ನವಲಗುಂದ: ಪಿಎಸ್‌ಐ ಜನಾರ್ಧನ ಭಟ್ರಳ್ಳಿ ನೇತೃತ್ವದ ತಂಡ ಪಟ್ಟಣದ ಹೊರವಲಯದ ಜಮೀನನಲ್ಲಿರುವ ಶೆಡನಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ವೇಳೆ ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿ 60.290 ರೂ ಕಿಮ್ಮತ್ತಿನ ವಿವಿದ ಬ್ರಾಂಡಗಳ ಒಟ್ಟು 147 ಲೀಟರ್ ಮದ್ಯವನ್ನು ವಶಪಡೆಸಿಕೊಂಡಿದ್ದಾರೆ.
ಯಾವುದೇ ಪಾಸ್ ಪರ್ಮಿಟ ಇಲ್ಲದೇ ಸಾರ್ವಜನೀಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟುಕೊಂಡಿದ್ದ ಅರ್ಜುನ ತಂದೆ ಹನಮಂತಪ್ಪ ಮರಿನಾಯ್ಕರನನ್ನು ಬಂಧಿಸಿದ್ದಾರೆ.ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

