Breaking News

ಬ್ರಿಜೇಶ್ ಚೌಟರ ನೇತೃತ್ವದಲ್ಲಿ ರಹಸ್ಯ ಸಭೆ

ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ರಹಸ್ಯ ಸಭೆ ನಡೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿ ಪಾಳಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯ ಜತೆಗೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿಯೇ ಈ ಗೌಪ್ಯ ಸಭೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನಡುವೆ ಸಂಸದರು ದಿಢೀ‌ರ್ ಪಕ್ಷದ ಪುತ್ತೂರು ಕಚೇರಿಗೆ ಆಗಮಿಸಿದ್ದರು. ಸಂಸದರ ಆಗಮನದ ಬಗ್ಗೆ ಬಿಜೆಪಿಯ ಅಧಿಕೃತ ಮಾಧ್ಯಮ ಗ್ರೂಪ್‌ನಲ್ಲಿ ಆಹ್ವಾನ ನೀಡಿದ್ದರಿಂದ ಪತ್ರಕರ್ತರು ಆಗಮಿಸಿದ್ದರು. ಸಭೆ ಆರಂಭಗೊಂಡ ಸಂದರ್ಭದಲ್ಲಿ ಸಂಸದರು ಪತ್ರಕರ್ತರುದ್ದೇಶಿಸಿ, ಇದು ಖಾಸಗಿ ಸಭೆಯಾಗಿದ್ದು ಸಭೆಯಿಂದ ನಿರ್ಗಮಿಸುವಂತೆ ವಿನಂತಿಸಿದರು.

ಸಭೆಯಲ್ಲಿ ಈ ಹಿಂದೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡು ಬಿಜೆಪಿ ಸೇರ್ಪಡೆ ‘ಯಾದವರು ಹಾಗೂ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ವಿಟ್ಲ ಭಾಗದ ಕೆಲವು ಮುಖಂಡರೂ ಇದ್ದರು. ಪತ್ರಕರ್ತರು ಹೊರ ಹೋದ ಬಳಿಕ ಸಂಸದರು ಭಾಷಣ ಆರಂಭಿಸಿದ್ದರು ಎಂದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *