Breaking News

ನಟಿ ಪಾಯಲ್ ಮುಖರ್ಜಿ ಮೇಲೆ ದುಷ್ಕರ್ಮಿಗಳು ಹಲ್ಲೆ

ಕೋಲ್ಕತ್ತಾ: ಬಂಗಾಳಿ ನಟಿ ಪಾಯಲ್ ಮುಖರ್ಜಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಕೋಲ್ಕತ್ತಾದ ಸದರ್ನ್ ಅವೆನ್ಯೂ ಪ್ರದೇಶದಲ್ಲಿ ನಡೆದಿದೆ.

ನಡೆದಿದೆ. ಶುಕ್ರವಾರದಂದು ಕಾರಿನಲ್ಲಿ ಸಂಚರಿಸುವ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮೃಗೀಯ ರೀತಿ ವರ್ತಿಸಿದ್ದಾರೆ. ಸದ್ಯ ಈ ಘಟನೆಯಿಂದ ನೊಂದ ನಟಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದುಷ್ಕರ್ಮಿಗಳು ಕಾರಿನ ಗಾಜನ್ನು ಒಡೆದಿದ್ದಾರೆ. ನಟಿ ವಿಡಿಯೋದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಡ್ಯಾಮೇಜ್ ಆದ ಕಾರಿನ ದೃಶ್ಯವನ್ನು ತೋರಿಸಿದ್ದಾಳೆ. ಜೊತೆಗೆ ಅವರ ವರ್ತನೆಯ ಬಗ್ಗೆಯೂ ವಿವರಿಸಿದ್ದಾಳೆ. ದುಷ್ಕರ್ಮಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ವಿಡಿಯೋದಲ್ಲಿ ಒತ್ತಾಯಿಸಿದ್ದಾಳೆ.

ನಟಿ ಪಾಯಲ್ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕರು ಈ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಸುರಕ್ಷತಾ ಕಡಿಮೆ ಇದೆ ಎಂದು ಕಿಡಿಕಾರಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *