Breaking News

ನವದೆಹಲಿ ವಿಧಾನಸಭಾ ಕ್ಷೇತ್ರದ ಯೋಜನೆಗಳಿಗೆ ₹7 ಕೋಟಿ ಮಂಜೂರು

ನವದೆಹಲಿ: ನ್ಯಾಯಾಂಗ ಬಂಧನದಲ್ಲಿ ಇರುವ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ತಮ್ಮ ನವದೆಹಲಿ ವಿಧಾನಸಭಾ ಕ್ಷೇತ್ರದ ಯೋಜನೆಗಳಿಗೆ ₹7 ಕೋಟಿ ಮಂಜೂರು ಮಾಡಿದ್ದಾರೆ.

‘ಜೈಲಿನಲ್ಲಿ ಇದ್ದರೂ ದೆಹಲಿ ನಾಗರಿಕರ ಬಗೆಗೆ ಅವರಿಗೆ ಕಾಳಜಿ ಇದೆ ಎನ್ನುವುದನ್ನು ಅವರ ಈ ನಡೆ ಸ್ಪಷ್ಟಪಡಿಸುತ್ತದೆ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆಯು ತಿಳಿಸಿದೆ.ಹಣ ಮಂಜೂರು ಮಾಡಿರುವ ಸಂಗತಿಯನ್ನೂ ಈ ಪ್ರಕಟಣೆ ಸ್ಪಷ್ಟಪಡಿಸಿದೆ.

ಗ್ರಂಥಾಲಯ ಸ್ಥಾಪನೆ, ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ, ಒಳಾಂಗಣ-ಹೊರಾಂಗಣ ಜಿಮ್‌ಗಳಿಗೆ ಬೇಕಾದ ಪರಿಕರಗಳನ್ನು ಒದಗಿಸುವುದು, ಬೀದಿದೀಪಗಳ ಅಳವಡಿಕೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ₹7 ಕೋಟಿ ವಿನಿಯೋಗಿಸಲಾಗುವುದು ಎಂದೂ ಪ್ರಕಟಣೆ ಹೇಳಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *