Breaking News

ಆರ್ಥಿಕ ಕುಸಿತದಿಂದ ತತ್ತರಿಸಿದ್ದ ಬಾಂಗ್ಲಾದೇಶ: ನೆರವಿಗೆ ಧಾವಿಸಿದ ಭಾರತ

ನವದೆಹಲಿ: ಆಂತರಿಕ ಪ್ರತಿಭಟನೆ, ಸರ್ಕಾರ ಬದಲಾವಣೆಯಿಂದ ಆರ್ಥಿಕ ಕುಸಿತದಿಂದ ತತ್ತರಿಸಿ ಹೋಗಿದ್ದ ಬಾಂಗ್ಲಾದೇಶದ ನೆರವಿಗೂ ಕೊನೆಗೂ ಭಾರತ ಧಾವಿಸಿದ್ದು, ಉಭಯ ದೇಶಗಳ ನಡುವೆ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟು ಪುನಾರಂಭಗೊಂಡಿದೆ.
ಹಿಂಸಾಚಾರದಿಂದಾಗಿ 47 ದಿನಗಳ ಅನಿಶ್ಚಿತತೆಯ ನಂತರ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಬೆನಾಪೋಲ್ ಬಂದಿರನ ಮೂಲಕ ವ್ಯಾಪಾರ ಪುನರಾರಂಭವಾಗಿದ್ದು, ಸರಬರಾಜು ಕೊರತೆ, ಹೆಚ್ಚಿನ ಹಣದುಬ್ಬರ ಮತ್ತು ಜೀವನೋಪಾಯ ನಷ್ಟದಿಂದಾಗಿ ತತ್ತರಿಸಿ ಹೋಗಿದ್ದ ಬಾಂಗ್ಲಾದೇಶದ ವ್ಯಾಪಾರಿಗಳು ಭಾರತದ ಈ ಕ್ರಮವನ್ನು ಸ್ವಾಗತಿಸಿದ್ದಾರೆ ಎಂದು ಢಾಕಾದ ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದೊಂದಿಗಿನ ವ್ಯಾಪಾರದ ಪುನರಾರಂಭದ ಕುರಿತು ಯಾವುದೇ ಅಧಿಕೃತ ಮಾಹಿತಿ ಭಾರತ ಸರ್ಕಾರದಿಂದ ಇನ್ನೂ ಬಂದಿಲ್ಲ. ಆದರೆ ಬಾಂಗ್ಲಾದೇಶವು ಹೊಸ ಸರ್ಕಾರದೊಂದಿಗೆ ಬದಲಾವಣೆಗೆ ಒಳಗಾಗುತ್ತಿದ್ದು, ಮಾಲ್ಡೀವ್ಸ್‌ನಂತೆಯೇ ಭಾರತದೊಂದಿಗಿನ ಅದರ ಸಂಬಂಧವು ಸಮಯದೊಂದಿಗೆ ಫಲಪ್ರದವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇತ್ತೀಚೆಗೆ ಹೇಳಿದ್ದರು.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ನೇತೃತ್ವದ ಯೋಜನೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ. ಬಾಂಗ್ಲಾದೇಶದ ಮೂಲಗಳು ಇದು ದೀರ್ಘಾವಧಿಯ ಬೆಳವಣಿಗೆಯಾಗಿರಬಹುದು ಎಂದು ಹೇಳಿದರೆ, ಸರಿಯಾದ ಸಮಯದಲ್ಲಿ ಅವು ಪುನರಾರಂಭಗೊಳ್ಳುತ್ತವೆ ಎಂಬ ಆಶಾವಾದವನ್ನು ಭಾರತ ಹೊಂದಿದೆ. ಬಾಂಗ್ಲಾದೇಶದಲ್ಲಿ ಆರ್ಥಿಕ ಹಿನ್ನಡೆ ಉಂಟಾಗಿದ್ದು, ವೇತನ ಹೆಚ್ಚಳಕ್ಕಾಗಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಇದು ಹಲವು ಕೈಗಾರಿಕೆಗಳನ್ನು ಮುಚ್ಚಲು ಕಾರಣವಾಗಿದೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *