ ಉಪಕರಣವನ್ನ ಸಿದ್ಧಪಡಿಸಿದರು. ಈ ಬ್ಲೂಬಾಕ್ಸ್​ ಮೂಲಕ ಪುಕ್ಕಟೆಯಾಗಿ ಫೋನ್ ಕರೆ ಮಾಡಬಹುದಿತ್ತು.
ನಂತರ ಅಂದರೆ 1976ರಲ್ಲಿ ಸ್ಟಿವ್ ವೋಜ್ನಿಯಾಕ್ ಹಾಗೂ ಸ್ಟಿವ್ ಜಾಬ್ಸ್​ ಇಬ್ಬರು ಸೇರಿ ಆ್ಯಪಲ್ ಸಂಸ್ಥೆಯನ್ನ ಹುಟ್ಟು ಹಾಕಿದರು. ಮನೆಯೊಂದರ ಗ್ಯಾರೇಜ್​ನಲ್ಲಿ ಕಂಪೆನಿ ಆರಂಭಿಸಿದರು. ಆಗ ಅವರು ಹೂಡಿದ್ದ ಬಂಡವಾಳ ಕೇವಲ 1300 ಡಾಲರ್ ಆಗಿತ್ತು. ನಂತರ 1977ರಲ್ಲಿ ಎಲ್ಲರೂ ಬಳಸಲು ಅನುಕೂಲ ಆಗುವಂತಹ ಕಂಪ್ಯೂಟರ್​ಗಳನ್ನ ಅಭಿವೃದ್ಧಿಪಡಿಸಿದರು. ನಂತರದ ದಿನಗಳಲ್ಲಿ ಆ್ಯಪಲ್ ಕಂಪೆನಿಗಳ ಕಂಪ್ಯೂಟರ್​ಗಳನ್ನ ಬಳಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು.ಕಾದಿತ್ತು ಆಘಾತ..!
ನೀವು ಹೆತ್ತು, ಹೊತ್ತು, ಸಾಕಿ, ಬೆಳೆಸಿದ ಕೂಸನ್ನು ಇನ್ನೊಬ್ಬರು ಕಿತ್ತುಕೊಂಡರೆ ಹೇಗಾಗುತ್ತೆ? ಅದೇ ರೀತಿ ಪರಿಸ್ಥಿತಿಗೆ ಸ್ಟಿವ್ ಜಾಬ್ಸ್​​ ಈಡಾಗಿದ್ರು. ತಾವೇ ಹುಟ್ಟುಹಾಕಿ ಬೆಳೆಸಿದ್ದ ಆ್ಯಪಲ್​​ ಸಂಸ್ಥೆಯಿಂದ ಅವರೇ ಹೊರನಡೆಯಬೇಕಾದಂಥ ಪರಿಸ್ಥಿತಿಯೊಂದು ಬಂದಿತ್ತು. ಆ್ಯಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊತೆ ಮನಸ್ತಾಪ ಉಂಟಾಗಿ ಜಾಬ್ಸ್ ತಾವಾಗಿಯೇ ಹೊರ ನಡೆದರು. ಆದರೆ, ಈ ಹತ್ತುವರ್ಷಗಳಲ್ಲಿ ಆ್ಯಪಲ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದು ಹಂತದಲ್ಲಿ ಈ ಕಂಪನಿಯನ್ನೇ ಮುಚ್ಚಬೇಕಾದಂಥ ಪರಿಸ್ಥಿತಿ ಬಂದೊದಗಿತ್ತು. ಸ್ಟಿವ್ ಜಾಬ್ಸ್​ ಕನಸಿನ ಕೂಸು, ಇನ್ನೊಬ್ಬರ ಮಾತು ಕೇಳದೇ ಹಟ ಹಿಡಿದು ಕುಳಿತು ಬಿಟ್ಟಿತ್ತು. ಇನೋವೇಷನ್, ಭವಿಷ್ಯದ ಟೆಕ್ನಾಲಜಿ ಯಾವುದೂ ಇಲ್ಲದೇ ಸೊರಗತೊಡಗಿತ್ತು. ಈ ಮೂಲಕ ಸ್ಟಿವ್ ಜಾಬ್ಸ್​ ಕನಸಿನ ಕೂಸು ಇನ್ನೇನು ಸತ್ತೇ ಹೋಗುತ್ತೆ ಅನ್ನೋ ಮಾತುಗಳು ಬಿರುಗಾಳಿಯಂತೆ ಬಡಿದಿತ್ತು ಜಾಬ್ಸ್​ ಕಿವಿಗೆ.
ತನ್ನ ಕೂಸನ್ನು ಮತ್ತೆ ಎತ್ತಿಕೊಂಡ ಜಾಬ್ಸ್..!
ಮುಚ್ಚುವ ಹಂತಕ್ಕೆ ತಲುಪಿದ್ದ ಆ್ಯಪಲ್ ಸಂಸ್ಥೆಗೆ ಅಮೃತ ಕುಡಿಸಲು ಮತ್ತೆ ಸ್ಟಿವ್ ಜಾಬ್ಸೇ ಬರಬೇಕಾಯಿತು. ಹೀಗಾಗಿ, ಹತ್ತು ವರ್ಷಗಳ ಬಳಿಕ ಮತ್ತೆ ಅದೇ ಕಂಪೆನಿಗೆ ಮರಳಿದ ಜಾಬ್ಸ್​, ಮತ್ತೆ ಪವಾಡವನ್ನೇ ಮಾಡಿ ಬಿಟ್ಟರು. ಐಮ್ಯಾಕ್ ಎಂಬ ಸೊಗಸಾದ ಕಂಪ್ಯೂಟರ್ ತಯಾರಿಸಿದರು. ಐಪೋಡ್ ಅನ್ನೋ ಹಾಡುಗಳ ಸಾಗರವನ್ನೇ ಹಿಡಿದಿಡಬಲ್ಲಂಥ ಪುಟ್ಟ ಡಿವೈಸ್ ಅಭಿವೃದ್ಧಿ ಪಡಿಸಿದ್ರು, ಅಷ್ಟೇ ಅಲ್ಲದೇ ನೆಕ್ಸ್ಟ್ ಜನರೇಷನ್ ಐ-ಫೋನ್ ತಯಾರಿಕೆಗೆ ಭದ್ರ ಬುನಾದಿ ಹಾಕಿದ್ರು. ಸ್ಟಿವ್ ಜಾಬ್ಸ್ ಇಂದು ನಮ್ಮ ನಡುವೆ ಇಲ್ಲ. ಆದ್ರೆ, ಅದೇ ಸ್ಟಿವ್ ಜಾಬ್ಸ್​​​ ಕಟ್ಟಿದ್ದ ಸಂಸ್ಥೆ ಮಾತ್ರ ಇಂದು, ಜಗತ್ತಿನ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿದೆ. ಆ್ಯಪಲ್ ಕಂಪೆನಿಯ ಷೇರುಗಳ ಬೆಲೆಯಲ್ಲಿ ಶೇ. 2.8 ರಷ್ಟು ಏರಿಕೆಯಾಗಿ ದಾಖಲೆ ಬರೆದಿದೆ. ಈ ಮೂಲಕ ಕಂಪೆನಿ ಒಟ್ಟಾರೆ ಷೇರು ವಹಿವಾಟು 1 ಟ್ರಿಲಿಯನ್​ ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ₹67 ಲಕ್ಷ ಕೋಟಿ ಆಗುತ್ತದೆ. ಈ ಮೂಲಕ ವಿಶ್ವದ ಮೊದಲ ಟ್ರಿಲಿಯನ್​ ಡಾಲರ್​ ಷೇರು ವಹಿವಾಟು ಕಂಪೆನಿ ಎಂಬ ಹೆಸರು ಗಳಿಸಿಕೊಂಡಿದೆ. Bigtvnews 
ಸತ್ತೇ ಹೋಗಿದ್ದ ಸ್ಟಿವ್ ಜಾಬ್ಸ್ ಕನಸಿನ ಕೂಸು ₹67 ಲಕ್ಷ ಕೋಟಿ ಕಂಪೆನಿಯಾಗಿದ್ದು ಹೇಗೆ?
ಆ್ಯಪಲ್ ಕಂಪೆನಿ ಎಂದಾಕ್ಷಣ ನೆನಪಿಗೆ ಬರೋರು ಸ್ಟಿವ್ ಜಾಬ್ಸ್​.. ಇದು ಸ್ಟಿವ್ ಜಾಬ್ಸ್​ ಕನಸಿನ ಕೂಸು. ಜಗತ್ತು ಯೋಚಿಸುವುದಕ್ಕೇ ಎರಡು ಹೆಜ್ಜೆ ಮುಂದಿನ ತಂತ್ರಜ್ಞಾನದ ಮೂಲಕ ಮನೆ ಮಾತಾದ ಆ್ಯಪಲ್ ಬೆಳೆಸಲು ಸ್ಟಿವ್ ಪಟ್ಟ ಕಷ್ಟ ಅಸ್ಟಿಸ್ಟಲ್ಲ. ಒಂದು ಕಾರ್​ ಗ್ಯಾರೇಜ್​ನಲ್ಲಿ ಸ್ಥಾಪನೆಯಾದ ಸ್ಟಿವ್​ ಜಾಬ್ಸ್​ ಕಂಪೆನಿಗೆ ಇದೀಗ 42 ವರ್ಷ. ಇಂದು ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆದಿರುವ ಆ್ಯಪಲ್ ಸಂಸ್ಥೆ ಮುಂದೆ ಜಗತ್ತಿನ ದೈತ್ಯ ಕಂಪೆನಿಗಳಾದ ಅಮೇಜಾನ್, ಗೂಗಲ್, ಮೈಕ್ರೋಸಾಫ್ಟ್, ಫೇಸ್​ಬುಕ್​ ಮುಂಡಿಯೂರಿವೆ .
ಅಂದ್ಹಾಗೆ ಫೆಬ್ರವರಿ 24, 1955 ರಲ್ಲಿ ಹುಟ್ಟಿದ ಸ್ಟಿವ್​ ಜಾಬ್ಸ್​ ಬಾಲ್ಯದಿಂದಲೂ ಎಲೆಕ್ಟ್ರಾನಿಕ್ಸ್​ನಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲೇ ಸ್ಟಿವ್ ವೋಜ್ನಿಯಾಕ್ ಅನ್ನೋರ ಜೊತೆ ಸ್ನೇಹ ಬೆಳೆದು ಆಗಾಗ ಕೆಲವು ಎಲೆಕ್ಟ್ರಾನಿಕ್ಸ್​ ಉಪಕರಣಗಳನ್ನ ಅಭಿವೃದ್ಧಿ ಮಾಡುತ್ತಿದ್ದರು. ಒಂದು ದಿನ ಬ್ಲೂಬಾಕ್ಸ್​ ಅನ್ನೋ ಉಪಕರಣವನ್ನ ಸಿದ್ಧಪಡಿಸಿದರು. ಈ ಬ್ಲೂಬಾಕ್ಸ್​ ಮೂಲಕ ಪುಕ್ಕಟೆಯಾಗಿ ಫೋನ್ ಕರೆ ಮಾಡಬಹುದಿತ್ತು.
ನಂತರ ಅಂದರೆ 1976ರಲ್ಲಿ ಸ್ಟಿವ್ ವೋಜ್ನಿಯಾಕ್ ಹಾಗೂ ಸ್ಟಿವ್ ಜಾಬ್ಸ್​ ಇಬ್ಬರು ಸೇರಿ ಆ್ಯಪಲ್ ಸಂಸ್ಥೆಯನ್ನ ಹುಟ್ಟು ಹಾಕಿದರು. ಮನೆಯೊಂದರ ಗ್ಯಾರೇಜ್​ನಲ್ಲಿ ಕಂಪೆನಿ ಆರಂಭಿಸಿದರು. ಆಗ ಅವರು ಹೂಡಿದ್ದ ಬಂಡವಾಳ ಕೇವಲ 1300 ಡಾಲರ್ ಆಗಿತ್ತು. ನಂತರ 1977ರಲ್ಲಿ ಎಲ್ಲರೂ ಬಳಸಲು ಅನುಕೂಲ ಆಗುವಂತಹ ಕಂಪ್ಯೂಟರ್​ಗಳನ್ನ ಅಭಿವೃದ್ಧಿಪಡಿಸಿದರು. ನಂತರದ ದಿನಗಳಲ್ಲಿ ಆ್ಯಪಲ್ ಕಂಪೆನಿಗಳ ಕಂಪ್ಯೂಟರ್​ಗಳನ್ನ ಬಳಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು ಕಾದಿತ್ತು ಆಘಾತ..!
ನೀವು ಹೆತ್ತು, ಹೊತ್ತು, ಸಾಕಿ, ಬೆಳೆಸಿದ ಕೂಸನ್ನು ಇನ್ನೊಬ್ಬರು ಕಿತ್ತುಕೊಂಡರೆ ಹೇಗಾಗುತ್ತೆ? ಅದೇ ರೀತಿ ಪರಿಸ್ಥಿತಿಗೆ ಸ್ಟಿವ್ ಜಾಬ್ಸ್​​ ಈಡಾಗಿದ್ರು. ತಾವೇ ಹುಟ್ಟುಹಾಕಿ ಬೆಳೆಸಿದ್ದ ಆ್ಯಪಲ್​​ ಸಂಸ್ಥೆಯಿಂದ ಅವರೇ ಹೊರನಡೆಯಬೇಕಾದಂಥ ಪರಿಸ್ಥಿತಿಯೊಂದು ಬಂದಿತ್ತು. ಆ್ಯಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೊತೆ ಮನಸ್ತಾಪ ಉಂಟಾಗಿ ಜಾಬ್ಸ್ ತಾವಾಗಿಯೇ ಹೊರ ನಡೆದರು. ಆದರೆ, ಈ ಹತ್ತುವರ್ಷಗಳಲ್ಲಿ ಆ್ಯಪಲ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದು ಹಂತದಲ್ಲಿ ಈ ಕಂಪನಿಯನ್ನೇ ಮುಚ್ಚಬೇಕಾದಂಥ ಪರಿಸ್ಥಿತಿ ಬಂದೊದಗಿತ್ತು. ಸ್ಟಿವ್ ಜಾಬ್ಸ್​ ಕನಸಿನ ಕೂಸು, ಇನ್ನೊಬ್ಬರ ಮಾತು ಕೇಳದೇ ಹಟ ಹಿಡಿದು ಕುಳಿತು ಬಿಟ್ಟಿತ್ತು. ಇನೋವೇಷನ್, ಭವಿಷ್ಯದ ಟೆಕ್ನಾಲಜಿ ಯಾವುದೂ ಇಲ್ಲದೇ ಸೊರಗತೊಡಗಿತ್ತು. ಈ ಮೂಲಕ ಸ್ಟಿವ್ ಜಾಬ್ಸ್​ ಕನಸಿನ ಕೂಸು ಇನ್ನೇನು ಸತ್ತೇ ಹೋಗುತ್ತೆ ಅನ್ನೋ ಮಾತುಗಳು ಬಿರುಗಾಳಿಯಂತೆ ಬಡಿದಿತ್ತು ಜಾಬ್ಸ್​ ಕಿವಿಗೆ.
ತನ್ನ ಕೂಸನ್ನು ಮತ್ತೆ ಎತ್ತಿಕೊಂಡ ಜಾಬ್ಸ್..!
ಮುಚ್ಚುವ ಹಂತಕ್ಕೆ ತಲುಪಿದ್ದ ಆ್ಯಪಲ್ ಸಂಸ್ಥೆಗೆ ಅಮೃತ ಕುಡಿಸಲು ಮತ್ತೆ ಸ್ಟಿವ್ ಜಾಬ್ಸೇ ಬರಬೇಕಾಯಿತು. ಹೀಗಾಗಿ, ಹತ್ತು ವರ್ಷಗಳ ಬಳಿಕ ಮತ್ತೆ ಅದೇ ಕಂಪೆನಿಗೆ ಮರಳಿದ ಜಾಬ್ಸ್​, ಮತ್ತೆ ಪವಾಡವನ್ನೇ ಮಾಡಿ ಬಿಟ್ಟರು. ಐಮ್ಯಾಕ್ ಎಂಬ ಸೊಗಸಾದ ಕಂಪ್ಯೂಟರ್ ತಯಾರಿಸಿದರು. ಐಪೋಡ್ ಅನ್ನೋ ಹಾಡುಗಳ ಸಾಗರವನ್ನೇ ಹಿಡಿದಿಡಬಲ್ಲಂಥ ಪುಟ್ಟ ಡಿವೈಸ್ ಅಭಿವೃದ್ಧಿ ಪಡಿಸಿದ್ರು, ಅಷ್ಟೇ ಅಲ್ಲದೇ ನೆಕ್ಸ್ಟ್ ಜನರೇಷನ್ ಐ-ಫೋನ್ ತಯಾರಿಕೆಗೆ ಭದ್ರ ಬುನಾದಿ ಹಾಕಿದ್ರು. ಸ್ಟಿವ್ ಜಾಬ್ಸ್ ಇಂದು ನಮ್ಮ ನಡುವೆ ಇಲ್ಲ. ಆದ್ರೆ, ಅದೇ ಸ್ಟಿವ್ ಜಾಬ್ಸ್​​​ ಕಟ್ಟಿದ್ದ ಸಂಸ್ಥೆ ಮಾತ್ರ ಇಂದು, ಜಗತ್ತಿನ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದಿದೆ. ಆ್ಯಪಲ್ ಕಂಪೆನಿಯ ಷೇರುಗಳ ಬೆಲೆಯಲ್ಲಿ ಶೇ. 2.8 ರಷ್ಟು ಏರಿಕೆಯಾಗಿ ದಾಖಲೆ ಬರೆದಿದೆ. ಈ ಮೂಲಕ ಕಂಪೆನಿ ಒಟ್ಟಾರೆ ಷೇರು ವಹಿವಾಟು 1 ಟ್ರಿಲಿಯನ್​ ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು ₹67 ಲಕ್ಷ ಕೋಟಿ ಆಗುತ್ತದೆ. ಈ ಮೂಲಕ ವಿಶ್ವದ ಮೊದಲ ಟ್ರಿಲಿಯನ್​ ಡಾಲರ್​ ಷೇರು ವಹಿವಾಟು ಕಂಪೆನಿ ಎಂಬ ಹೆಸರು ಗಳಿಸಿಕೊಂಡಿದೆ.
42 ವರ್ಷಗಳ ಹಿಂದೆ ಸ್ಟೀವ್ ಜಾಬ್ಸ್​ ಈ ಕಂಪೆನಿ ಆರಂಭಿಸಿದಾಗ ತೀವ್ರ ನಷ್ಟ ಅನುಭವಿಸಿತ್ತು. 1980ರಲ್ಲಿ ಕಂಪೆನಿಯ ಷೇರಿನ ಮುಖಬೆಲೆ ಕೇವಲ 0.50 ಡಾಲರ್ ಆಗಿತ್ತು. ಇದೀಗ ಒಟ್ಟಾರೆ ಕಂಪೆನಿಯ ಷೇರುಗಳ ವ್ಯವಹಾರ ಒಂದು ಟ್ರಿಲಿಯನ್​ ಡಾಲರ್​ಗೆ ಏರಿಕೆ ಕಂಡಿದೆ ಅಂದರೆ ಎಷ್ಟು ಎತ್ತರಕ್ಕೆ ಬೆಳೆದಿದೆ ಅಂತಾ ನೀವೇ ಊಹಿಸಿಕೊಳ್ಳಿ.
ಇಂದು ಆ್ಯಪಲ್ ಕಂಪೆನಿ ಮಾಡಿರುವ ಸಾಧನೆ ನಿಜಕ್ಕೂ ಊಹೆಗೆ ನಿಲುಕದ್ದು. 1997 ರಲ್ಲಿ ಕಂಪೆನಿ ದಿವಾಳಿಯತ್ತ ಸಾಗಿತ್ತು. ಒಂದು ಡಾಲರ್​ಗೂ ಪರದಾಟ ನಡೆಸಿತ್ತು. ಕಂಪೆನಿ ಲಾಸ್​ನಲ್ಲಿದ್ದಾಗ ಇದೇ ಕಂಪೆನಿಯಿಂದ ಸ್ಟಿವ್ ಜಾಬ್ಸ್​ ಕಂಪೆನಿಯಿಂದ ಹೊರ ನಡೆದರು. ಹತ್ತು ವರ್ಷಗಳ ಬಳಿಕ ಮತ್ತೆ ಅದೇ ಕಂಪೆನಿಗೆ ವಾಪಸ್ಸಾಗಿ ಕಂಪೆನಿಯ ಮೌಲ್ಯವನ್ನ ಉತ್ತುಂಗಕ್ಕೆ ಏರಿಸಿದರು.
ಐಫೋನ್ ಎಂದರೆ ಅದು ಕೇವಲ ಒಂದು ಸರಕು ಅಲ್ಲ. ಅದೊಂದು ಸಾಂಸ್ಕೃತಿಕ ಸಂಕೇತ ಮತ್ತು ಹಣ ಉತ್ಪಾದಿಸುವ ದೊಡ್ಡ ಯಂತ್ರ. ನೆಕ್ಸ್​ಟ್ ಜನರೇಷನ್ ಐಫೋನ್ ಮಾರುಕಟ್ಟೆ ಪ್ರವೇಶಿಸುತ್ತದೆ ಎಂಬ ನಿರೀಕ್ಷೆಯಿಂದಾಗಿ ವಾಲ್​ಸ್ಟ್ರೀಟ್​ ಷೇರು ಮಾರುಕಟ್ಟೆಯಲ್ಲಿ ಐಫೋನ್ ಷೇರುಗಳ ಬೆಲೆ ಒಂದೇ ಸಮನೆ ಏರುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಐಫೋನ್​ಗಳ ಮಾರಾಟದ ಸಂಖ್ಯೆ ಹೆಚ್ಚುತ್ತಲೇ ಇದೆ. ಐಫೋನ್​ನಲ್ಲಿರುವ ಫ್ಯೂಚರ್​ಗಳು ಗ್ರಾಹಕರನ್ನ ಆಕರ್ಷಿಸುತ್ತಿವೆ ಹೀಗಾಗಿ ಎಷ್ಟೇ ಬೆಲೆ ಇದ್ದರೂ ಅದನ್ನು ಕೊಂಡುಕೊಳ್ಳುತ್ತಿದ್ದಾರೆ. ಒಂದು ಐಫೋನ್​ನ ಸರಾಸರಿ ಬೆಲೆಯ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಸುಮಾರು 20 ಪರ್ಸೆಂಟ್​​ನಷ್ಟು ಹೆಚ್ಚಾಗುತ್ತಲೇ ಇದೆ.
ಕಳೆದ ಐದು ವರ್ಷದ ಹಿಂದೆ ಅಮೆರಿಕಾದ ಕಂಪೆನಿಯ Exxon Mobil ಅನ್ನೋ ಮೊಬೈಲ್ ಹೆಚ್ಚು ವ್ಯಾಲ್ಯೂ ಹೊಂದಿತ್ತು. ಇದೀಗ ಅದರ ವ್ಯಾಲ್ಯೂ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಆ್ಯಪಲ್ ಕಂಪೆನಿಯ ಮೊಬೈಲ್ ಮುಂದೆ ಎಂಥ ಬೆಲೆಬಾಳುವ ಫೋನ್​ಗಳು ಕೂಡ ಬಚ್ಚಾ ಆಗಿವೆ. ಜಾಬ್ಸ್​ ಇಲ್ಲದೇ ಕಾರ್ಪೊರೇಟ್​ ಸಾಮ್ರಾಜ್ಯದ ಮೇಲೆ ಆ್ಯಪಲ್ ಸಂಸ್ಥೆ ಅಧಿಪತ್ಯ ಸಾಧಿಸಲು ಸಾಧ್ಯವೇ ಇರಲಿಲ್ಲ. 2011 ರಲ್ಲಿ ಸ್ಟಿವ್ ಜಾಬ್ಸ್ ಮರಣ ಹೊಂದಿದರೂ ಅವರ ದೂರದೃಷ್ಟಿ ಯೋಚನೆಗಳು ಸತ್ತಿಲ್ಲ. ಅವರ ಕೌಶಲ್ಯ ಹಾಗೂ ವಿಸನ್​ಗಳು ಮತ್ತೆ ಮತ್ತೆ ಅವರ ಅಸ್ತಿತ್ವವನ್ನ ತೋರಿಸುತ್ತಿವೆ.
ಒಟ್ಟಿನಲ್ಲಿ ಈ ದಿನ ಸ್ಕೈ ಈಸ್ ದಿ ಲಿಮಿಟ್ ಅನ್ನೋ ವಾಕ್ಯಕ್ಕೆ  ಹೊಂದುವ ಹಾಗೆ ಬದುಕಿದ್ದ ಸ್ಟೀವ್​ ಜಾಬ್ಸ್​​​ಗೊಂದು ಸಲಾಮ್ ಹೇಳಿದ್ರೆ ತಪ್ಪೇನು ಆಗಲ್ಲ.. ಅಲ್ವಾ.?!
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *