ನವದೆಹಲಿ: ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ ಪ್ರಮುಖ ಸಭೆ ನಡೆಸಿದ್ದು, ಇದರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 18 ನಿರ್ಣಾಯಕ ರಸ್ತೆ ಮೂಲಸೌಕರ್ಯ ಯೋಜನೆಗಳನ್ನು ಮೌಲ್ಯಮಾಪನ ಮಾಡಿದೆ.
ಹೊಸ ಹೆದ್ದಾರಿ ಯೋಜನೆಗಳನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಎರಡು ಹೈವೇ ಯೋಜನೆಗಳು ಕರ್ನಾಟಕಕ್ಕೆ ಬರಲಿವೆ ಎಂದು ಸಚಿವಾಲಯ ತಿಳಿಸಿದೆ, ಸಚಿವಾಲಯದ ಪ್ರಕಾರ, ಕರ್ನಾಟಕದ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹತ್ತಾರು ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಬರಲಿವೆ. ಬೆಳಗಾವಿ ವ್ಯಾಪ್ತಿಯಲ್ಲಿ 4 ಪಥದ ರಿಂಗ್ ರೋಡ್ ನಿರ್ಮಾಣವಾಗಲಿದೆ. ಇದು 75.39 ಕಿ.ಮೀ ವ್ಯಾಪಿಸಿದೆ. ಬೆಳಗಾವಿ ನಗರದ ದಟ್ಟಣೆಗೆ ಕಡಿವಾಣ ಹಾಕಲು ಭವಿಷ್ಯದ ದೃಷ್ಟಿಯಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
ಈ ಮೂಲಕ ಜನದಟ್ಟಣೆ ಕಡಿಮೆ ಮಾಡಿ, ಪ್ರಯಾಣದ ಸಮಯವನ್ನು ಉಳಿಸುವುದು ಹಾಗೂ ಕರ್ನಾಟಕದ ಕೈಗಾರಿಕಾ ಕೇಂದ್ರಗಳ ಸಂಪರ್ಕವನ್ನು ಹೆಚ್ಚಿಸಲು ಗುರಿ ಹೊಂದಿರುವುದಾಗಿ ಸಚಿವಾಲಯ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

