Breaking News

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹಾಲುಗಂಬ ಪೂಜೆ

ಹುಬ್ಬಳ್ಳಿ: ಐತಿಹಾಸಿಕ ರಾಣಿ ಚನ್ನಮ್ಮ ಮೈದಾನದಲ್ಲಿ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿರುವ ಶ್ರೀ ಗಣೇಶ ಹಬ್ಬದ ಅಂಗವಾಗಿ, ಇಂದು ರಾಣಿ ಚನ್ನಮ್ಮ ಮೈದಾನ ಗಜಾನನ ಮಹಾಮಂಡಳದಿಂದ ಹಾಲಗಂಬ ಪೂಜೆಯನ್ನು ನೆರವೇರಿಸಲಾಯಿತು.

ರಾಣಿ ಚನ್ನಮ್ಮ ಮೈದಾನದಲ್ಲಿ ಮೂರು ದಿನಗಳ ಕಾಲ ಪ್ರತಿಷ್ಠಾಪಿಸಲ್ಪಡುವ ಗಣೇಶನಿಗೆ ವಿಶೇಷ ಪೂಜೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಶಾಸಕ‌ ಮಹೇಶ್ ಟೆಂಗಿನಕಾಯಿ, ರಾಣಿ ಚನ್ನಮ್ಮ ಮೈದಾನ ಗಜಾನನ ಮಹಾಮಂಡಳದ ಅಧ್ಯಕ್ಷ ಸಂಜೀವ್ ಬಡಸ್ಕರ್, ಸ್ವಾಗತ ಸಮಿತಿ ಅಧ್ಯಕ್ಷ ವಿ.ಎಸ್.ವಿ.ಪ್ರಸಾದ್ ಅವರ ನೇತೃತ್ವದಲ್ಲಿ ಧ್ವಜ ಸ್ತಂಭಕ್ಕೆ ಪೂಜೆ ನೆರವೇರಿಸಿ ನಿರ್ವಿಘ್ನದಿಂದ ನಡೆಯಲಿ ಎಂದು ನೇತೃತ್ವದಲ್ಲಿ ಪೂಜೆ ವಿವಿಧ ವಿಧಿ – ವಿಧಾನಗಳನ್ನು ಪ್ರಾರ್ಥನೆ ಮಾಡಿದರು. ರಾಣಿ ಚನ್ನಮ್ಮ ಗಣೇಶ ವೀಕ್ಷಣೆಗೆ ಸಾವಿರಾರು ಜನ ಬರೋ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮಹಾಮಂಡಳಿ ಮುಂದಾಗಿದೆ.

ರಾಣಿ ಚನ್ನಮ್ಮ ಮೈದಾನದ ಈ ಬಾರಿಯ ಗಣಪತಿ ಹಬ್ಬವನ್ನು ಇಡೀ ರಾಜ್ಯವೇ ಇತ್ತ ತಿರುಗಿ ನೋಡುವಂತೆ ಆಚರಿಸಲು, ಮಹಾಮಂಡಳಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಭಕ್ತರು ಕೂಡ ಗಣಪತಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *