Breaking News

ಪೆರ್ಮುದೆಯ ಮನೆಯಿಂದ 1ಕೆ.ಜಿ. ಚಿನ್ನಾಭರಣ ಕಳವು

ಬಜಪೆ: ಪೆರ್ಮುದೆ ಪೇಟೆಯ ರಾಜ್ಯ ಹೆದ್ದಾರಿ 67ರ ಪಕ್ಕದಲ್ಲಿರುವ ಜಾನ್ವಿನ್‌ ಪಿಂಟೋ ಅವರ ಮನೆ ಕಿಟಿಕಿಯ ಸರಳನ್ನು ಮುರಿದು ಒಳ ಪ್ರವೇಶಿಸಿ ಕಳ್ಳರು ಲಾಕರ್‌ನಲ್ಲಿದ್ದ 1ಕೆ.ಜಿ. ಚಿನ್ನಾಭರಣ ಕಳವು ಮಾಡಿದ ಘಟನೆಗೆ ವರ್ಷ ಪೂರ್ತಿಯಾದರೂ ( ಮಾ.31) ಕಳ್ಳರು, ಸೊತ್ತು ಪತ್ತೆಯಾಗದೆ ಪೊಲೀಸರಿಗೆ ಸವಾಲಾಗಿಯೇ ಉಳಿದಿದೆ.ಪ್ರಕರಣದ ಪತ್ತೆಗಾಗಿ ಸಿಸಿಬಿ, ಎಸಿಪಿ ಹಾಗೂ ಬಜಪೆ ಕ್ರೈಂ ತಂಡಗಳು ರಚನೆಯಾಗಿತ್ತು. ಪರಿಸರದಲ್ಲಿನ ಸಿಸಿ ಕೆಮರಾಗಳಲ್ಲಿ ದಾಖಲಾಗಿರುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿ ಕಳವಿಗೆ ಸಂಬಂಧಿಸಿದ ವಾಹನ, ಮನೆಯ 8 ಸಾಕು ನಾಯಿಯ ಆರೈಕೆ ಮಾಡುವವರ ಹಾಗೂ ಅವರ ಪರಿಚಯಸ್ಥರ ಬಗ್ಗೆ ಹಾಗೂ 16 ಸಿಸಿ ಕೆಮರಾಗಳಲ್ಲಿ ಸಿಕ್ಕಿರುವ ಮಾಹಿತಿಗಳನ್ನು ಸಂಗ್ರಹಿಸಿ ತಾಳೆ ಹಾಕಹಾಕಿ ನೋಡಿದರೂ ಕಳ್ಳರು ಈ ತನಕ ತಲೆಮರೆಸಿಕೊಂಡು ತಿರುಗಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಿಂದ ಆಭರಣ ಕಳವಾದ ಸಮಯದಲ್ಲಿ ವಿದೇಶದಲ್ಲಿದ್ದ ಮನೆಯವರು ಪೆರ್ಮುದೆಗೆ ಬಂದು ಹಲವಾರು ದಿನಗಳಿದ್ದ ವೇಳೆ ಪೊಲೀಸರು ಅವರಿಂದಲೂ ಪೂರಕ ಮಾಹಿತಿಯನ್ನು ಸಂಗ್ರಹಿಸಿದ್ದರು. ಇದನ್ನು ಆಧರಿಸಿಯೂ ಕೂಡ ಪೊಲೀಸರು ಪತ್ತೆ ಕಾರ್ಯ ನಡೆಸಿದ್ದರು. ಶೋಧ ಕಾರ್ಯದಲ್ಲಿ ಆಗ ಯಾವುದೇ ಪ್ರಗತಿ ಕಾಣದ ಕಾರಣ ಮನೆಯವರು ಮತ್ತೆ ಮರಳಿ ವಿದೇಶಕ್ಕೆ ತೆರಳಿದ್ದರು. ಕಳ್ಳರ ಪತ್ತೆ ಕಾರ್ಯದಲ್ಲಿ ಈಗಾಗಲೇ ರಚನೆಯಾಗಿರುವ ತಂಡದ ಪ್ರಯತ್ನ ಮುಂದುವರಿದಿದೆ. ಕಳ್ಳರನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್‌ ಮೂಲವು ತಿಳಿಸಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *