Breaking News

ಆರೋಗ್ಯ ವಿಮೆ: ಶೇ.‌18 ರಷ್ಟು ಜಿ ಎಸ್ ಟಿಯನ್ನು ಮರುಪರಿಶೀಲಿಸಲು ಪ್ರಧಾನಿಗೆ ಪತ್ರ

ಬೆಂಗಳೂರು: ಆರೋಗ್ಯ ವಿಮೆಯ ಮೇಲಿನ ಶೇ 18 ರಷ್ಟು ಜಿ.ಎಸ್.ಟಿಯನ್ನ ಮರು ಪರಿಶೀಲಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 9 ರಂದು ಸಭೆ ಸೇರಲಿರುವ GST ಕೌನ್ಸಿಲ್‌ಗೆ ಮಧ್ಯಮ ಮತ್ತು ಕಡಿಮೆ ಆದಾಯದ ಪಾಲಿಸಿದಾರರಿಗೆ ಆರೋಗ್ಯ ವಿಮೆಯ ಮೇಲಿನ 18% ತೆರಿಗೆಯನ್ನು ಮರು ಪರಿಶೀಲಿಸುವಂತೆ ಶಿಫಾರಸು ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಆರೋಗ್ಯ ವಿಮೆ ಮೇಲೂ ಶೇ 18 ರಷ್ಟು ಜಿಎಸ್.ಟಿ ತೆರಿಗೆ ಹಾಕುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಿನ ತೆರಿಗೆಯಿಂದಾಗಿ ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿಲ್ಲ ಬಹುತೇಕ ಮಧ್ಯಮ ವರ್ಗದವರು ಇಂದು ಆರೋಗ್ಯ ವಿಮೆಗಳಿಂದ ದೂರವೇ ಉಳಿಯುತ್ತಿದ್ದಾರೆ. ಆದರೆ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ಆರೋಗ್ಯ ವಿಮೆಯ ರಕ್ಷಣೆ ಸಿಗದೆ ಇಡೀ ಕುಟುಂಬ ವರ್ಗವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನ ನಾವು ಕಾಣುತ್ತಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
2017 ರಿಂದಲೂ ಆರೋಗ್ಯ ವಿಮೆಯ ಮೇಲೆ ಶೇ 18 ರಷ್ಟು ಜಿಎಸ್.ಟಿ ಹೇರಲಾಗಿದೆ GST ಯ ಹೆಚ್ಚಿನ ದರವು ಪ್ರೀಮಿಯಂಗಳ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ ಪರಿಣಾಮ ಆರೋಗ್ಯ ವಿಮೆಯು ಈಗ ಹೆಚ್ಚು ದುಬಾರಿಯಾಗಿದೆ. ಹೆಚ್ಚುತ್ತಿರುವ ವೆಚ್ಚವು ಆರ್ಥಿಕ ದುರ್ಬಲ ವರ್ಗಗಳ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ, ಅವರಿಗೆ ಪ್ರೀಮಿಯಂನಲ್ಲಿ ಸ್ವಲ್ಪ ಹೆಚ್ಚಳವಾದರೂ ಅದನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯ ವಿಮೆಗಳನ್ನ ಜನರು ತಿರಸ್ಕರಿಸುತ್ತಿದ್ದಾರೆ ವಿಮಾ ರಕ್ಷಣೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *