Breaking News

ಬೆಂಗಳೂರು

ಇಂದು ಅಮಿತ್ ಶಾ ರೋಡ್ ಶೋ..

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಇಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪದ್ಮನಾಭನಗರ ಕ್ಷೇತ್ರದಲ್ಲಿ ರೋಡ್ ಶೋ ನಡೆಯಲಿದೆ.ಸಂಜೆ 6 ಗಂಟೆಗೆ ಆರಂಭವಾಗಲಿರುವ ರೋಡ್ ಶೋನಲ್ಲಿ ಅಮಿತ್ ಶಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತಯಾಚನೆ ಮಾಡಲಿದ್ದಾರೆ. ಆರ್.ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ, ರವಿಸುಬ್ರಮಣ್ಯ, ಉದಯ್ ಗರುಡಾಚಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಅಮಿತ್ …

Read More »

ಮೇ.1 ರಿಂದ ಸರ್ಕಾರಿ ಕಚೇರಿಗಳಲ್ಲಿ ಈ ನಿಯಮ ಕಡ್ಡಾಯ…

ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಮೇ. 1 ರಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.ಸರ್ಕಾರಿ ಕಚೇರಿಗಳಲ್ಲಿ ನೌಕರರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಕೆಲ ನೌಕರರು ಕೆಲಸಕ್ಕೆ ತಡವಾಗಿ ಆಗಮಿಸಿ, ಬೇಗ ಕಚೇರಿಯಿಂದ ಹೋಗುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ.2013 ರಲ್ಲೇ …

Read More »

ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ,

ಬೆಂಗಳೂರು: ವಾಟ್ಸ್​ಆ್ಯಪ್​​ ಫಾರ್ವರ್ಡ್​ ಮೆಸೇಜ್​ಗಳು ಹೇಗೆ ಸಮಾಜವನ್ನ ಹಾಗೂ ಸಮಾಜದ ಜನರನ್ನು ತಲ್ಲಣಗೊಳಿಸುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಬರೊಬ್ಬರಿ ನಾಲ್ಕು ವರ್ಷದ ಹಿಂದಿನ ವಾಟ್ಸ್​ಆ್ಯಪ್​​ ಸಂದೇಶವೊಂದು ಮರಳಿ ಹರೆದಾಡುವ ಮೂಲಕ ಬೆಂಗಳೂರಿನ ಕುಟುಂಬವನ್ನು ಇಂಡಿಹಿಪ್ಪೆ ಮಾಡಿ ಹಾಕಿದೆ ಎಂದರೆ ನಂಬಲೇಬೇಕು. ‘‘ಚಿಕ್ಕ ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ. ತಲೆಗೆ ಗಂಭೀರ ಗಾಯವಾಗಿದೆ. ಆತನ ಪೋಷಕರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ …

Read More »

ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಭಗ್ನ ಪ್ರೇಮಿಯಾಗಿ ಸೈಕೋ ಆಗಿದ್ದ ಇಂಜಿನಿಯರ್​ ವಿದ್ಯಾರ್ಥಿ ಬೈಕ್​ ಕಳವು ಮಾಡುತ್ತಿದ್ದಾಗ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ನಾಗರಬಾವಿ ನಿವಾಸಿಯಾಗಿರುವ ಶರತ್ ಬಂಧಿತ. ಈತನನ್ನು ಬಂಧಿಸಿದ ಪೊಲೀಸರು ರಾಯಲ್ ಎನ್​ಫೀಲ್ಡ್​ ಸೇರಿ ಒಟ್ಟು 9 ಲಕ್ಷ ರೂ.ಮೌಲ್ಯದ 10 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಒಂದು ಕಂಟ್ರಿಮೇಡ್ ಪಿಸ್ತೂಲ್​ ಕೂಡ ಜಪ್ತಿ ಮಾಡಿದ್ದಾರೆ.

Read More »