Breaking News

ಮನೆ ಗೋಡೆ ಕುಸಿದು‌ ಮಹಿಳೆ ಸಾವು

ಶ್ರೀರಂಗಪಟ್ಟಣ: ಮನೆಯೊಂದರ ಗೋಡೆ ಕುಸಿದು‌ ಮಹಿಳೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ನೆಲಮನೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎನ್.ಸಿ. ರಾಜಕುಮಾರ್ ಅವರ ಪತ್ನಿ ಶಾಂತಮ್ಮ (45) ಮೃತಪಟ್ಟಿದ್ದಾರೆ. ಗ್ರಾಮದ ಬಳಿ ಹರಿಯುವ ವಿಶ್ವೇಶ್ವರಯ್ಯ ವಿತರಣಾ ನಾಲೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಶಾಂತಮ್ಮ ಅವರ ಮೇಲೆ 6 ಅಡಿ ಎತ್ತರದ, 20 ಅಡಿ ಉದ್ದದ ಗೋಡೆ ದಿಢೀರ್ ಕುಸಿದಿದೆ ಶಾಂತಮ್ಮ ಗೋಡೆಯ ಅವಶೇಷಗಳ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಬು ಎಂಬುವರ ಮನೆಯ ಗೋಡೆ ಕುಸಿದು ಈ ಅವಘಡ ಸಂಭವಿಸಿದೆ ಸ್ಥಳಕ್ಕೆ ಕಂದಾಯ ನಿರೀಕ್ಷಕ ಭಾಸ್ಕರ್, ಗ್ರಾಮಾಡಳಿತ ಅಧಿಕಾರಿ ಸುಹಾಸ್ ಭೇಟಿ ನೀಡಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *