ಬೀದರ್: ಪಠ್ಯಪುಸ್ತಕ ರಚನಾ ಸಮಿತಿಯು ಬದಲಾಯಿಸಿರುವ ಪಠ್ಯ ಕುರಿತು ಅನೇಕ ಆಕ್ಷೇಪಗಳಿವೆ. ಅದರಲ್ಲಿಯೂ ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರ ಇತಿಹಾಸ ತಿರುಚಿರುವುದು ಅಕ್ಷಮ್ಯ. ಅದು ಬಸವಾದಿ ಶರಣರಿಗೆ ಮತ್ತು ಲಿಂಗಾಯತ ಧರ್ಮಕ್ಕೆ ಎಸಗಿದ ಅಪಚಾರ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಖಂಡಿಸಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರ ಪುಟ 27-28 ರಲ್ಲಿ ಬಸವಣ್ಣನವರ ಜೀವನ ಮತ್ತು ಸಾಧನೆ ಕುರಿತ ಪಾಠವಿದ್ದು, ಹಳೆಯ ಪಠ್ಯದಲ್ಲಿನ ಕೆಲವೂ ಪ್ರಮುಖವಾದ ಸಾಲುಗಳನ್ನು ತೆಗೆದು, ಸತ್ಯವನ್ನು ತಿರುಚಿ ಬರೆದಿರುವುದು ಬಸವತತ್ವದ ಅನುಯಾಯಿಗಳಿಗೆ ತುಂಬಾ ನೋವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

