Breaking News

ಬಸ್‌ ಹತ್ತುತ್ತಿದ್ದಾಗ ಚಿನ್ನಾಭರಣ ಬ್ಯಾಗ್ ಕಳ್ಳತನ

ಮೂಡಲಗಿ : ಬಸ್‌ ಹತ್ತುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರು ಸದ್ಯದ ಬೆಲೆ ಪ್ರಕಾರ 9.30 ಲಕ್ಷ ರೂ. ಮೌಲ್ಯದ 7 ತೊಲಿ ತೂಕದ ಚಿನ್ನಾಭರಣ ದೋಚಿದ ಘಟನೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ರವಿವಾರ ನಡೆದಿದೆ.ಮೂಡಲಗಿ ಪಟ್ಟಣದ ಮಂಜುಳಾ ಮಪ್ಪಲ್ಲ ಗಾಣಿಗೇರ (39) ಎಂಬುವರ ಚಿನ್ನಾಭರಣ ದೋಚಿರುವುದು, ಇವರು ಪಟ್ಟಣದ ಬಸ್ ನಿಲ್ದಾಣದಲ್ಲಿ ಗೋಕಾಕ -ಜಮಖಂಡಿ ಬಸ್ ಹತ್ತುವ ಅಂಕಣದಲ್ಲಿ ನಿಂತು ಬಸ್ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ ಎಂದು ಎನ್ನಲಾಗಿದೆ.ಬಸ್ ಒಳಗೆ ಹೋಗಿದ ತಕ್ಷಣ ಬ್ಯಾಗ್ ಓಪನ್ ಆಗಿರುವುದನ್ನು ನೋಡಿದ ಮಂಜುಳಾ ಜೋರಾಗಿ ಕೂಗಿ ಕೊಡಿದ್ದಾಳೆ. ಕೂಡಲೇ ಬಸ್ ಚಾಲಕ ಮತ್ತೇ ಬಸ್ ನಿಲ್ದಾಣಕ್ಕೆ ವಾಪಾಸ ಬಂದು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ್ ಪೊಲೀಸ್ ಅಧಿಕಾರಿಗಳು ಠಾಣೆಗೆ ಪ್ರಯಾಣಿಕರ ಸಮೇತ ಬಸ್ ನನ್ನು ಪೊಲೀಸ್ ಠಾಣಾ ಆವರಣದಲ್ಲಿ ತಂದು ತಪಾಸಣೆ ಮಾಡಿದರು ಪತ್ತೆಯಾಗಿಲ್ಲ. ಈ ಕುರಿತು ಇನ್ನೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *