ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ದೊಡ್ಡ ಪ್ರಮಾಣದ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಡಿಎಫ್ಸಿ ಬ್ಯಾಂಕ್ನ ಐವರು ಉದ್ಯೋಗಿಗಳನ್ನು ಆರ್ಥಿಕ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗದ ಆರ್ಥಿಕ ಅಪರಾಧಗಳ ವಿಭಾಗ ಬುಧವಾರ ಶೋಪಿಯಾನ್ ಮತ್ತು ಬುಡ್ಗಾಮ್ ಜಿಲ್ಲೆಗಳಲ್ಲಿ ಶೋಧ ನಡೆಸಿದೆ. ಲಿಖಿತ ದೂರಿನ ಆಧಾರದಿಂದ ಶಾಖೆಯಲ್ಲಿ ನಡೆದ ಹಣಕಾಸು ವಂಚನೆ ಬೆಳಕಿಗೆ ಬಂದಿತ್ತು. ಈ ಕುರಿತು ಮಾಹಿತಿ ನೀಡಿರುವ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು, ಪ್ರಕರಣದಲ್ಲಿ ವಸ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಶೋಪಿಯಾನ್ ಮತ್ತು ಬುಡ್ಗಾಮ್‌ನ ಅನೇಕ ಸ್ಥಳಗಳಲ್ಲಿ ಪ್ರಸ್ತುತ ಶೋಧಗಳು ನಡೆಯುತ್ತಿವೆ. ಬಂಧಿತರನ್ನು ಆದಿಲ್ ಅಯೂಬ್ ಗನೈ, ಇರ್ಫಾನ್ ಮಜೀದ್ ಜರ್ಗರ್, ಮುಬಾಶಿರ್ ಹುಸೇನ್ ಶೇಖ್, ಜೈದ್ ಮಂಜೂರ್ ಹಾಗೂ ಜಾವೈದ್ ಅಹ್ಮದ್ ಭಟ್ ಎಂದು ಹೇಳಿದ್ದಾರೆ (ಏಜೆನ್ಸೀಸ್).
bigtvnews | Hubli Dharwad News | Kannada News | Karnataka News Hubli News | News In Hubli | Local news

