BigTv News
July 25, 2023
ಕರ್ನಾಟಕ, ಬೀದರ್, ಸುದ್ದಿ
ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಎಂದು ಭೇಟಿ ನೀಡಿದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆವರಣದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸಾರ್ವಜನಿಕರ ದೂರಿನ ಅನ್ವಯ ದಿಢೀರ್ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದ ಇಡೀ ಬಸ್ ನಿಲ್ದಾಣ ಕೆಟ್ಟ ವಾಸನೆಯಿಂದ ಕೂಡಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದನ್ನು ಹಾಗೂ ನಿಲ್ದಾಣ ಸ್ವಚ್ಛತೆ ಇಲ್ಲದೇ ಇರುವುದನ್ನು ಅವರು …
Read More »
BigTv News
July 24, 2023
News, ಕರ್ನಾಟಕ, ಜಿಲ್ಲೆ, ಬೀದರ್, ಸುದ್ದಿ
ಬೀದರ್,ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಮಳೆಗೆ 5 ಮನೆಗಳ ಗೋಡೆ ಕುಸಿದಿವೆ ಎಂದು ತಹಶೀಲ್ದಾರ್ ಅಂಜುಂ ಲಸ್ಕರ್ ತಿಳಿಸಿದರು. ತಾಲ್ಲೂಕಿನ ಸೀತಾಳಗೇರಾ ಗ್ರಾಮ ಸೇರಿದಂತೆ ಒಟ್ಟು ಐದು ಮನೆಗಳ ಗೋಡೆ ಕುಸಿದಿವೆ. ಶನಿವಾರ ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು. ಹುಮನಾಬಾದ್ ಪಟ್ಟಣದಲ್ಲಿ 14 ಮಿ.ಮೀ, ದುಬಲಗುಂಡಿಯಲ್ಲಿ 6 ಮಿ.ಮೀ. ಹಳ್ಳಿಖೇಡ್ ಬಿ. ಪಟ್ಟಣದಲ್ಲಿ 14.2 ಮಿ.ಮೀ ಮಳೆ ದಾಖಲಾಗಿದೆ.
Read More »
BigTv News
July 24, 2023
News, ಕರ್ನಾಟಕ, ಜಿಲ್ಲೆ, ಬೀದರ್
ಬೀದರ್ : ಔರಾದ್ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಓದಿಗಾಗಿ ಶನಿವಾರ ತಮ್ಮ ಕಛೇರಿಯಲ್ಲಿ ಶಾಲಾ ಶಿಕ್ಷಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮ ಕಥನ ಅಗ್ನಿಯ ರೆಕ್ಕೆಗಳು ಪುಸ್ತಕದ ೪ ಪ್ರತಿಗಳು ನೀಡಿದರು. ಎಕಲಾರ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಮಾಡಿರುವ ಕಲಿಕಾ ಪೂರಕ ಕೆಲಸಗಳು ಕಂಡು ಜೂನ್ ೧ ರಂದು ಶಾಲೆಗೆ ಭೇಟಿ …
Read More »
BigTv News
June 25, 2023
News, ಕರ್ನಾಟಕ, ಜಿಲ್ಲೆ, ಬೀದರ್, ಸುದ್ದಿ
ಬೀದರ್ ನಿಂದ ಮಹಾರಾಷ್ಟ್ರಕ್ಕೆ ಸ್ವಿಫ್ಟ್ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಗಾಂಜಾಕೋರರ ಹೆಡೆಮುರಿ ಕಟ್ಟುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಜಾ ಜಪ್ತಿ ಜೊತೆಗೆ ಒಂದು ಕಾರು, 3 ಮೊಬೈಲ್, ಹಾಗೂ 15 ಸಾವಿರ ನಗದು ಜಪ್ತಿ ಮಾಡಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ತೆಲಂಗಾಣದಿಂದ ಬೀದರದ ಮೂಲಕ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದ ಗಾಂಜಾಕೋರರು. ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಎನ್‌ಡಿಪಿಎಸ್ …
Read More »
BigTv News
November 5, 2022
Breaking News, ಬೀದರ್
ಬೀದರ್ : ಸರ್ಕಾರಿ ಶಾಲೆ ಹತ್ತಿರ ನಿನ್ನೆ ಟಿಪ್ಪರ್ ಮತ್ತು ಆಟೊ ನಡುವೆ ಭೀಕರ ಅಪಘಾತ ಆಟೊದಲ್ಲಿದ್ದ ಏಳು ಮಹಿಳೆಯರು ಮೃತಪಟ್ಟ ಘಟನೆ ಬೀದರ್ನಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿ ಚಿಟಗುಪ್ಪ ತಾಲ್ಲೂಕಿನ ಉಡುಬನಳ್ಳಿ ಗ್ರಾಮದ ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಷ್ಮಿತ (40), ಗುಂಡಮ್ಮಾ ನರಸಿಂಗ (60), ಜಗಮ್ಮಾ ಪ್ರಭು (34), ರುಕ್ಮಿಣಿಬಾಯಿ ಅಮೃತ (60), ಈಶ್ವರಮ್ಮ ಬಕ್ಕಪ್ಪ (55) ಪಾರ್ವತಿ ಮಾರುತಿ (42) ಮೃತರು. ಎಲ್ಲರೂ ಕೃಷಿ ಕಾರ್ಮಿಕರಾಗಿದ್ದು, …
Read More »
BigTv News
November 4, 2022
Breaking News, ಬೀದರ್
ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುವುದಾಗಿ ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಹೀಂ ಖಾನ್ ಅವರು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ಬೀದರ್ ಉತ್ತರ ಕ್ಷೇತ್ರ ತ್ಯಾಗ ಮಾಡಲು ಸಿದ್ಧವಾಗಿದ್ದು, ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದಾರೆ. ಬೀದರ್ …
Read More »
BigTv News
October 18, 2022
Breaking News, ಬೀದರ್
ಬೀದರ್ :ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಮುಂದಿನ ಬಜೆಟ್ನಲ್ಲಿ 5 ಸಾವಿರಕೋಟಿ ರೂ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ . ಬೀದರ್ ಜಿಲ್ಲೆಯ ಔರಾದ್ ನಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಮುಂದಿನ ಬಜೆಟ್ ನಲ್ಲಿ 5 ಸಾವಿರ ಕೋಟಿ ರೂ ನೀಡಲಿದ್ದೇನೆ, ನಾವು ಅಧಿಕಾರಕ್ಕೆ ಬಂದ ಮೇಲೆ ಗರಿಷ್ಟ 3 ಸಾವಿರ ಕೋಟಿ ನೀಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ …
Read More »
BigTv News
September 14, 2022
Breaking News, ಬೀದರ್
ಬೀದರ್: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಮಾಜಿ ಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು. ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನಸಾಗರವನ್ನು ಕಂಡು ಬಿಜೆಪಿಗೆ ನಡುಕ ಉಂಟಾಗಿದೆ. ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಭೀತಿಯಿಂದ ಸಚಿವರು ಅವರ ವಿರುದ್ಧ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ತಾಕತ್ತಿದ್ದರೆ ನಮ್ಮ ಗೆಲುವು …
Read More »
admin
June 6, 2022
Breaking News, ಜಿಲ್ಲೆ, ಬೀದರ್
ಬೀದರ್ : ನಾಡಗೀತೆ ಮೊಟಕುಗೊಳಿಸುವ ಕುರಿತಂತೆ ರಾಜ್ಯ ಸರ್ಕಾರ ಒಂದು ವಾರದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ಕುಮಾರ್ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ವಿ.ಸುನಿಲ್ ಕುಮಾರ್, ನಾಡಗೀತಿಯ ಧಾಟಿ ಹಾಗೂ ಮೊಟಕುಗೊಳಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಈ ಕುರಿತ ಗೊಂದಲಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
Read More »
BigTv News
June 2, 2022
Breaking News, ಬೀದರ್
ಬೀದರ್: ಪಠ್ಯಪುಸ್ತಕ ರಚನಾ ಸಮಿತಿಯು ಬದಲಾಯಿಸಿರುವ ಪಠ್ಯ ಕುರಿತು ಅನೇಕ ಆಕ್ಷೇಪಗಳಿವೆ. ಅದರಲ್ಲಿಯೂ ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ಇತಿಹಾಸ ತಿರುಚಿರುವುದು ಅಕ್ಷಮ್ಯ. ಅದು ಬಸವಾದಿ ಶರಣರಿಗೆ ಮತ್ತು ಲಿಂಗಾಯತ ಧರ್ಮಕ್ಕೆ ಎಸಗಿದ ಅಪಚಾರ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಖಂಡಿಸಿದ್ದಾರೆ. 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರ ಪುಟ 27-28 ರಲ್ಲಿ ಬಸವಣ್ಣನವರ ಜೀವನ ಮತ್ತು ಸಾಧನೆ ಕುರಿತ ಪಾಠವಿದ್ದು, ಹಳೆಯ ಪಠ್ಯದಲ್ಲಿನ ಕೆಲವೂ …
Read More »